ಗುಣಮಟ್ಟ ಶಿಕ್ಷಣವೇ ಎಲೈಟ್ ಲೆಗಸಿ ಸ್ಕೂಲ್‌ ಉದ್ದೇಶ

KannadaprabhaNewsNetwork |  
Published : Jun 02, 2025, 12:30 AM IST
ಹೊನ್ನಾಳಿ ಫೋಟೋ 1ಎಚ್.ಎಲ್.ಐ2. ಹೊನ್ನಾಳಿ ಗುರ್ಗಿಗುಡಿಯಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಗೆಳೆಯರ ಬಳಗದವತಿಯಿಂದ ಎಲೈಟ್ ಲೆಗಸಿ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾರಂಭ | Kannada Prabha

ಸಾರಾಂಶ

ಶಾಲಾ-ಕಾಲೇಜುಗಳ ಗೆಳೆಯರು ಮತ್ತು ಆತ್ಮೀಯರು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಅರಿವು ಎಜುಕೇಷನಲ್ ಟ್ರಸ್ಟ್ ವತಿಯಿಂದ ಎಲೈಟ್ ಲೆಗಸಿ ಇಂಟರ್ ನ್ಯಾಷನಲ್ ಸ್ಕೂಲ್‌ ಪ್ರಾರಂಭ ಮಾಡಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಪ್ರೇಮ್ ಕುಮಾರ್ ಹೇಳಿದ್ದಾರೆ.

- ಪ್ರಾರಂಭೋತ್ಸವದಲ್ಲಿ ಅರಿವು ಎಜುಕೇಷನಲ್ ಟ್ರಸ್ಟ್ ಪ್ರೇಮ್‌ಕುಮಾರ್‌ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ-ಕಾಲೇಜುಗಳ ಗೆಳೆಯರು ಮತ್ತು ಆತ್ಮೀಯರು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಅರಿವು ಎಜುಕೇಷನಲ್ ಟ್ರಸ್ಟ್ ವತಿಯಿಂದ ಎಲೈಟ್ ಲೆಗಸಿ ಇಂಟರ್ ನ್ಯಾಷನಲ್ ಸ್ಕೂಲ್‌ ಪ್ರಾರಂಭ ಮಾಡಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಪ್ರೇಮ್ ಕುಮಾರ್ ಹೇಳಿದರು.

ಪಟ್ಟಣದ ಹಿರೇಮಠದ ಗಂಗಾ ಸಾಮಿಲ್ ಹಿಂಭಾಗ ಅರಿವು ಎಜುಕೇಷೆನಲ್ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ಎಲೈಟ್ ಲೆಗಸಿ ಇಂಟರ್ ನ್ಯಾಶನಲ್ ಸ್ಕೂಲ್‌ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಲ್ಲಿ ಒಂದು ವರ್ಷ ಅವಧಿಗೆ ಮಾತ್ರವೇ ಇಲ್ಲಿ ತಾತ್ಕಾಲಿಕವಾಗಿ ಶಾಲೆ ನಡೆಯಲಿದೆ. ಶಿಕಾರಿಪುರ ಮುಖ್ಯ ರಸ್ತೆಯ ಸೊರಟೂರು ಹೊರವಲಯದಲ್ಲಿ 4 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಸುಸಜ್ಜಿತ ಶಾಲೆ ಕಟ್ಟಡ ನಿರ್ಮಾಣ ಭರದಿಂದ ಸಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಟ್ರಸ್ಟ್ ಕಾರ್ಯದರ್ಶಿ ಎಚ್.ಪಿ. ಭರತ್ ಮಾತನಾಡಿ, ಎಲೈಟ್ ಲೆಗಸಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಅಮೆರಿಕನ್ ಮಾಂಟೆಸರಿ ಪದ್ಧತಿಯಲ್ಲಿ ಪ್ಲೇ ಗ್ರೂಪ್, ನರ್ಸರಿ, ಎಲ್‌ಕೆಜಿ, ಯುಕೆಜಿಯಲ್ಲಿ ನಲಿಕಲಿ ವಿಧಾನ, ನೀಯೋಜನೆ ಪದ್ಧತಿ, ಜಾಯ್ ಫುಲ್ ಇಂಗ್ಲಿಷ್, ಮಲ್ಟಿಪಲ್ ಇಂಗ್ಲಿಷ್ ಬೋಧನಾ ವ್ಯವಸ್ಥೆ ಜೊತೆಗೆ 3ನೇ ತರಗತಿಯಿಂದಲೇ ನವೋದಯ, ಮೊರಾರ್ಜಿ ದೇಸಾಯಿ, ಸೈನಿಕ ವಸತಿ ಶಾಲೆಗಳ ಪ್ರವೇಶಕ್ಕೆ ಪೂರಕವಾದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

6ನೇ ತರಗತಿಯಿಂದಲೇ ಜೆಇಇ, ನೀಟ್‌ನಂತಹ ಕೋಚಿಂಗ್ ವ್ಯವಸ್ಥೆಯೂ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಭವಿ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷ 2026-27 ನೇ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೆ ಸಿಬಿಎಸ್‌ಇ ಮತ್ತು ಸ್ಟೇಟ್ ಪಠ್ಯ ಕ್ರಮ, ಸುಸಜ್ಜಿತ ಆಟದ ಮೈದಾನ ಹೊಂದಿರುವ ಶಾಲಾ ವಾತಾವರಣ ನಿರ್ಮಿಸಲಾಗುವುದು. ಮಕ್ಕಳ ಸುರಕ್ಷತೆಗಾಗಿ ಸಿಸಿ ಟಿವಿ, ಅಗ್ನಿನಂದಕ, ಜಿಪಿಎಸ್ ಅಳವಡಿಕೆ ಹೊಂದಿದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಟ್ರಸ್ಟ್‌ ಗೌರವಾಧ್ಯಕ್ಷೆ ಡಾ. ಶಕುಂತಲಾ ರಾಜ್‌ಕುಮಾರ್, ಟ್ರಸ್ಟಿಗಳಾದ ಪಿ.ಎಚ್. ಇಮ್ರಾನ್ ಖಾನ್, ಕೆ.ಎನ್.ಹಾಲೇಶ್, ಎಚ್.ಪಿ. ಪ್ರಭು, ಎಂ.ಎ.ರಾಜೇಶ್ವರಿ, ಎನ್.ದೀಪಿಕಾ ಗುರುಮೂರ್ತಿ, ಜಿ.ಎಸ್. ಸುಮಾ ಯೋಗೇಂದ್ರ, ರುಕ್ಮಿಣಿ ಬಾಯಿ, ಶಿಕ್ಷಕರು ಉಪಸ್ಥಿತರಿದ್ದರು.

- - -

-1ಎಚ್.ಎಲ್.ಐ2.:

ಹೊನ್ನಾಳಿಯಲ್ಲಿ ಎಲೈಟ್ ಲೆಗಸಿ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್