ಕನ್ನಡಪ್ರಭ ವಾರ್ತೆ ಉಡುಪಿ
ಮುಖ್ಯ ಅತಿಥಿಯಾಗಿ ಮಣಿಪಾಲ ಎಂಐಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಜಮಾಲುದ್ದೀನ್ ಹಿಂದಿ ಮಾತನಾಡಿ, ಮನುಷ್ಯನಲ್ಲಿರುವ ಸಹಬಾಳ್ವೆ, ಸೌಹಾರ್ದತೆ ಎಂಬುದು ಪ್ರಕೃತಿದತ್ತವಾಗಿ ಲಭಿಸಿರುವ ಗುಣ. ಅದನ್ನು ಯಾವುದೇ ಶಕ್ತಿಗಳಿಂದ ದೂರ ಮಾಡಲು ಆಗುವುದಿಲ್ಲ. ಎಲ್ಲ ಧರ್ಮದವರು ಒಟ್ಟಾಗಿ ಸೇರಿ ಹಬ್ಬಗಳನ್ನು ಆಚರಿಸುವುದರಿಂದ ನಮ್ಮ ನಡುವೆ ಇದ್ದ ತಪ್ಪು ಕಲ್ಪನೆಗಳು ದೂರ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಡಾ.ನೇರಿ ಕರ್ನೆಲಿಯೋ ವಹಿಸಿದ್ದರು. ಪ್ರಥಮ ಉಪ ಗವರ್ನರ್ ಮುಹಮ್ಮದ್ ಹನೀಫ್, ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.ದ್ವಿತೀಯ ಉಪ ಗವರ್ನರ್ ಸಪ್ನಾ ಸುರೇಶ್, ಲಯನ್ಸ್ ಕ್ಲಬ್ ಉಡುಪಿ ಅಮೃತ ಅಧ್ಯಕ್ಷೆ ಭಾರತಿ ಹರೀಶ್, ಅಂಬಲಪಾಡಿ ಪ್ರೈಡ್ ಅಧ್ಯಕ್ಷೆ ಆಶಾ ಕೇಶವ ಅಮೀನ್, ಕುಂದಾಪುರ ಕ್ರೌನ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಪುರುಷೋತ್ತಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಹಮ್ಮದ್ ಮೌಲಾ ಸ್ವಾಗತಿಸಿದರು. ಹಂಝತ್ ಹೆಜಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಸ್.ಉಮರ್ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಸಾಹೇಬ್ ಕೋಟ ವಂದಿಸಿದರು.