ಏಕಾದಶಿಯು ವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲ್ಪಟ್ಟಿದೆ ಎಂದು ಸಿಂಪಿ ಸಮಾಜದ ಅಧ್ಯಕ್ಷ ಕೇದಾರಪ್ಪ ಬಗಾಡೆ ಹೇಳಿದರು.
ಶಿಗ್ಗಾಂವಿ: ಏಕಾದಶಿಯು ವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲ್ಪಟ್ಟಿದೆ ಎಂದು ಸಿಂಪಿ ಸಮಾಜದ ಅಧ್ಯಕ್ಷ ಕೇದಾರಪ್ಪ ಬಗಾಡೆ ಹೇಳಿದರು.
ಪಟ್ಟಣದ ವಿಠಲ ಹರಿ ಮಂದಿರದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ನಾಮದೇವ ಸಿಂಪಿ ಸಮಾಜದ ವತಿಯಿಂದ ನಡೆದ ಮಹಾಭಿಷೇಕ, ವಿಶೇಷ ಪೂಜೆ ಉದ್ದೇಶಿಸಿ ಮಾತನಾಡಿದ ಅವರು ಆಷಾಢ ಏಕಾದಶಿಯನ್ನು ದೇವಶಯನೀ ಏಕಾದಶಿ ಅಥವಾ ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಭಗವಾನ್ ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಜಾರುತ್ತಾರೆ ಎಂಬುದು ಪುರಾಣ ಪ್ರಸಿದ್ಧ ನಂಬಿಕೆಯಾಗಿದೆ. ಭಕ್ತರು ಈ ದಿನ ಮಹಾವಿಷ್ಣುವಿನ ಪೂಜೆ, ಉಪವಾಸ, ಜಪ, ಭಜನೆ ಹಾಗೂ ಸೇವೆಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಾ ಮೂಳೆ, ಏಕನಾಥ ಮಾಳವದೆ, ಮಹಿಳಾ ಅಧ್ಯಕ್ಷೆ ರೂಪಾ ಬಗಾಡೆ, ಮುರಳೀಧರ ಮಾಳವದೆ, ವಿನಾಯಕ ಗಂಜೀಗಟ್ಟಿ, ವಿನೋಬಾ ಮಾಳವದೆ, ನಾರಾಯಣ ಬಗಾಡೆ , ಪರಶುರಾಮ ಮಾಳವದೆ, ಗುರುನಾಥ ಬಗಾಡೆ, ಗೋಪಾಲ ಮಾಳವದೆ, ಪರಶುರಾಮ ಮೀರಜಕರ್, ಶಂಕರಪ್ಪ ಕೂಪಳೆ, ಪ್ರಕಾಶ ಆತಡಕರ್, ಭಾಗೀರಥಿ ಉರಣಕರ್, ಹೇಮಾ ಮಾಳವದೆ, ವಿಜಯಲಕ್ಷ್ಮಿ ಗಂಜೀಗಟ್ಟಿ, ವಿಜ್ಜಕ್ಕ ಗಂಜೀಗಟ್ಟಿ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.