ಅಡಕೆ, ಬಾಳೆ ತೋಟಕ್ಕೆ ನುಗ್ಗಿದ ಆನೆ: ಬೆಳೆ ಹಾನಿ

KannadaprabhaNewsNetwork |  
Published : Oct 17, 2023, 12:46 AM IST
ದಿ.16-ಅರ್.ಪಿ.ಟಿ.1ಪಿ: ರಿಪ್ಪನ್‍ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ಅರಸಾಳು ವಲಯ ವ್ಯಾಪ್ತಿಯ ಮಸರೂರು ಖೈರದವರ ಮನೆ ಶಿವಾನಂದಪ್ಪ ಎಂಬುವರ ಅಡಿಕೆ ಬಾಳೆ ತೋಟಕ್ಕೆ ಆನೆ ದಾಳಿ ನಡೆಸಿ ಬೆಳೆದ್ವಂಸಗೊಳಿಸಿರುವುದು. | Kannada Prabha

ಸಾರಾಂಶ

ಬೆಳೆ ಹಾನಿಗೊಳಿಸುತ್ತಿರುವ ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸಲು ಮನವಿ

ರಿಪ್ಪನ್‍ಪೇಟೆ: ಅರಸಾಳು ವಲಯ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸರೂರು ಖೈರದವರ ಮನೆ ಶಿವಾನಂದ ಎಂಬವರ ಅಡಕೆ ತೋಟಕ್ಕೆ ಆನೆ ದಿಢೀರ್‌ ದಾಳಿ ನಡೆಸಿ, ಅಡಕೆ ಗಿಡ ಮತ್ತು ಬಾಳೆ ಬೆಳೆಯನ್ನು ಸಂಪೂರ್ಣ ನಾಶಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ರೈತ ತನ್ನ ತೋಟಕ್ಕೆ ಹೋಗಿ ನೋಡಿದಾಗ ಅಡಕೆ, ಬಾಳೆ ಬೆಳೆ ಹಾನಿಯಾಗಿದ್ದು ಕಂಡು ಕಂಗಾಲಾಗಿದ್ದಾರೆ. ಇದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ರೈತರ ಬೆಳೆ ಹಾನಿಗೊಳಿಸುತ್ತಿರುವ ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಭೇದುಲ್ಲಾ ಷರೀಫ್, ಗ್ರಾಪಂ ಸದಸ್ಯ ಮಹಮ್ಮದ್‍ ಷರೀಫ್ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಭೇಟಿ ನೀಡಿ, ಹಾನಿಗೀಡಾಗಿದ ಅಡಕೆ ಮತ್ತು ಬಾಳೆಯನ್ನು ಪರಿಶೀಲಿಸಿದರು. ತಕ್ಷಣ ಸರ್ಕಾರ ನೊಂದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. - - - -16ಆರ್‌ಪಿಟಿ1ಪಿ:

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ