-ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ಶಾಸಕ ಶ್ರೀನಿವಾಸ್
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸಾರ್ವಜನಿಕ ಆಸ್ಪತ್ರೆ ಪ್ರಯೋಗ ಶಾಲೆ ಹಿರಿಯ ತಾಂತ್ರಿಕ ಅಧಿಕಾರಿ ಎಂ.ಎಸ್.ಮೃತ್ಯುಂಜಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದೇವಕಿ ಘೋಷಿಸಿದರು.
ನಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಮೃತ್ಯುಂಜಯ ಹಾಗೂ ಶಿಕ್ಷಕ ಬಿ.ಜಿ.ರಮೇಶ್ ಸ್ಪರ್ಧಿಸಿದ್ದರು. ತಾಲೂಕು ಘಟಕದ 25 ನಿರ್ದೇಶಕರ ಮತಗಳಲ್ಲಿ ಮೃತ್ಯುಂಜಯ 16 ಮತ ಪಡೆದು ಜಯಗಳಿಸಿದ್ದಾರೆ.ನೂತನ ಸದಸ್ಯ ಮೃತ್ಯುಂಜಯ ಮಾತನಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಹೆಚ್ಚುಮತಗಳ ಅಂತರದಿಂದ ಆಯ್ಕೆಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಧ್ವನಿಯಾಗುವೆ. ಸಂಘದ ಎಲ್ಲಾ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಪ್ರಯತ್ನ ನೌಕರರ ಹಿತಕ್ಕಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಅವಿರೋಧ ಆಯ್ಕ:ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕ ಕೆ.ಎನ್.ನಾಗೇಶ್, ಖಜಾಂಚಿಯಾಗಿ ಪಿಡಿಒ ಉಮಾಶಂಕರ್, ಪ್ರದಾನ ಕಾರ್ಯದರ್ಶಿಯಾಗಿ ಕಾರ್ಮಿಕ ನಿರೀಕ್ಷಕರಾದ ನಾಗರತ್ನ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.
ನೂತನ ನಿರ್ದೇಶಕರಾದ ಗುರುಮೂರ್ತಿ, ಪುಷ್ಪ, ಸಿ.ಗೀತಾಮಣಿ, ಹೆಚ್.ವಿ. ನಾಗರಾಜು, ಶಾಂತಾಬಾಯಿ ಹೆಚ್. ಕಿರಣಗಿ, ರೇಣುಕಾಸ್ವಾಮಿ, ಚಂದ್ರಶೇಖರ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.ಪೊಟೊ 17 ಕೆಎನ್ ಎಲ್ ಎಮ್: