ಹಣ ಇರುವವರು ಜನಪ್ರತಿನಿಧಿಗಳಾಗಿ ಆಯ್ಕೆ ಆತಂಕಕಾರಿ ಬೆಳವಣಿಗೆ: ನಂಜೇಗೌಡ

KannadaprabhaNewsNetwork |  
Published : Jan 27, 2025, 12:46 AM IST
26ಕೆಎಂಎನ್ ಡಿ16 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದ ಸಂವಿಧಾನ ಅಪಾಯದ ಅಂಚಿನಲ್ಲಿದೆ ಎಂದು ಹೇಳುತ್ತಿದ್ದಾರೆ. ಅಪಾಯ ಸಂವಿಧಾನಕ್ಕಲ್ಲ ದೇಶಕ್ಕೆ. ಹಣವಂತರನ್ನು ಆಯ್ಕೆ ಮಾಡಿ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಗೆ ಕಳುಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪ್ರಸ್ತುತ ರಾಜಕೀಯ ಕಲುಷಿತಗೊಂಡಿದೆ. ಹಣ ಇರುವವರು ಚುನಾವಣೆ ಎದುರಿಸಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಅಭಿಪ್ರಾಯಪಟ್ಟರು.

ಭಾರತೀ ಎಜುಕೇಷನ್ ಟ್ರಸ್ಟ್‌ನಿಂದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಣವಂತರು ಮಾತ್ರ ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗುವ ಮೂಲಕ ಸಂವಿಧಾನದ ಆಶೋತ್ತರಗಳು ಕಡೆಗಣನೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದ ಸಂವಿಧಾನ ಅಪಾಯದ ಅಂಚಿನಲ್ಲಿದೆ ಎಂದು ಹೇಳುತ್ತಿದ್ದಾರೆ. ಅಪಾಯ ಸಂವಿಧಾನಕ್ಕಲ್ಲ ದೇಶಕ್ಕೆ. ಹಣವಂತರನ್ನು ಆಯ್ಕೆ ಮಾಡಿ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಗೆ ಕಳುಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಹಣ ನೀಡಿ ಆಯ್ಕೆಯಾಗುವ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಮುಳುಗುತ್ತಿದ್ದಾರೆ. ಇಂದಿನ ಯುವ ಜನತೆ ಇದನ್ನು ಅರಿತು ಸುಸಂಸ್ಕೃತರನ್ನು ಆಯ್ಕೆ ಮಾಡುವ ಮೂಲಕ ದೇಶದ ಪ್ರಗತಿಗೆ ನಾಂದಿಯಾಗಲು ಸಹಕರಿಸಿ ಎಂದರು.

ಅಭಿನಂಧನೆ ಸ್ವೀಕರಿಸಿದ ಮಾಜಿ ಸೈನಿಕ ಎಸ್.ಬಿ.ರವಿ ಮಾತನಾಡಿ, ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲಾ ಪ್ರಜೆಗಳಿಗೂ ಸಮಾನತೆ, ಸ್ವಾತಂತ್ರದ ಹಕ್ಕು ಎಲ್ಲರಿಗೂ ಇದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದಂತಹ ಮಹಾನ್ ಹೋರಾಟಗಾರರನ್ನು ಸ್ಮರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎನ್‌ಸಿಸಿ ಲೆಫ್ಟಿನೆಟ್ ಸಿ.ಮಲ್ಲೇಶ್ ನೇತೃತ್ವದಲ್ಲಿ ಭಾರತೀ ಪ್ರೌಢಶಾಲೆ, ಜಿ.ಮಾದೇಗೌಡ ತಾಂತ್ರೀಕ ಮಹಾವಿದ್ಯಾಲಯ, ಶ್ರೀಮತಿ ಪದ್ಮಮ್ಮ ನಸಿಂಗ್ ಕಾಲೇಜ್, ಭಾರತೀ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಲಾಯಿತು.

ಈ ವೇಳೆ ಕ್ರೀಡೆ, ಕಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಸಂಯೋಜಕ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಂದನ್, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಪ್ರೊ.ಎಸ್. ನಾಗರಾಜು, ಡಾ.ಎಸ್.ಎಲ್.ಸುರೇಶ್, ಡಾ. ತಮಿಜ್‌ಮಣಿ, ಡಾ. ಬಾಲಸುಬ್ರಮಣ್ಯಂ, ಡಾ. ಶಾಂತರಾಜು, ಮಂಜು ಜೇಕಪ್, ಜಗದೀಶ್, ಡಾ. ಮಹೇಶ್‌ಲೋನಿ, ಜಿ.ಕೃಷ, ಸಿ.ವಿ. ಮಲ್ಲಿಕಾರ್ಜುನ, ಪಿ. ರಾಜೇಂದ್ರ ರಾಜೇ ಅರಸ್, ಪ್ರತಿಮಾ ಸೇರಿದಂತೆ ಮತ್ತಿರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ