ಕನ್ನಡಪ್ರಭ ವಾರ್ತೆ, ಕಲಬುರಗಿ:
ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್‌ನವರು ರಾಜ್ಯದಲ್ಲಿ ಪಥ ಸಂಚಲನ ನಡೆಸಬೇಕಿದ್ದರೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಲೇ ಬೇಕು. ನಾನು ಹೋಮ್ ಮಿನಿಸ್ಟರ್ ಆಗಿರೋವರೆಗೂ ಪಥಸಂಚಲನಕ್ಕೆ ಅನುಮತಿ ಪಡೆಯೋದು ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೂ ಆರ್‌ಎಸ್‌ಎಸ್‌ನವರು ಪಥ ಸಂಚಲನಕ್ಕೆ ಮಾಹಿತಿ ಮಾತ್ರ ನೀಡುತ್ತಿದ್ದರು. ಇನ್ಮುಂದೆ ಅನುಮತಿ ಕಡ್ಡಾಯ ಎಂದರು.ಚಿತ್ತಾಪುರದಲ್ಲಿಯೂ ಹಾಗೆಯೇ ಮಾಡಿದರು. ಅನುಮತಿ ಕೊಡಲಿಲ್ಲ ಎಂದು ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ನಿರ್ದೇಶನದಂತೆ ಅರ್ಜಿ ಸಲ್ಲಿಸಿದರು. ಆದರೆ, ಇನ್ನು ಮುಂದೆ ರಾಜ್ಯದಲ್ಲಿ ಎಲ್ಲೇ ಪಥ ಸಂಚಲನ ಮಾಡುವುದಾದರೂ ಅವರು ಅರ್ಜಿ ಸಲ್ಲಿಸಬೇಕು. ಕೋರ್ಟ್ ನಿರ್ದೇಶನ, ಸರ್ಕಾರದ ಮಾನದಂಡ, ಸ್ಥಳ, ಸಮಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ನಾನು ಹೋಮ್ ಮಿನಿಸ್ಟರ್ ಆಗಿರೋವರೆಗೂ ಪಥಸಂಚಲನಕ್ಕೆ ಅನುಮತಿ ಪಡೆಯೋದು ಕಡ್ಡಾಯ ಎಂದು ತಿಳಿಸಿದರು.ಆರ್‌ಎಸ್‌ಎಸ್‌ನವರು ಗುರುದಕ್ಷಿಣೆ ತೆಗೆದುಕೊಳ್ಳುತ್ತಾರಂತೆ. ಗುರು ಎಂದರೆ ಯಾರು?, ಧ್ವಜ ತಾನೆ?, ಧ್ವಜದ ಮೇಲೆ ಗುರುದಕ್ಷಿಣೆ ತೆಗೆದುಕೊಂಡರೆ ಅದಕ್ಕೆ ಲೆಕ್ಕ ತೋರಿಸಲಿ ಎಂದು ಸವಾಲು ಹಾಕಿದರು.ಅಯೋಧ್ಯೆಯ ಶ್ರೀರಾಮನ ಹುಂಡಿ ಕಳ್ಳತನ ವಿಚಾರ ಪ್ರಸ್ತಾಪಿಸಿದ ಗೃಹ ಸಚಿವರು, ಬೆಳ್ಳಿ, ಚಿನ್ನ, ಆಭರಣ, ಹಣ ಅಲ್ಲದೆ ಇಟ್ಟಿಗೆಗಳನ್ನು ಕೂಡಾ ಕಳವು ಮಾಡಿದ್ದಾರೆ. ಕರ್ನಾಟಕದ ಗಣೇಶ್ ಎನ್ನುವವರು ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದಾರಂತೆ. ಇಲ್ಲಿಂದ ಹೋಗಿ ಅಲ್ಲಿ ಕಮಿಷನ್ ಹೊಡೆದಿದ್ದಾರಂತೆ. ಚಂದಾ ಚೋರಿಯಲ್ಲಿ ಆರ್‌ಎಸ್‌ಎಸ್‌ಗೂ ಪಾಲು ಹೋಗಿರುವ ಬಗ್ಗೆ ನನಗೆ ಅನುಮಾನವಿದೆ ಎಂದು ಆರೋಪಿಸಿದರು.ಅಭಿ ಪಿಚ್ಚರ್ ಬಾಕಿ ಹೈ:
ಆರ್‌ಎಸ್‌ಎಸ್ ನೋಂದಣಿ ಕುರಿತಂತೆ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ. ಹಲವಾರು ಪ್ರಶ್ನೆಗಳನ್ನು ಹಾಕಿ ಪತ್ರ ಬರೆದಿದ್ದೇನೆ. ಬರಲಿ ಬಿಡಿ, ಅವಸರ ಯಾಕೆ?. ಜಸ್ಟ್ ಈವಾಗ ತಾನೆ ಪತ್ರ ಬರೆದಿರೋದು, ಅಷ್ಟೊಂದು ಅವಸರ ಯಾಕೆ?. ‘ಅಭಿ ಪಿಚ್ಚರ್ ಬಾಕಿ ಹೈ’. ಅವರದು 100 ವರ್ಷದ ಸಂಘಟನೆ ಅಲ್ಲವಾ?, ಕಾಗದಗಳು ಎಲ್ಲೋ ಇರಬಹುದು, ಹುಡುಕುತ್ತಿದ್ದಾರೆ. ಹುಡುಕಿಕೊಂಡು ಬರಲಿ ಬಿಡಿ ಎಂದರು. ಅವರೂ ಕೂಡಾ ನನ್ನ ಹಾಗೂ ನನ್ನ ಕುಟುಂಬದ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ, ಹಾಕಲಿ ಬಿಡಿ ಎಂದರು.