ಮಾರುಕಟ್ಟೆಯಲ್ಲಿ ಕೋಳಿಯಷ್ಟೇ ಮೊಟ್ಟೆಯೂ ದುಬಾರಿ

KannadaprabhaNewsNetwork |  
Published : Jun 19, 2025, 12:35 AM IST
ಗಗನಕ್ಕೇರಿದ ಮೊಟ್ಟೆ ಬೆಲೆ : ಮಧ್ಯಮ ವರ್ಗದವರ ಜೇಬಿಗೆ ಹೊರೆಯಾದ ಮೊಟ್ಟೆ  | Kannada Prabha

ಸಾರಾಂಶ

ಶಾಲೆಗಳು ಪ್ರಾರಂಭವಾದ ಕೆಲವೆ ದಿನಗಳಲ್ಲಿ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವೂ ದುಬಾರಿಯಾಗಿದೆ. ಸಗಟು ದರದಲ್ಲಿ ಒಂದು ಮೊಟ್ಟೆಗೆ 5.90 ರಿಂದ 6.20 ರು.ಗಳವರೆಗೆ ಇದ್ದರೆ, ಚಿಲ್ಲರೆ ದರ 7.50 ರು.ಗಳಿಗೆ ಏರಿಕೆಯಾಗಿದೆ. ಕೋಳಿಗಳಿಗೆ ಬಳಸುವ ಆಹಾರ ದುಬಾರಿಯಾಗಿದ್ದು, ಕೋಳಿ ಮೊಟ್ಟೆ ಉತ್ಪಾದನೆ ವೆಚ್ಚವೂ ದುಬಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂದೇ ಪ್ರಚಾರ ಪಡೆಯುತ್ತಿರುವ ಮೊಟ್ಟೆಯ ದರ ಈಗ ಏರುಗತಿಯಲ್ಲಿದೆ. ಈ ಬಾರಿ ಪ್ರತಿ ಮೊಟ್ಟೆಗೆ ಸಗಟು ದರ 5.90 ರಿಂದ 6.20 ರು.ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 7.50 ರು.ಗಳನ್ನು ತಲುಪಿದೆ. ಇದಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆ ₹ 4.50 ರಿಂದ 5 ರು.ಗಳ ವರೆಗೆ ಮಾರಾಟವಾಗುತ್ತಿತ್ತು. ಮೊಟ್ಟೆ ದರ ಏರುವ ಜತೆಗೆ ಕೋಳಿಗಳಿಗೂ ಶುಕ್ರದೆಸೆ ಕುದುರಿದೆ. ಬ್ರಾಯ್ಲರ್ 1ಕೆ.ಜಿ.ಗೆ 150ರಿಂದ 160 ರು.ಗಳ ಆಸುಪಾಸಿನಲ್ಲಿದೆ. ಇದು ಉತ್ತಮ ದರ ಎನ್ನುವುದು ಕೋಳಿ ವ್ಯಾಪಾರಿಗಳ ಮಾತು.ಶಾಲೆಗಳು ಆರಂಭ- ಮೊಟ್ಟೆಗೆ ಬೇಡಿಕೆ

ಶಾಲೆಗಳು ಪ್ರಾರಂಭವಾದ ಕೆಲವೆ ದಿನಗಳಲ್ಲಿ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವೂ ದುಬಾರಿಯಾಗಿದೆ. ಸಗಟು ದರದಲ್ಲಿ ಒಂದು ಮೊಟ್ಟೆಗೆ 5.90 ರಿಂದ 6.20 ರು.ಗಳವರೆಗೆ ಇದ್ದರೆ, ಚಿಲ್ಲರೆ ದರ 7.50 ರು.ಗಳಿಗೆ ಏರಿಕೆಯಾಗಿದೆ. ಕೋಳಿಗಳಿಗೆ ಬಳಸುವ ಆಹಾರ ದುಬಾರಿಯಾಗಿದ್ದು, ಕೋಳಿ ಮೊಟ್ಟೆ ಉತ್ಪಾದನೆ ವೆಚ್ಚವೂ ದುಬಾರಿಯಾಗಿದೆ. ಹೀಗಾಗಿ, ಮೊಟ್ಟೆ ದರ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಏರಿಕೆಯಾಗಲಿದೆ ಎನ್ನುತ್ತಾರೆ ವರ್ತಕರು.ಶಾಲೆಗೆ ಮೊಟ್ಟೆ ಪೂರೈಕೆ

ಶಿಕ್ಷಣ ಇಲಾಖೆ ಈವರೆಗೆ ವಾರದಲ್ಲಿ 2 ದಿನಗಳು ಮಾತ್ರ ಮೊಟ್ಟೆ ವಿತರಣೆ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಶಿಕ್ಷಣ ಇಲಾಖೆಯು ಅಜೀಂ ಪ್ರೇಂಜಿ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡು 1,500 ಕೋಟಿ ರು.ಅನುದಾನ ಪಡೆದಿದೆ. ಇದರಿಂದ ವಾರದಲ್ಲಿ ಎರಡು ದಿನಗಳ ಬದಲಿಗೆ 6 ದಿನಗಳ ಕಾಲ ಮೊಟ್ಟೆ ನೀಡುತ್ತಿದೆ. ಇದರಿಂದಾಗಿ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆ ಇಲ್ಲ. ಇದು ಕೂಡ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಶಾಲಾ ಮಕ್ಕಳಿಗೆ ಪೌಷ್ಟಿಕತೆ ದೃಷ್ಟಿಯಿಂದ ಮಕ್ಕಳಿಗೆ ವಾರದಲ್ಲಿ 6 ದಿನಗಳು ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಆದರೆ ಮೊಟ್ಟೆ ಹೆಚ್ಚಳವಾಗಿದ್ದು ಮಕ್ಕಳಿಗೆ ಮೊಟ್ಟೆ ಒದಗಿಸಲು ಕಷ್ಟವಾಗುತ್ತಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದು ಖರೀದಿ ಸಮಿತಿಯಲ್ಲಿರುವ ಪೋಷಕರು ಆಗ್ರಹಿಸಿದ್ದಾರೆ.

ಉತ್ಪಾದಕರಿಗೆ ಸಿಗದ ಲಾಭ

ಆದರೆ ಕೋಳಿ ಸಾಕಣೆದಾರರ ಸಮಸ್ಯೆಯೇ ಬೇರೆ. ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾಗಿದೆ. ಆದರೆ ಮೊಟ್ಟೆ ಪೂರೈಕೆದಾರರಿಗೆ ಇದರ ಲಾಭ ಸಿಗುತ್ತಿಲ್ಲ. ಕೋಳಿ ಫಾರಂನಲ್ಲಿ ಕಡಮೆ ಬೆಲೆಗೆ ಖರೀದಿಸಿ ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೋಳಿ ಫಾರಂ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''