ಮಕ್ಕಳ ಪ್ರತಿಭಾ ಕೌಶಲ್ಯ ಪ್ರೋತ್ಸಾಹಿಸಿ

KannadaprabhaNewsNetwork |  
Published : Dec 03, 2025, 02:30 AM IST
2ಕೆಕೆಆರ್4:ಕುಕನೂರು ಪಟ್ಟಣದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಲಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಗಣ್ಯರು  ಸಸಿಗೆ ನೀರು ಹಾಕುವ ಮೂಲಕ  ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಪ್ರತಿಭಾ ಕಾರಂಜಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವದರಿಂದ ಮಕ್ಕಳಲ್ಲಿರುವ ಪ್ರತಿಭೆ ಎಲ್ಲರಿಗೂ ಗೊತ್ತಾಗಲಿದೆ.

ಕುಕನೂರು: ಮಕ್ಕಳ ಪ್ರತಿಭಾ ಕೌಶಲ್ಯಕ್ಕೆ ಪ್ರೋತ್ಸಾಹಿಸುವ ಕಾರ್ಯ ಸದಾ ಜರುಗಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಹೇಶ ಸಬರದ ಹೇಳಿದರು.

ಪಟ್ಟಣದಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಜರುಗಿದ ವಲಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಅಗಾಧ ಪ್ರತಿಭೆ ಗುರುತಿಸುವದಕ್ಕೆ ಪ್ರತಿಭಾ ಕಾರಂಜಿ ಸಹಾಯಕವಾಗಿದೆ. ಮಕ್ಕಳು ಒಂದಿಲ್ಲ ಒಂದು ಪ್ರತಿಭೆ ಹೊಂದಿರುತ್ತಾರೆ. ಅದನ್ನು ಗುರುತಿಸಿ ಅದಕ್ಕೆ ಪೂರಕ ತರಬೇತಿ, ಕಲಿಕೆ ಹಾಗೂ ವೇದಿಕೆ ನೀಡಬೇಕು ಎಂದರು.

ಪ್ರಾಥಮಿಕ ಶಾಲೆ ನೌಕರ ಸಂಘದ ಅಧ್ಯಕ್ಷ ಮಾರುತೇಶ ತಳವಾರ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಪ್ರತಿಭಾ ಕಾರಂಜಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವದರಿಂದ ಮಕ್ಕಳಲ್ಲಿರುವ ಪ್ರತಿಭೆ ಎಲ್ಲರಿಗೂ ಗೊತ್ತಾಗಲಿದೆ. ಇದರಿಂದ ಅವರ ಮುಂದಿನ ಜೀವನಕ್ಕೆ ಪ್ರತಿಭೆ ಯಶಸ್ಸಿನ ಮೆಟ್ಟಿಲನ್ನು ಏರಿಸುತ್ತದೆ ಎಂದರು.

ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷೆತೆ ವಹಿಸಿದ್ದರು. ಮುಖಂಡ ಸಾಧೀಕ್‌ಪಾಷಾ ಖಾಜಿ, ಶಿಕ್ಷಕರಾದ ಶಿವಪ್ಪ ಈಬೇರಿ, ಗುಡಸಾಬ್‌ ಮಕಾಂದಾರ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಅಬ್ಬಿಗೇರಿ, ಬಸವಂತಪ್ಪ ದೊಡ್ಡಮನಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕಂಬಳಿ, ಕೃಷ್ಣಮೂರ್ತಿ ಗಧಾರಿ, ಶಿವಕುಮಾರ ಮುತ್ತಾಳ, ಹುಲಿಗೆಮ್ಮ ವಜ್ರಬಂಡಿ, ಸಿಆರ್‌ಪಿ ಫೀರಸಾಬ್‌ ದಫೇದಾರ, ಶಿವಪ್ಪ ಉಪ್ಪಾರ, ಮುಖ್ಯ ಶಿಕ್ಷಕ ಪರಮೇಶ್ವರ ಪತ್ತಾರ, ಶಾಂತಾ ಹಿರೇಮಠ, ಕೃಷ್ಣವೇಣಿ ಉದ್ಧಾರ, ಗುರುರಾಜ, ಮಹೇಶ ಅಸೂಟಿ, ಪ್ರಭು ಚಿಲಕೂಡ, ಮಂಜುನಾಥ ಬೆದವಟ್ಟಿ, ಶಕೀರಾ ಗದ್ವಾಲ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು