ಬೂತಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು

KannadaprabhaNewsNetwork |  
Published : Aug 04, 2026, 02:00 AM IST
ಫೋಟೊ 03 ಎಚ್,ಎನ್,ಎಮ 01:ಹನುಮಸಾಗರದ ಶ್ರೀ ಕರಿಸಿದ್ದೇಶ್ವರ ಮಂಗಲಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಘಟನಾ ಸೃಜನಾ ಅಭಿಯಾನದಲ್ಲಿ ಮುಖಂಡ ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲಾಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಬೂತ ಮಟ್ಟದಲ್ಲಿ ಎಐಐಸಿಸಿಗೆ ಮುಟ್ಟಿಸಲಾಗಿದೆ

ಹನುಮಸಾಗರ: ಬೂತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಇಲ್ಲಿನ ಶ್ರೀಕರಿಸಿದ್ದೇಶ್ವರ ಮಂಗಲ ಭವನದಲ್ಲಿ ಸೋಮವಾರ ನಡೆದ ಸಂಘಟನಾ ಸೃಜನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಬೂತ ಮಟ್ಟದಲ್ಲಿ ಎಐಐಸಿಸಿಗೆ ಮುಟ್ಟಿಸಲಾಗಿದೆ. ಇದರಿಂದ ಪ್ರತಿಯೊಬ್ಬ ಕಾರ್ಯಕರ್ತನ ಅಭಿಪ್ರಾಯ ಎಷ್ಟು ಮುಖ್ಯವಾಗಿದೆ ಎನ್ನುವದನ್ನು ಕಾಂಗ್ರೆಸ್ ತಿಳಿಸುತ್ತದೆ. ಪ್ರತಿಯೊಂದು ಹುದ್ದೆ ಕಾರ್ಯಕರ್ತರಿಂದ ಅಂತಿಮಗೊಳ್ಳುತ್ತದೆ. ಜಿಲ್ಲಾಧ್ಯಕ್ಷರ ಏಕ ಪಕ್ಷಿಯ ನಿರ್ಧಾರ ತೆಗೆದುಕೊಳ್ಳದೇ ಅವರಿಂದ ಅಭಿಪ್ರಾಯ ಪಡೆಯಲಾಗುತ್ತದೆ. ಇದು ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರೊಂದಿಗಿನ ಅಭಿನಾಭಾವ ಸಂಬಂಧ ತೊರಿಸುತ್ತದೆ ಎಂದರು.

ಉತ್ತರಪ್ರದೇಶದ ಶಾಸಕ ಹಾಗೂ ಎಐಸಿಸಿ ಉಸ್ತುವಾರಿ ವಿವೇಕ ಬನಸಾಲ್, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ, ಮೆರೀನ್ ಸುಜಾತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಬ್ಲಾಕ್ ಅಧ್ಯಕ್ಷ ಕಲ್ಲಪ್ಪ ತಳವಾರ, ಮಹಾಂತೇಶ ಅಂಗಸಿಮುಂದಿನ, ವಿಶ್ವನಾಥ ಕನ್ನೂರ, ಆಯಿಶಾ ಖಾನ್, ಮೈನೂದ್ಧಿನ್ ಖಾಜಿ, ಫಾರುಕ್ ಡಾಲಾಯತ್, ಮಂಜುನಾಥ ಹುಲ್ಲೂರ, ಈರಣ್ಣ ಬದಾಮಿ, ಕೇದಾರನಾಥ್, ಯಲ್ಲಪ್ಪ ಬಾಗಲಿ, ಸುರೇಶ ಕುಂಟನಗೌಡ್ರ, ಸುಭಾಸ ಯಂಕಂಚಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಪಿಒಗಳ ಅಭಿವೃದ್ಧಿಗೆ ಮೌಲ್ಯವರ್ಧನೆ, ಇ-ಮಾರ್ಕೆಟಿಂಗ್ ಅಗತ್ಯ: ಜಯಣ್ಣ
ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ