ಕನ್ನಡಪ್ರಭ ವಾರ್ತೆ ಹೊನ್ನಾಳಿ
ಎಚ್.ಗೋಪಗೋಂಡನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿದ್ದ ಪಿ.ದೇವೇಂದ್ರಪ್ಪ, ಉಪಾಧ್ಯಕ್ಷ ಎಂ.ನಾಗಪ್ಪ ರಾಜಿನಾಮೆಯಿಂದ ತೆರವಾದ ಸ್ಥಾನಗಳಿಗೆ ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಮಲಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಉಮೇಶ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಇವರಿಬ್ಬರು ಹೊರತುಪಡಿಸಿ, ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಇದರಿಂದಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.ನೂತನ ಅಧ್ಯಕ್ಷೆ ಕಮಲಮ್ಮ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರೈತರ ಏಳಿಗೆಗಾಗಿ ಸ್ಥಾಪನೆ ಕಂಡಿದೆ. ಸಹಕಾರ ಸಂಘದಿಂದ ರೈತರಿಗೆ ಅಲ್ಪಾವಧಿ ಮತ್ತು ದಿರ್ಘಾವಧಿ ಸಾಲ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕೆ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನೂತನ ಅಧ್ಯಕ್ಷ ಮತ್ತು ಉಪಧ್ಯರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿದೇರ್ಶಕರಾದ ಜಿ.ಯಶೋಧರಪ್ಪ, ಎ.ಪರಮೇಶ್ವರಪ್ಪ, ಕೆಂಚಮ್ಮ, ಮಲ್ಲಿಕಾರ್ಜನ, ಬಿ.ಅಣ್ಣಪ್ಪ ನಾಯ್ಕ, ಶಾಂತಮ್ಮ, ಈರಮ್ಮ, ಕಾರ್ಯದರ್ಶಿ ಕೆ.ವಿ.ಶ್ರೀಧರ ಇತರರು ಇದ್ದರು.
- - - -29ಎಚ್.ಎಲ್.ಐ1:ಹೊನ್ನಾಳಿ ತಾಲೂಕಿನ ಎಚ್.ಗೋಪಗೋಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಕಮಲಮ್ಮ, ಉಪಾಧ್ಯಕ್ಷರಾಗಿ ಡಿ.ಉಮೇಶ್ ಆಯ್ಕೆಯಾಗಿದ್ದು, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿನಂದಿಸಿದರು.