ಗೃಹಲಕ್ಷ್ಮಿ ಯೋಜನೆಯಿಂದ ಅರ್ಹರು ಹೊರಗೆ ಉಳಿಯಬಾರದು: ಮೋರನಾಳ

KannadaprabhaNewsNetwork |  
Published : Nov 09, 2026, 02:15 AM IST
ಮುಂಡರಗಿ ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಜರುಗಿದ ಗೃಹಲಕ್ಷ್ಮೀ ಯೋಜನೆ ಮರುಪರಿಶೀಲನಾ ಅರ್ಜಿಯ ಕುರಿತು ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಡಿ.ಡಿ. ಮೋರನಾಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಗೃಹಲಕ್ಷ್ಮಿ ಯೋಜನೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಗೃಹಲಕ್ಷ್ಮಿ ಯೋಜನೆ ಸೇರಿ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಬಡ ಕುಟುಂಬಗಳು ಬಡತನ ರೇಖೆಗಿಂತ ಮೇಲ್ಮಟ್ಟಕ್ಕೆ ಬಂದಿದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ಗೃಹಲಕ್ಷ್ಮಿ ಯೋಜನೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಗೃಹಲಕ್ಷ್ಮಿ ಯೋಜನೆ ಸೇರಿ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಬಡ ಕುಟುಂಬಗಳು ಬಡತನ ರೇಖೆಗಿಂತ ಮೇಲ್ಮಟ್ಟಕ್ಕೆ ಬಂದಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಯು ಆರ್ಥಿಕವಾಗಿ ಸಬಲಗೊಂಡಿದ್ದಾರೆ. ಎಲ್ಲ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಸಮರ್ಪಕ ಮಾಹಿತಿ ಪಡೆದು ಯಾವುದೇ ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಶನಿವಾರ ತಾಪಂ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನಾ ಅರ್ಜಿಯ ಕುರಿತು ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 1.24 ಕೋಟಿ ಜನ ಫಲಾನುಭವಿ ಇದ್ದು, ಈ ಯೋಜನೆಯಡಿಯಲ್ಲಿ ಹಲವು ಅರ್ಹ ಫಲಾನುಭವಿಗಳಿಗೆ ಕೆಲವೊಂದು ತಾಂತ್ರಿಕ ಸಮಸ್ಯೆ, ದಾಖಲಾತಿ ಕೊರತೆಯಿಂದಾಗಿ ಹಣ ಜಮಾ ಆಗುತ್ತಿಲ್ಲ. ಹಾಗೆಯೇ ಮರಣ ಹೊಂದಿದವರ ಬ್ಯಾಂಕ್ ಖಾತೆಗೆ ಯೋಜನೆಯ ಹಣ ಹೋಗುತ್ತಿದ್ದು, ಮರಣ ಹೊಂದಿದವರನ್ನು ಹೊರಗಡೆ ತೆಗೆಯುವುದಕ್ಕೆ ಮತ್ತು ಅರ್ಹರಿಗೆ ಯೋಜನೆ ತಲುಪುವುದಕ್ಕೆ ರಾಜ್ಯ ಸರ್ಕಾರ ಅರ್ಜಿ ಮರುಪರಿಶೀಲನೆಯ ಕೆಲಸ ಆರಂಭಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಅರ್ಜಿ ಮರುಪರಿಶೀಲನೆ ಕುರಿತು ತರಬೇತಿ ಪಡೆದು ಸಮಗ್ರ ಮಾಹಿತಿಯೊಂದಿಗೆ ಉತ್ತಮ ರೀತಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಿಡಿಪಿಒ ಬಸಮ್ಮ ಹೂಲಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 36,396 ಪಡಿತರ ಫಲಾನುಭವಿಗಳಿದ್ದು, ಅದರಲ್ಲಿ ಗೃಹಲಕ್ಷ್ಮಿ ಯೋಜನೆಗೆ 36,388 ಅರ್ಜಿ ಹಾಕಿದ್ದು, 33,711 ಮಂಜೂರಾತಿ ಆಗಿದೆ. ಕೆವೈಸಿ ಮಾಡಲಾರದ್ದು, ಮರಣ ಹೊಂದಿದ್ದು ಸೇರಿ 2,677 ಫಲಾನುಭವಿಗಳದ್ದು ಪಾವತಿಗೆ ಬಾಕಿ ಇವೆ. ಮನೆ-ಮನೆಗೆ ಭೇಟಿ ನೀಡಿ ಮರುಶೀಲನೆ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ, ಪುಲಿಕೇಶಗೌಡ ಪಾಟೀಲ, ಸುರೇಶ ಮಾಳಗಿಮನಿ, ವಿಶ್ವನಾಥ ಪಾಟೀಲ, ನಾಗರಾಜ ಸಜ್ಜನರ, ಭುವನೇಶ್ವರಿ ಕಲ್ಲಕುಟಗರ, ಉಮೇಶ ಕಲಾಲ, ನಿಂಗಪ್ಪ ಮಜ್ಜಗಿ, ಕಾಶಪ್ಪ ಹೊನ್ನೂರ, ಜಲಾನಸಾಬ ವಡ್ಡಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ