ಕನ್ನಡಪ್ರಭ ವಾರ್ತೆ ಮಸ್ಕಿ
ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 69ಕ್ಕೆ ಸೋಮವಾರ ಭೇಟಿ ನೀಡಿ ನೀರಿನ ಹರಿವು ಹಾಗೂ ಗೇಜ್ ನಿರ್ವಹಣೆಯನ್ನು ಪರಿಶೀಲಿಸಿದ ಅವರು, ಕಾಲುವೆಯಲ್ಲಿ ನಿಗದಿತ ಪ್ರಮಾಣದ ಗೇಜ್ ಕಾಯ್ದುಕೊಳ್ಳುವಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ತೋರಬಾರದು. ನೀರು ಹಂಚಿಕೆ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ತಾಕೀತು ಮಾಡಿದರು.
ಮೇಲ್ಭಾಗದ ಕೊಪ್ಪಳ ಜಿಲ್ಲೆಯ ತಾವರಗೇರಾ ಕುಡಿಯುವ ನೀರಿನ ಕೆರೆಗೆ ರಾಯಚೂರು ಜಿಲ್ಲೆಯ ಪಾಲಿನ ನೀರು ಬಳಕೆಯಾಗುತ್ತಿರುವ ಕುರಿತು ಗಮನ ಸೆಳೆದ ಜಿಲ್ಲಾಧಿಕಾರಿಗಳು, ಪ್ರತಿದಿನ ಸುಮಾರು 30 ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಹರಿದುಹೋಗುತ್ತಿರುವುದನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ತಾವರಗೇರಾ ಕೆರೆಗೆ ಅಗತ್ಯವಿರುವ ನಿಗದಿತ ಪ್ರಮಾಣದ ನೀರು ಮಾತ್ರ ಬಳಕೆಯಾಗುವಂತೆ ಕ್ರಮ ಕೈಗೊಂಡು, ಉಳಿದ ನೀರು ಕೆಳಭಾಗದ ಪ್ರದೇಶಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಕಾಲುವೆ ನೀರಿನ ಸಮರ್ಪಕ ನಿರ್ವಹಣೆ ಅಧಿಕಾರಿಗಳ ಆದ್ಯತೆಯಾಗಬೇಕು. ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಕೊರತೆಯಿಂದ ತೊಂದರೆಯಾಗದಂತೆ ನಿರಂತರ ನಿಗಾ ವಹಿಸಬೇಕು. ಗೇಜ್ ನಿರ್ವಹಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.