ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯರಾಗಿ ಆಯ್ಕೆ: ಆನಂದರೆಡ್ಡಿಗೆ ಸನ್ಮಾನ

KannadaprabhaNewsNetwork |  
Published : Jun 15, 2026, 03:00 AM IST
೧೩ಕೆಎಲ್‌ಆರ್-೭ಮುಳಬಾಗಿಲು ತಾಲೂಕು ಸಿನಿಗೇನಹಳ್ಳಿ ಜಿ.ಆನಂದ್‌ರೆಡ್ಡಿರನ್ನು ರೆಡ್ಡಿ ಸಮುದಾಯದ ಮುಖಂಡರು ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಜಿ.ಆನಂದ್ ರೆಡ್ಡಿರವರು ಹಲವಾರು ವರ್ಷದಿಂದ ತಾಲೂಕಿನಲ್ಲಿ ಎಲ್ಲಾ ಸಮುದಾಯಗಳ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದು, ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ,

ಮುಳಬಾಗಿಲು: ತಾಲೂಕಿನ ಸಿನಿಗೇನಹಳ್ಳಿ ಜಿ.ಆನಂದ್‌ರೆಡ್ಡಿ ಅವರನ್ನು ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದರಿಂದ ಸಮುದಾಯಕ್ಕೆ ಆನೆ ಬಲ ಬಂದಿದೆ ಎಂದು ವೇಮನರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ಕಗ್ಗನಹಳ್ಳಿ ಕೇಶವರೆಡ್ಡಿ ತಿಳಿಸಿದರು.

ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿ.ಆನಂದ್ ರೆಡ್ಡಿರವರು ಹಲವಾರು ವರ್ಷದಿಂದ ತಾಲೂಕಿನಲ್ಲಿ ಎಲ್ಲಾ ಸಮುದಾಯಗಳ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದು, ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ, ಇಂತಹ ಪ್ರಭಾವಿ ನಾಯಕರಿಗೆ ರಾಜ್ಯಮಟ್ಟದ ಉನ್ನತ ಸ್ಥಾನಮಾನ ಕಲ್ಪಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಶಾಸಕ ಸಮೃದ್ಧಿ ಮಂಜುನಾಥ್, ಸಂಸದ ಮಲ್ಲೇಶ್ ಬಾಬು, ಚಿಂತಾಮಣಿ ಜೆಕೆ ಕೃಷ್ಣಾರೆಡ್ಡಿರಿಗೆ ಕೃತಜ್ಞತೆ ಸಲ್ಲಿಸಿದರು.

ರೇವಣ ರೆಡ್ಡಿ ಸಂಘದ ಖಜಾಂಚಿ ಐದಲಾಪುರ ಜಯರಾಮರೆಡ್ಡಿ ಮಾತನಾಡಿ, ಮುಳಬಾಗಿಲು ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರ ಆಗಲಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿ. ಆನಂದ್‌ರೆಡ್ಡಿ ಚುನಾವಣೆಗೆ ಸ್ಪರ್ಧಿಸಲಿದ್ದು ಶಾಸಕರಾಗೋದು ಖಚಿತವೆಂದು ಭವಿಷ್ಯ ನುಡಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಡಾ.ಭರತ್, ಆನಂದ್‌ರೆಡ್ಡಿ, ವೇಮನರೆಡ್ಡಿ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಆರ್.ಹಳ್ಳಿ ಸುಬ್ರಮಣ್ಯ ರೆಡ್ಡಿ, ಎಮ್ಮೆನತ್ತ ರೆಡ್ಡಪ್ಪರೆಡ್ಡಿ, ಮೋಹನ್‌ರೆಡ್ಡಿ, ಅಶೋಕ್ ರೆಡ್ಡಿ, ಚಲ್ಲಪಲ್ಲಿ ಕೃಷ್ಣಾರೆಡ್ಡಿ, ನಂಗಲಿ ಅಶೋಕ ಆನಂದ ರೆಡ್ಡಿ ಇದ್ದರು.

ಇದೇ ವೇಳೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾಗಿ ನೇಮಕಗೊಂಡಿರುವ ಜಿ ಆನಂದ್ ರೆಡ್ಡಿ ಅವರನ್ನು ರೆಡ್ಡಿ ಸಮುದಾಯದ ಮುಖಂಡರು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಲ್ಲಿ 3000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ!
ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಚಳವಳಿ: ಸಲೀಂ ಅಹ್ಮದ್‌