ದತ್ತಿ ಉಪನ್ಯಾಸ ಉದ್ಘಾಟನೆ
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಕಡೂರು ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ. ಶಿವಕುಮಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಡೂರು ರೋಟರಿ ಕ್ಲಬ್ ನಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.ರೋಟರಿ ಕ್ಲಬ್ ವಿಶಿಷ್ಟ ಸಾಧನೆ ಮೂಲಕ ಗ್ರಾಮೀಣ ಪ್ರದೇಶದ ರೈತರು ಹಾಗೂ ಶಾಲಾ ಮಕ್ಕಳಿಗೆ ವಿಶೇಷ ಪುರಸ್ಕಾರ ನೀಡಿ ಸಮಾಜ ಸೇವೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಗ್ಯಾಸ್ ಮೂಲಕ ಶವ ಸಂಸ್ಕಾರ ಮಾಡಲು ಅನಿಲ ಚಿತಾಗಾರವನ್ನು ಕಡೂರು ಪಟ್ಟಣದಲ್ಲಿ ಪುರಸಭೆ ಮತ್ತು ದಾನಿಗಳ ಸಹಕಾರದಿಂದ ಕಡೂರು ರೋಟರಿ ಕ್ಲಬ್ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಸಾಹಿತಿಗಳಾದ ಸಿಂಗಟಗೆರೆ ಸಿದ್ದಪ್ಪ ದತ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ರಘುರಾಮ್ ವಹಿಸಿದ್ದರು. ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್. ಪರಮೇಶ್ , ಕಾರ್ಯದರ್ಶಿ ವಡೇರಹಳ್ಳಿ ಅಶೋಕ್, ನಿಯೋಜಿತ ರೋಟರಿ ಅಧ್ಯಕ್ಷ ಆರ್. ಜಿ. ಕೃಷ್ಣಸ್ವಾಮಿ, ಹಿರಿಯ ಸದಸ್ಯ ಸಿ. ಎನ್. ಕಲ್ಲೇಶಪ್ಪ ಕಂಸಾಗರ ಶ್ರೀನಿವಾಸ್, ಇನ್ನರ್ ವೀಲ್ ಅಧ್ಯಕ್ಷರಾದ ಉಮಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.