ಕೈಲ್‌ಮುಹೂರ್ತ ಕ್ರೀಡಾಕೂಟ: ಕಿರುಂದಾಡು ಸಮಗ್ರ ಚಾಂಪಿಯನ್ಸ್‌

KannadaprabhaNewsNetwork |  
Published : Nov 20, 2024, 12:35 AM IST
32 | Kannada Prabha

ಸಾರಾಂಶ

ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 63 ನೇ ವರ್ಷದ ಅಂತರ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟದಲ್ಲಿ ಕಿರುಂದಾಡು ಗ್ರಾಮವು ಗ್ರಾಮಾಂತರ ಸಮಗ್ರ ಚಾಂಪಿಯನ್ ಶಿಪ್ ಗಳಿಸಿತು. ಗೇಮ್ಸ್ ವಿಭಾಗದಲ್ಲಿ ಕಿರುಂದಾಡು ಗ್ರಾಮ ಚಾಂಪಿಯನ್ ಆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 63 ನೇ ವರ್ಷದ ಅಂತರ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟದಲ್ಲಿ ಕಿರುಂದಾಡು ಗ್ರಾಮವು ಗ್ರಾಮಾಂತರ ಸಮಗ್ರ ಚಾಂಪಿಯನ್ ಶಿಪ್ ಗಳಿಸಿತು. ಗೇಮ್ಸ್ ವಿಭಾಗದಲ್ಲಿ ಕಿರುಂದಾಡು ಗ್ರಾಮ ಚಾಂಪಿಯನ್ ಆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಗ್ರಾಮೀಣ ಕ್ರೀಡಾಕೂಟಗಳಿಂದ ವಿವಿಧ ಜನಾಂಗಗಳ ನಡುವಿನ ಸಾಮರಸ್ಯ ವೃದ್ಧಿಯಾಗಲಿದೆ ಎಂದರು.

ಬೃಂದಾವನ ಆಸ್ಪತ್ರೆಯ ನಿರ್ದೇಶಕ, ದಾನಿ ಅಪ್ಪನೆರವಂಡ ಎಸ್ ಮನೋಜ್ ಮಂದಪ್ಪ ಮಾತನಾಡಿ ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳು ಹೊರ ಹೊಮ್ಮಲು ಸಹಕಾರಿ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಬೋಳ್ಳಂಡ ಉನ್ನತಿ ಅಯ್ಯಪ್ಪ ಮಾತನಾಡಿ ಆಸಕ್ತಿ, ಶ್ರದ್ಧೆ, ಸಾಧಿಸುವ ಛಲ ಇದ್ದರೆ ಯಶಸ್ಸು ಸಾಧ್ಯ. ಯುವಜನರನ್ನು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹಿರಿಯರ ಜವಾಬ್ದಾರಿ ಎಂದರು.

ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಂಡ ಸಾಬ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಕ ಚೈಯ್ಯಂಡ ರಘು ತಿಮ್ಮಯ್ಯ, ಅಂತಾರಾಷ್ಟ್ರೀಯ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ:

ಪುರುಷರ ಹಾಕಿ ಟೂರ್ನಿಯಲ್ಲಿ ಬಾವಲಿ ಗ್ರಾಮದ ತಂಡ ಪ್ರಥಮ ಸ್ಥಾನ, ಕಿರುಂದಾಡು ಗ್ರಾಮದ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ ಬಾವಲಿ ತಂಡ ದ್ವಿತೀಯ ಸ್ಥಾನ ಗಳಿಸಿತು.

ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ, ಕೊಣಂಜಗೇರಿ ತಂಡ ದ್ವಿತೀಯ ಸ್ಥಾನ ಗಳಿಸಿತು.

ಪಥಸಂಚಲನದಲ್ಲಿ ಕೊಣಂಜಗೇರಿ ತಂಡ ಪ್ರಶಸ್ತಿ ಗಳಿಸಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ, ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಗ್ರಾಮಾಂತರ ವೈಯಕ್ತಿಕ ಚಾಂಪಿಯನ್ ಆಗಿ ಕೊಣಂಜಗೇರಿಯ ಪೊಂಜಂಡ ಅಯ್ಯಪ್ಪ ಹೊರಹೊಮ್ಮಿದರು. ಮಹಿಳೆಯರ ವಿಭಾಗದಲ್ಲಿ ದೇವಜನ ಪಿ.ಕೃಪಾ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು.

ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಗಣ್ಯರು ವಿತರಿಸಿದರು.

ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಕಾಫಿ ಬೆಳೆಗಾರ ಮೂವೇರ ಧರಣಿ ಗಣಪತಿ , ಅಪ್ಪನೆರವಂಡ ರಾಜ್ಯ ಪೂವಯ್ಯ, ಬೊಳ್ಳಂಡ ಅಯ್ಯಪ್ಪ, ಗೌರವ ಕಾರ್ಯದರ್ಶಿ ಅಪ್ಪನೆರವಂಡ ಬಿ ರಾಜೇಶ್, ಉಪಾಧ್ಯಕ್ಷ ಬೊಳ್ಳಚೆಟ್ಟಿರ ಜಯಂತಿ ಇದ್ದರು.

ಕ್ರೀಡಾಕೂಟದ ವಿಜೇತರಿಗೆ ದಾನಿಗಳಾದ ಕಿರುಂದಾಡು ಗ್ರಾಮದ ನಾಳಿಯಂಡ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ದಿ.ಡಿ.ತಿಮ್ಮಯ್ಯ ಮತ್ತು ದಿ.ನಾಳಿಯಂಡ ಡಿ.ಕಾಮವ್ವ ಇವರ ಮಕ್ಕಳಾದ ನಾಳಿಯಂಡ ಟಿ.ಸುಬ್ಬಯ್ಯ ಮತ್ತು ನಾಳಿಯಂಡ ಟಿ.ದೇವಯ್ಯ ಹಾಗೂ ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಕಾರ್ಯದರ್ಶಿ ದಿ.ಅಪ್ಪನೆರವಂಡ ಜೋಯಪ್ಪ ಇವರ ಜ್ಞಾಪಕಾರ್ಥ ಪತ್ನಿ ದೇವಕ್ಕಿಜೋಯಪ್ಪ ಮತ್ತು ಮಗ ಅಪ್ಪನೆರವಂಡ ವಿಜಯ್ ಪ್ರಾಯೋಜಿಸಿದ ಟ್ರೋಫಿಗಳನ್ನು ವಿತರಿಸಲಾಯಿತು.

ಸಮಾರಂಭಕ್ಕೆ ಮೊದಲು ಪುರುಷ ಮತ್ತು ಮಹಿಳೆಯರ ಅಂತಿಮ ಹಗ್ಗ ಜಗ್ಗಾಟ ಕ್ರೀಡಾಪಟುಗಳನ್ನು ಅತಿಥಿಗಳು ಪರಿಚಯಿಸಿಕೊಂಡು ಉದ್ಘಾಟಿಸಿ ಶುಭ ಹಾರೈಸಿದರು.

ಬೊಳ್ಳಂಡ ಗೀತಾ ಶರೀನ್ ಪ್ರಾರ್ಥಿಸಿದರು. ಕ್ರೀಡಾಮಂಡಳಿ ಕಾರ್ಯದರ್ಶಿ ಅಪ್ಪನೆರವಂಡ ರಾಜೇಶ್ ಸ್ವಾಗತಿಸಿದರು. ಶಿಕ್ಷಕಿ ಕಸ್ತೂರಿ ಮತ್ತು ಮಂಜು ನಿರೂಪಿಸಿದರು.

ಪಿ.ಆರ್. ಮಂಜು, ಎಂ.ಜಿ.ದೇವಯ್ಯ, ಸಿ.ಕೆ.ತಿಮ್ಮಯ್ಯ, ಸಿ ಬಿ ಕಸ್ತೂರಿ , ಎಂ ಎಂ ವಸಂತಿ, ಕೆ ಎಂ. ದೇಚಮ್ಮ, ಎಂ.ಜಿ. ಚಿನ್ನಪ್ಪ, ವೀಕ್ಷಿತಾ ಕ್ರೀಡಾ ತೀರ್ಪುಗಾರರಾಗಿದ್ದರು.

ಕ್ರೀಡಾ ಹಬ್ಬದಲ್ಲಿ ಬಾವಲಿ, ಕಿರುಂದಾಡು, ಪಾರಾಣೆ , ಕೈಕಾಡು ಹಾಗೂ ಬಲಮುರಿ ಗ್ರಾಮಗಳ ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ