ಪ್ರಕೃತಿಯನ್ನು ಪಂಚೇಂದ್ರಿಯದಿಂದ ಆಸ್ವಾದಿಸಿ

KannadaprabhaNewsNetwork |  
Published : May 15, 2025, 01:45 AM IST
ಪೋಟೊ: 14ಎಸ್‌ಎಂಜಕೆಪಿ01ಶಿವಮೊಗ್ಗದ ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜೆ.ಎನ್.ಎನ್.ಸಿ.ಇ.ಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಬೂಮರೆಡ್ಡಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಪ್ರಕೃತಿ ನಿಸ್ವಾರ್ಥದಿಂದ ತನ್ನ ಕಾರ್ಯ ಮಾಡುತ್ತದೆ. ಅದಕ್ಕೆ ಕೊಡುವುದು ಮಾತ್ರ ಗೊತ್ತು, ಅದನ್ನು ತಮ್ಮ ಪಂಚೇಂದ್ರಿಯದಿಂದ ಆಸ್ವಾದಿಸಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಬೂಮರೆಡ್ಡಿ ಹೇಳಿದರು.

ಶಿವಮೊಗ್ಗ: ಪ್ರಕೃತಿ ನಿಸ್ವಾರ್ಥದಿಂದ ತನ್ನ ಕಾರ್ಯ ಮಾಡುತ್ತದೆ. ಅದಕ್ಕೆ ಕೊಡುವುದು ಮಾತ್ರ ಗೊತ್ತು, ಅದನ್ನು ತಮ್ಮ ಪಂಚೇಂದ್ರಿಯದಿಂದ ಆಸ್ವಾದಿಸಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಬೂಮರೆಡ್ಡಿ ಹೇಳಿದರು.

ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜೆಎನ್‌ಎನ್‌ಸಿಇಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಭೂತದಿಂದ ಬಂದ ಈ ಶರೀರ ಇನ್ನೊಂದು ಬದುಕಿಗೆ ಜ್ಯೋತಿಯಾಯಿತು ಎನ್ನುವುದು ನಾವು ರಕ್ತದಾನ ಮಾಡಿದಾಗ ಮಾತ್ರ. ರಕ್ತದಾನದಿಂದ ಜೀವ ಉಳಿಸಬಹುದು ಎಂದರು.

ಸಾವಿರಾರು ಜನ ರಸ್ತೆ ನಿಯಮ ಪಾಲಿಸದೆ ಅಪಘಾತ ಮಾಡಿಕೊಂಡು ರಸ್ತೆಗೆ ರಕ್ತ ಚಲ್ಲಿದರೆ ಏನು ಬಂತು. ಈ ಜನವರಿಯಿಂದ ಶಿವಮೊಗ್ಗ ಒಂದರಲ್ಲೇ ನೂರ ಐವತ್ತಕ್ಕಿಂತ ಹೆಚ್ಚ ಅಪಘಾತ ಸಂಭವಿಸಿವೆ. ಪ್ರಾಣಿ ಹಸಿದಾಗ ಬೇಟಿ ಆಡುತ್ತೆ, ಮಾನವ ಎಲ್ಲ ಬೇಕು ಎನ್ನುತ್ತಾನೆ. ಹನಿ ಹನಿ ಗೂಡಿದರೆ ಹಳ್ಳ. ನಮ್ಮ ಒಬ್ಬರ ರಕ್ತದಿಂದ ಏನಾಗುತ್ತೆ ಎನ್ನುವ ಮನೋಭಾವ ಬಿಟ್ಟು ಅರ್ಹರೆಲ್ಲರೂ ರಕ್ತದಾನ ಮಾಡಿದರೆ ಅದೆಷ್ಟು ಪ್ರಾಣಗಳನ್ನು ಉಳಿಸಬಹುದು ಎಂದು ತಿಳಿಸಿದರು.

ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಶಿವರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಕನಿಷ್ಠ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಬೇಕು. ಹುಟ್ಟಿದ ಹಬ್ಬಕ್ಕೆ, ವ್ಯಾಲೆನ್ಸೆಡೇಗೆ, ನಂತರ ವಿವಾಹ ಮಹೋತ್ಸಕ್ಕೆ ಹೀಗೆ ಸಂಭ್ರಮ ದಿನಗಳಲ್ಲಿ ರಕ್ತದಾನ ಮಾಡುವ ಮೂಲಕ ಶ್ರೇಷ್ಠತೆ ಮೆರೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಒಟ್ಟು ನಾಲ್ಕು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ಸೆಮಿಸ್ಟರ್‌ಗೆ ಒಂದು ಬಾರಿ ಎಲ್ಲರೂ ರಕ್ತದಾನ ಮಾಡಿದರೆ ವರ್ಷಕ್ಕೆ ನಮ್ಮ ಕಾಲೇಜಿನಿಂದ ಒಂಬತ್ತು ಸಾವಿರ ಯುನಿಟ್ ರಕ್ತದಾನ ಮಾಡಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ದೇಶದಲ್ಲೇ ಒಂದು ದಾಖಲೆ ಮಾಡಬಹುದು ಎಂದ ಅವರು, ವಿದ್ಯಾರ್ಥಿಗಳು ಕಾಲೇಜು ಬಸ್‍ಗಳನ್ನೇ ಉಪಯೋಗಿಸಿ. ನಾನು ರಕ್ತದಾನ ಮಾಡುತ್ತೇನೆ ತಾವೆಲ್ಲರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂತೇಶ್ ಮೂರ್ತಿ, ಧರಣೇಂದ್ರದಿನಕರ್, ಅರುಣ್ ಕುಮಾರ್, ಛಾಯ, ಕುಮಾರ್ ಶಾಸ್ತ್ರಿ ಭಾರತಿ, ಬಸವರಾಜ್, ವಾಗೇಶ್, ಜಿ.ವಿಜಯಕುಮಾರ್, ಬಾಲಕೃಷ್ಣ, ಸುರೇಶ್, ಭಾಪಟ್ ಇತರು ಇದ್ದರು.

ಧನ್ಯ ಸ್ವಾಗತಿಸಿದರು. ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರ ನಿರೂಪಿಸಿದರು. ಪಲ್ಲವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ