ಮನಸೂರೆಗೊಂಡ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ

KannadaprabhaNewsNetwork |  
Published : Jun 16, 2025, 12:54 AM ISTUpdated : Jun 16, 2025, 12:55 AM IST
10 | Kannada Prabha

ಸಾರಾಂಶ

ಮೈಸೂರು: ನಗರದ ಪ್ರಕೃತಿ ಫೌಂಡೇಷನ್‌ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ ಎಸ್.ಈ. ಸುಧೀಂದ್ರ ಚಾಲನೆ ನೀಡಿದರು.

ಮೈಸೂರು: ನಗರದ ಪ್ರಕೃತಿ ಫೌಂಡೇಷನ್‌ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ ಎಸ್.ಈ. ಸುಧೀಂದ್ರ ಚಾಲನೆ ನೀಡಿದರು.

ನಗರದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವಾಗಿದೆ. ಇದು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸಲಿ ಎಂದು ಆಶಿಸುತ್ತೇನೆ ಎಂದರು.

ಕುಸ್ತಿ, ವ್ಯಾಯಾಮ ಶಾಲೆಗಳು, ಗರಡಿ ಮನೆಗಳು ಹಾಗೂ ಕುಸ್ತಿ ಕ್ರೀಡೆಯಲ್ಲಿ ಭಾಗಿಯಾಗುವ ಜಟ್ಟಿಗಳು ಎಂದು ಕರೆಯಲ್ಪಡುವ ಈ ಕುಸ್ತಿ ಸ್ಪರ್ದಾಳುಗಳು ಮತ್ತು ಮೈಸೂರು ಸಂಸ್ಥಾನದ ಮಹಾರಾಜರಿಗೆ ಅವಿನಾಭಾವ ಸಂಬಂಧ ಎಂದರೆ ತಪ್ಪಾಗಲಾರದು. ಮೈಸೂರು ಮಹಾರಾಜರ ಕಾಲದಿಂದಲೂ ಕುಸ್ತಿ ಸ್ಪರ್ಧೆ ಒತ್ತು ನೀಡಿ ಮಹಾರಾಜರು ಅಂದಿನ ಕಾಲದಿಂದಲೂ ಈ ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹ ನೀಡುತ್ತಿದ್ದರಿಂದ ನಮ್ಮ ರಾಜ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ ಎಂದು ಅವರು ಹೇಳಿದರು.

ದಸರಾ ಸಂದರ್ಭದಲ್ಲಿ ಕುಸ್ತಿ ಪಂದ್ಯವನ್ನು ಆಯೋಜಿಸಿ ಬೆಳ್ಳಿ ಗದೆಯನ್ನು ಬಹುಮಾನವಾಗಿ ನೀಡುತ್ತಾ ಬಂದಿರುವುದು ನಮ್ಮ ನಾಡಿನ ಹೆಮ್ಮೆಯ ವಿಚಾರ. ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕುಸ್ತಿ ಕ್ರೀಡೆಯು ಅಂದಿನ ಮೈಸೂರು ಸಂಸ್ಥಾನದ ಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದ್ದು, ನಮ್ಮ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಡಾ. ಶಿರ್ಲೀನ್‌ರೆಜಿನಾಲ್ಡ್‌, ಧನುಷ್, ಪ್ರಕೃತಿ ಫೌಂಡೇಷನ್ ಸದಸ್ಯರು, ಬಿಟ್ಟೇಗೌಡ ಸಂಸ್ಥಾಪಕರು, ವೈಭವ ನೇತ್ರಾಲಯ, ಕಿರಣ್ ಕುಮಾರ್, ಶ್ರೀ ರಮಾಣನಂದ ಸ್ವಾಮೀಜಿ, ಹನುಮಂತ ಗೌಡ ಇದ್ದರು.

ಕುಸ್ತಿ ಪಂದ್ಯದಲ್ಲಿ ಬೆಳಗಾವಿಯ ಪೈ. ಸಂಜು ಅವರೊಂದಿಗಿನ ಸೆಣಸಾಟದಲ್ಲಿ ವಿಜೇತರಾದ ಮಹಾರಾಷ್ಟ್ರದ ಕುಸ್ತಿಪಟ್ಟು ವಿಶಾಲ್ ಸೇಗಲೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌