ಮಾದಪ್ಪನ ಹಾದಿಯಲ್ಲಿ ಕಾಡಾನೆ ಪ್ರತ್ಯಕ್ಷ: ಭಕ್ತರಲ್ಲಿ ಮತ್ತೆ ಆತಂಕ

KannadaprabhaNewsNetwork |  
Published : Feb 19, 2026, 01:45 AM IST
ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆ ಹಾದಿಯಲ್ಲಿ ಕಾಣಿಸಿಕೊಂಡ ಕಾಡಾನೆ. | Kannada Prabha

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆಯ ದಾರಿಯಲ್ಲಿ ಬುಧವಾರ ಕಾಡಾನೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಅರಣ್ಯಕ್ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆಯ ದಾರಿಯಲ್ಲಿ ಬುಧವಾರ ಕಾಡಾನೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಅರಣ್ಯಕ್ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಆನೆ ಹೊಲ, ಕಿರನ ಹೊಲ ಸಮೀಪದ ಪಾದಯಾತ್ರೆ ರಸ್ತೆಯಲ್ಲಿಯೇ ಒಂಟಿ ಕಾಡಾನೆ ಕಾಣಿಸಿಕೊಂಡಿದ್ದು, ಒಂದೆಡೆ ಚಿರತೆ ಭಯ ಮತ್ತೊಂದೆಡೆ ಆನೆ ಭಯದಲ್ಲಿ ಭಕ್ತರು ಆತಂಕದ ನಡುವೆಯೂ ಪಾದಯಾತ್ರೆಯಲ್ಲಿ ಸಾಗಿ ಭಕ್ತಿಯ ಪಾರಕಷ್ಟೇ ಮೆರೆಯುತ್ತಿದ್ದಾರೆ.

ಪಾದಯಾತ್ರೆಯ ಮೆಟ್ಟಿಲುಗಳ ಮೇಲೆ ಕಾಡಾನೆ ಅರಣ್ಯ ಪ್ರದೇಶದಿಂದ ಕಾಣಿಸಿಕೊಂಡಿರುವುದರಿಂದ ಮಾದಪ್ಪನ ಭಕ್ತಾದಿಗಳಲ್ಲಿ ಆತಂಕ ಕಾರಣವಾದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಪಟಾಕಿ ಸಿಡಿಸಿ ಯಶಸ್ವಿಯಾಗಿ ಅರಣಕ್ಕೆ ಕಳುಹಿಸಿದ್ದಾರೆ. ಜೊತೆಗೆ ಮಾದಪ್ಪನ ಭಕ್ತಾದಿಗಳು ಎಚ್ಚರಿಕೆಯಿಂದ ತೆರಳುವಂತೆ ಮನವಿ ಮಾಡಿದ್ದಾರೆ. ಜನರೂ ಸಹ ಅರಣ್ಯ ಅಧಿಕಾರಿಗಳು ಸೂಕ್ತ ರೀತಿ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

---

18ಸಿಎಚ್ಎನ್19

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ