ಕನ್ನಡಪ್ರಭ ವಾರ್ತೆ ಹಾಸನ
ನಾಗರಾಜು ಕೆ.ಎಂ. ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ೨೫ ವರ್ಷಗಳ ನಿರಂತರ ಶೈಕ್ಷಣಿಕ ಸಾಧನೆಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ನಾವೀನ್ಯತೆ ಹಾಗೂ ಶೈಕ್ಷಣಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಪರಿಣಾಮಕಾರಿಯಾಗಿ ಬೋಧಿಸುವ ವಿವಿಧ ಕಲಿಕಾ ವಿಧಾನಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ೨೫ ವರ್ಷಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಇವರ ಅವಿರತ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸುಮಾರು ೭೦೦ ಜನರಲ್ಲಿ ಇವರು ಮೊದಲಿಗರಾಗಿ ಆಯ್ಕೆಗೊಂಡು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಎಲೈಟ್ ಶಾಲೆಯ ಆಡಳಿತಮಂಡಳಿ, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಶ್ರೀಯುತರನ್ನು ಅಭಿನಂದಿಸಿದ್ದಾರೆ ಹಾಗೂ ಶಾಲೆಯ ಮುಖ್ಯಸ್ಥರಾದ ಕಿರಣ್ ಮಾತನಾಡಿ, ಕೆ.ಎಂ. ನಾಗರಾಜುರವರ ಶೈಕ್ಷಣಿಕ ಚಿಂತನೆ ಹಾಗೂ ಪ್ರಯೋಗ ಶೀಲ ಚಟುವಟಿಕೆಗಳಿಗೆ ಸಂದ ಪ್ರಶಸ್ತಿ ಇದಾಗಿದೆ ಎಂದು ಬಣ್ಣಿಸಿದ್ದಾರೆ ಹಾಗೂ ಇವರಿಗೆ ಸಂದ ಗೌರವ ನಮ್ಮ ಎಲೈಟ್ ಶಾಲೆಗೆ ಸಂದ ಗೌರವ ಎಂದು ಅಭಿನಂದಿಸಿದ್ದಾರೆ.