ನೆಲಗುಳಿ ದಲಿತ ಕುಟುಂಬಗಳ ಜಮೀನು ಒತ್ತುವರಿ

KannadaprabhaNewsNetwork |  
Published : Nov 27, 2026, 01:15 AM IST
26ಕೆಆರ್ ಎಂಎನ್ 6.ಜೆಪಿಜಿದಲಿತ ಕುಟುಂಬಗಳ ಸದಸ್ಯರು | Kannada Prabha

ಸಾರಾಂಶ

ಹಾರೋಹಳ್ಳಿ: ಕಗ್ಗಲ್ಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲಗುಳಿ ಗ್ರಾಮದ ದಲಿತ ಕುಟುಂಬಗಳಿಗೆ ಸೇರಿದ ತೋಟಿ ಇನಾಂ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದಲಿತ ಕುಟುಂಬಗಳ ಸದಸ್ಯರು ತಮ್ಮ ಜಮೀನಿನ ಬಳಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು

ಹಾರೋಹಳ್ಳಿ: ಕಗ್ಗಲ್ಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲಗುಳಿ ಗ್ರಾಮದ ದಲಿತ ಕುಟುಂಬಗಳಿಗೆ ಸೇರಿದ ತೋಟಿ ಇನಾಂ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದಲಿತ ಕುಟುಂಬಗಳ ಸದಸ್ಯರು ತಮ್ಮ ಜಮೀನಿನ ಬಳಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು.ಅಶೋಕ್ ನೆಲಗುಳಿ ಮಾತನಾಡಿ, ಸುಮಾರು 3.15 ಗುಂಟೆ ತೋಟಿ ಇನಾಂ ಜಮೀನಿಗೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಜಮೀನಿನ ದಾಖಲೆಗಳು ಕೇವಲ ನಾಲ್ಕೈದು ಮಂದಿ ಹೆಸರಿನಲ್ಲಿ ಮಾತ್ರ ನೋಂದಣಿಯಾಗಿವೆ. ಆದರೆ ಜಮೀನು ಮಾರಾಟ ಮಾಡಿದವರು ಯಾರು, ಖರೀದಿಸಿದವರು ಯಾರು ಎಂಬುದೇ ನಮಗೆ ತಿಳಿದಿಲ್ಲ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, 2021ರಿಂದಲೂ ಜಮೀನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ನಮ್ಮ ಜಮೀನು ಎಂದು ಕೇಳಲು ಹೋದಾಗ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಶಿವಮ್ಮ ಮಾತನಾಡಿ, ನಮ್ಮ ಜಮೀನಿನ ವಿಚಾರವಾಗಿ ಪ್ರಶ್ನೆ ಮಾಡಿದರೆ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಪೂರ್ವಜರಿಂದ ಬಂದಿರುವ ಜಮೀನನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಸಿದ್ದನರಸಮ್ಮ ಮಾತನಾಡಿ, ನಮ್ಮ ಗಮನಕ್ಕೆ ಬಾರದಂತೆ ನಮ್ಮ ಜಮೀನನ್ನು ಬೇರೆಯವರ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಜಮೀನು ನಮ್ಮದಾಗಿದ್ದರೂ ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಮಗೆ ಸೇರಬೇಕಾದ ಭೂಮಿಯನ್ನು ಮರಳಿ ಕೊಡಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ನೆಲಗುಳಿ ಗ್ರಾಮದಲ್ಲಿ ತಲೆತಲಾಂತರಗಳಿಂದ ದಲಿತ ಕುಟುಂಬಗಳ ಅನುಭವದಲ್ಲಿದ್ದ ಜಮೀನುಗಳನ್ನು ಅವರ ಗಮನಕ್ಕೆ ಬಾರದಂತೆ ನೋಂದಣಿ ಮಾಡಿಸಿಕೊಂಡು, ಅವರ ಜಮೀನಿನಲ್ಲೇ ಅವರಿಗೆ ಕೃಷಿ ಚಟುವಟಿಕೆ ಮಾಡಲು ಬಿಡುತ್ತಿಲ್ಲ, ಓಡಾಡುವುದಕ್ಕೂ ಅಡ್ಡಿಪಡಿಸಲಾಗುತ್ತಿದೆ. ಅಲ್ಲದೆ, ಜಮೀನಿನಲ್ಲಿ ಲೇಔಟ್ ನಿರ್ಮಾಣಕ್ಕೂ ಮುಂದಾಗಿದ್ದಾರೆಂದು ಆರೋಪಿಸಿದರು.

ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಯುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಜಮೀನಿನ ಮೂಲ ದಾಖಲೆಗಳು, ನೋಂದಣಿ ಪತ್ರಗಳು ಹಾಗೂ ಕಂದಾಯ ದಾಖಲೆಗಳನ್ನು ಪರಿಶೀಲಿಸಬೇಕು. ಅಕ್ರಮ ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗಣೇಶ್, ಅಶೋಕ್, ಮಹದೇವ್, ನಿಲ್ಲಮ್ಮ, ಮಹಾದೇವಮ್ಮ, ಶಿವಮ್ಮ, ಮಂಜುಳ, ಸಿದ್ದಮ್ಮ, ಚಂದ್ರಶೇಖರ್, ಸುನಂದಾ, ಶೋಭಾ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಕಾಂಚನಾ, ಯಶೋಧಮ್ಮ, ದಲಿತ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.

26ಕೆಆರ್ ಎಂಎನ್ 6.ಜೆಪಿಜಿ

ದಲಿತ ಕುಟುಂಬಗಳ ಸದಸ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಇಂದಿನಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಸಂವಿಧಾನ ನೀಡಿದ ಹಕ್ಕು, ಕರ್ತವ್ಯ ನಿಭಾಯಿಸುವುದು ನಮ್ಮೆಲ್ಲರ ಹೊಣೆ: ನ್ಯಾ. ಬಸವರಾಜ