ಹೊಳಲ್ಕೆರೆ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

KannadaprabhaNewsNetwork | Published : Dec 1, 2024 1:32 AM

ಸಾರಾಂಶ

ಹೊಳಲ್ಕೆರೆ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷರಾಗಿ ಎಚ್.ಆರ್.ನಾಗರತ್ನ ವೇದಮೂರ್ತಿ ಅವಿರೋಧ ಆಯ್ಕೆಯಾದರು. ಈ ಮೊದಲು ಇದ್ದ ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.

ಹೊಳಲ್ಕೆರೆ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷರಾಗಿ ಎಚ್.ಆರ್.ನಾಗರತ್ನ ವೇದಮೂರ್ತಿ ಅವಿರೋಧ ಆಯ್ಕೆಯಾದರು. ಈ ಮೊದಲು ಇದ್ದ ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.ಒಟ್ಟು16 ಸದಸ್ಯರ ಜತೆ ಎಂಪಿ, ಎಂಎಲ್ಎ ತಲಾ ಒಂದು ಮತಗಳು ಸೇರಿ 18 ಮತಗಳಿದ್ದವು.ಅಧ್ಯಕ್ಷ ಸ್ಥಾನಕ್ಕೆ ಈ ಮೊದಲು ಆಕಾಂಕ್ಷಿಯಾಗಿದ್ದ ವಸಂತರಾಜ್ ಹಾಗೂ ವಿಜಯ್ ಸಿಂಹ ಖಾಟ್ರೋತ್ ನಡುವೆ ಸಂಧಾನ ಏರ್ಪಡಿಸಿದ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಕಾಂಗ್ರೆಸ್ ತಂಡ ಅಂತಿಮವಾಗಿ ವಿಜಯಸಿಂಹ ಖಾಟ್ರೋತ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಏಕೈಕ ನಾಮಪತ್ರ ಸಲ್ಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.ಜತೆಗೆ ಬಿಜೆಪಿ ಸದಸ್ಯರಾಗಿದ್ದ ಎಚ್.ಆರ್.ನಾಗರತ್ನ ಅವರನ್ನುಉಪಾಧ್ಯಕ್ಷರನ್ನಾಗಿ ಬೆಂಬಲಿಸುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಸಮಕ್ಷಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆದವು.ಪುರಸಭೆಯ ಹಿರಿಯ ಸದಸ್ಯ ಬಿ.ಎಸ್.ರುದ್ರಪ್ಪ, ಸದಸ್ಯರಾದ ಕೆ.ಸಿ.ರಮೇಶ್, ಡಿ.ಎಸ್.ವಿಜಯ್, ಪಿ.ಆರ್.ಮಲ್ಲಿಕಾರ್ಜುನ ಸ್ವಾಮಿ ವಸಂತ ರಾಜ್. ಸಬಿನ ಅಶ್ರಪ್, ಸವಿತಾ ನರಸಿಂಹ ಖಾಟ್ರೋತ್ , ಮಮತಾ ಜಯಸಿಂಹ ಖಾಟ್ರೋತ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು. "ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಗಮನ ಹರಿಸಿ "

ಚುನಾವಣೆಗಳು ನಡೆಯುವಾಗ ಮಾತ್ರ ನಾವು ಎದುರಾಳಿಗಳಂತೆ ನಡೆದುಕೊಳ್ಳಬೇಕು. ಗೆಲುವಿನ ನಂತರ ನಾವೆಲ್ಲರೂ ಸಾರ್ವಜನಿಕರ ಸೇವಕರು ಎಂಬ ಅಭಿಪ್ರಾಯ ತಳೆದು ಸಾರ್ವಜನಿಕರ ಕೆಲಸ ಮಾಡುವಲ್ಲಿ ಮುಂದಾಗಬೇಕು. ಪುರಸಭೆಯ ಹೊಸ ತಂಡ ಪಟ್ಟಣದಲ್ಲಿನ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಚರಂಡಿಗಳ ಕಡೆಗೆ ಗಮನ ಹರಿಸಿ ಉತ್ತಮ ಕೆಲಸ ಮಾಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Share this article