ಗದಗ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಕಳೆದ 20 ದಿನಗಳಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಜನ್- 2ರ ಪಂದ್ಯಾವಳಿಯಲ್ಲಿ ಶನಿವಾರ ರಾತ್ರಿ ಎಲೈಟ್ ಇಲೆವೆನ್ 7 ವಿಕೆಟ್ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಎದುರಾಳಿ ಸ್ಟ್ರೈಕರ್ಸ್ ತಂಡ ರನ್ನರ ಅಪ್‌ಗೆ ತೃಪ್ತಿಪಟ್ಟಿತು.
ಸ್ಟ್ರೈಕರ್ಸ್ ತಂಡದ ಪರವಾಗಿ ನಾಯಕ ಫಯಾಜ್ 18 ಎಸೆತಗಳಲ್ಲಿ 12 ರನ್ ಗಳಿಸಿದರೆ, ತಯ್ಯಬ್ 21 ಎಸೆತಗಳಲ್ಲಿ 5 ಫೋರ್ 1 ಸಿಕ್ಸರ್ ಮೂಲಕ 36 ರನ್ ಗಳಿಸಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳಾದ ಅಲ್ತಾಮಾಶ್ 2, ಜಗದೀಶ 1, ಚನ್ನಪ್ಪ 4, ರಿಯಾಜ್ 1 ಹಾಗೂ ಆರೀಫ್ 2 ರನ್ ಗಳಿಸಿದರು.
ಎಲೈಟ್ ಇಲೆವೆನ್ ತಂಡದ ಪರವಾಗಿ ನಿಹಾಲ್ ಆಕಾಶ್ 2 ಒವರ್‌ಗಳ್ಲಿ 13 ರನ್ ನೀಡಿ 2 ವಿಕೆಟ್, ಶಿವು 2 ಒವರ್‌ಗಳಲ್ಲಿ ಮೇಡನ್ ಸಹಿತ 3 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸದ ಎಲೈಟ್ ಇಲೆವೆನ್ ಆರಂಭಿಕ ಬ್ಯಾಟ್ಸ್‌ಮನ್ ವಿಜಯ ಬಾರಕೇರ್ 21 ಎಸೆತಗಳಲ್ಲಿ 3 ಫೋರ್ ಸಹಿತ 30 ರನ್ ನೀಡಿ ಅತ್ಯುತ್ತಮ ಆರಂಭ ಒದಗಿಸಿದರು. ಪ್ರೇಮ್ ಬಿ. ಶೂನ್ಯಕ್ಕೆ ಔಟಾದರೆ, ಬಾಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ನಿಹಾಲ್ ಆಕಾಶ 18 ಎಸೆತಗಳಲ್ಲಿ 3 ಫೋರ್, 1 ಸಿಕ್ಸರ್ ಸಹಿತ 27 ರನ್ ಗಳಿಸಿದರು. ಸಂತೋಷ ನಾಯಕ 5 ಜಗದೀಶರಡ್ಡಿ 8 ರನ್ ಗಳಿಸಿ ಗೆಲುವಿನ ನಗೆ ಬೀರಿದರು.
ಬ್ಯಾಟಿಂಗ್ ಹಾಗೂ ಬಾಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್‌ರೌಂಡರ್ ನಿಹಾಲ್ ಆಕಾಶ ಪಂದ್ಯಶ್ರೇ಼ಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಟ್ರೈಕರ್ಸ್ ತಂಡ ತಯ್ಯಬ್ ಉತ್ತಮ ಬ್ಯಾಟರ್ ಎನಿಸಿದರೆ, ಎಲೈಟ್ ಇಲೆವೆನ್ ತಂಡದ ಶಿವು ಉತ್ತಮ ಬಾಲರ್ ಎನಿಸಿದರು.