- ಜು.೨೧ರಂದು ಮತದಾನ, ಮತ ಎಣಿಕೆ: ಚುನಾವಣಾಧಿಕಾರಿ - - - ಕನ್ನಡಪ್ರಭ ವಾರ್ತೆ ಹರಿಹರ
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಐದು ವರ್ಷಗಳ ಅವಧಿಗೆ ಮಹಾಸಭೆಯ ಸಂವಿಧಾನ ನಿಯಮ ೫೧(೨)ಬಿ ಪ್ರಕಾರ ಚುನಾವಣೆ ನಡೆಸಲಾಗುವುದು ಎಂದು ತಾಲೂಕು ಚುನಾವಣಾ ಅಧಿಕಾರಿ ಸಿ.ವಿ.ಪಾಟೀಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕು ಘಟಕ ಚುನಾವಣೆಗೆ ಜೂನ್ ೨೭ರಿಂದ ಜುಲೈ ೪ರ ಮಧ್ಯಾಹ್ನ ೩ ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಜುಲೈ ೫ರ ಬೆಳಗ್ಗೆ ೧೦.೩೦ ರಿಂದ ನಾಮಪತ್ರ ಪರಿಶೀಲಿಸಲಾಗುವುದು. ಜುಲೈ ೮ರಂದು ಮಧ್ಯಾಹ್ನ ೩ ಗಂಟೆಯವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಇದೆ. ಜು.೨೧ರ ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಸಲಾಗುವುದು. ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮಹಾಸಭಾದಿಂದ ಅನುಮೋದನೆಗೊಂಡ ಅರ್ಹ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಮತದಾರರ ವಿವರವು ಚುನಾವಣಾಧಿಕಾರಿ ಬಳಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹರಿಹರ ತಾಲೂಕು ಚುನಾವಣಾ ಅಧಿಕಾರಿ ಸಿ.ವಿ. ಪಾಟೀಲ್, ಮೊ.೯೪೪೮೯- ೨೯೯೦೪ ಅವರನ್ನು ಹರ ವಿವಿಧೋದ್ದೇಶ ಸಹಕಾರ ಸಂಘ, ಶಿವಮೊಗ್ಗ ಬಸ್ ಸ್ಟಾಪ್, ಶಿವಮೊಗ್ಗ ರಸ್ತೆ, ಹರಿಹರ ಈ ವಿಳಾಸದಲ್ಲಿ ಮಾಹಿತಿ ಪಡೆಯಬಹುದು ಎಂದರು.ಪತ್ರಿಕಾಗೋಷ್ಟಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ತಾಲೂಕು ಅಧ್ಯಕ್ಷ ಬಿ.ಜಿ. ಶಿವಾನಂದಪ್ಪ, ಮುಖಂಡರಾದ ಎಚ್.ಕೊಟ್ರೇಶಪ್ಪ, ವೀರಣ್ಣ ಯಾದವಾಡ್, ನಾಗರಾಜ್ ಕುರುವತ್ತಿ ಇತರರು ಇದ್ದರು.
- - - -೨೫ಎಚ್‌ಆರ್‌ಆರ್೩:ಹರಿಹರ ಪತ್ರಿಕಾ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.