ಏಳೂರು ಕರಿಯಮ್ಮ ಜಾತ್ರೆ: ದೇವರುಗಳ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : Apr 03, 2024, 01:33 AM IST
ಎಲ್ಲಾ ದೇವರುಗಳ ಮೆರವಣಿಗೆ | Kannada Prabha

ಸಾರಾಂಶ

ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದ ಏಳೂರು ಕರಿಯಮ್ಮದೇವಿ ಜಾತ್ರೆಗೆ ಎರಡನೇ ದಿನ ಮಂಗಳವಾರ ಏಳೂರಿನ ಎಲ್ಲ ದೇವರ ಅದ್ಧೂರಿ ಮೆರವಣಿಗೆ ನಡೆಯಿತು. ಹಾಲಿವಾಣ, ಎರೆಹಳ್ಳಿ, ಕೊಪ್ಪ, ದಿಬ್ಬದಹಳ್ಳಿ, ಚಿಕ್ಕಹಾಲಿವಾಣ ಮತ್ತು ಬೇಚಾರ್ ಗ್ರಾಮದ ದೇವರುಗಳ ಸಮ್ಮುಖ ಹಾಲಿವಾಣದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಆರು ಗಂಟೆಗಳ ಕಾಲ ಬಿಸಿಲೆನ್ನದೇ ತಲೆಗೆ ನೀರು ಹಾಕಿಕೊಂಡು ಹೆಜ್ಜೆ ಹಾಕುತ್ತಾ ಮೆರವಣಿಗೆ ನಡೆದಿದ್ದು ವಿಶೇಷ.

ಕನ್ನಡಪ್ರಭ ವಾರ್ತೆ. ಮಲೇಬೆನ್ನೂರು

ಇಲ್ಲಿಗೆ ಸಮೀಪದ ಹಾಲಿವಾಣ ಗ್ರಾಮದ ಏಳೂರು ಕರಿಯಮ್ಮದೇವಿ ಜಾತ್ರೆಗೆ ಎರಡನೇ ದಿನ ಮಂಗಳವಾರ ಏಳೂರಿನ ಎಲ್ಲ ದೇವರ ಅದ್ಧೂರಿ ಮೆರವಣಿಗೆ ನಡೆಯಿತು.

ಹಾಲಿವಾಣ, ಎರೆಹಳ್ಳಿ, ಕೊಪ್ಪ, ದಿಬ್ಬದಹಳ್ಳಿ, ಚಿಕ್ಕಹಾಲಿವಾಣ ಮತ್ತು ಬೇಚಾರ್ ಗ್ರಾಮದ ದೇವರುಗಳ ಸಮ್ಮುಖ ಹಾಲಿವಾಣದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಆರು ಗಂಟೆಗಳ ಕಾಲ ಬಿಸಿಲೆನ್ನದೇ ತಲೆಗೆ ನೀರು ಹಾಕಿಕೊಂಡು ಹೆಜ್ಜೆ ಹಾಕುತ್ತಾ ಮೆರವಣಿಗೆ ನಡೆದಿದ್ದು ವಿಶೇಷ. ವೀರಗಾಸೆ, ಹಲಗೆ, ಸಮಾಳ, ತಮಟೆ ಮತ್ತಿತರೆ ಜಾನಪದ ಕಲಾ ತಂಡಗಳು ಮೆರುಗು ನೀಡಿದವು.

ಇತ್ತ ಗ್ರಾಮದ ಎಲ್ಲ ರಸ್ತೆಗಳಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಮತ್ತು ಸುನಂದಾದೇವಿ ಅವರು ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಾಣಿವಧೆ ತಡೆಗೆ ಜನಜಾಗೃತಿ ಮೂಡಿಸಿದರು. ಕಾನೂನು ಪ್ರಕಾರ ಯಾವುದೇ ಕೋಣ, ಕುರಿ, ಆಡು, ಕೋಳಿ ಇತರೆ ಪ್ರಾಣಿಗಳ ಬಲಿ ನಿಷೇಧವಿದೆ. ಪ್ರಾಣಿವಧೆ ಮಾಡಿದವರಿಗೆ ಶಿಕ್ಷೆ ಇದೆ, ಎಚ್ಚರ ಎಂದು ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡಿದರು. ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.

ಪಿಡಿಒ ಶ್ರೀನಿವಾಸ್ ಮಾತನಾಡಿ, ಹಾಲಿವಾಣ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಲಾಗಿದೆ. ಆರು ಬೋರ್‌ವೆಲ್‌ಗಳಿಂದ ೬೦೦೦ ಜನಸಂಖ್ಯೆಯ ಹಾಲಿವಾಣ, ಕೊಪ್ಪ ಗ್ರಾಮಗಳಲ್ಲಿ ಹಬ್ಬಕ್ಕೆ ಆಗಮಿಸಿದ ಸುಮಾರು ೩೦,೦೦೦ ಜನರಿಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ಧ ನೀರನ್ನು ನೀಡಲೂ ಸಿದ್ಧತೆ ಮಾಡಿದ್ದೇವೆ. ನಳದ ಟ್ಯಾಪ್ ತೆಗೆದು ನೀರನ್ನು ವ್ಯರ್ಥ ಮಾಡುವವರಿಗೂ ತಿಳಿವಳಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ರಾಜ್ಯ ಮೀಸಲು ಪೊಲೀಸ್ ತುಕಡಿ ಇದೆ. ೩೦ ಪೋಲಿಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

- - - -ಚಿತ್ರ-೧: ಹಾಲಿವಾಣದ ಏಳೂರು ಕರಿಯಮ್ಮದೇವಿ ಜಾತ್ರೆಯ 2ನೇ ದಿನ ದೇವರುಗಳ ಮೆರವಣಿಗೆ ನಡೆಯಿತು.

.ಚಿತ್ರ-೨. ಜಾತ್ರೆಯಲ್ಲಿ ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ಪ್ರಾಣಿಬಲಿ ನಿಷೇಧ ಕುರಿತು ಜನಜಾಗೃತಿ ಮೂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!