ಹನುಮಸಾಗರ: ಕ್ರೀಡಾಕೂಟಗಳಿಗೆ ಆಗಮಿಸುವ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಆರ್‌ಪಿ ಲೆಂಕಪ್ಪ ವಾಲಿಕಾರ ಹೇಳಿದರು.
ಗ್ರಾಪಂ ಮಟ್ಟದಲ್ಲಿ ೧೨ ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.ಕ್ರೀಡಾಕೂಟಗಳು ಜುಲೈ ತಿಂಗಳಿನಲ್ಲಿ ನಡೆಯುತ್ತವೆ. ಇದಕ್ಕೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಗ್ರಾಪಂ ಸದಸ್ಯರು, ಎಸ್ಡಿಎಂಸಿ ಉಪಾಧ್ಯಕ್ಷ, ಎಸ್ಡಿಎಂಸಿ ಸದಸ್ಯರಿಗೆ ಹಾಗೂ ನಾನಾ ಶಾಲೆಗಳ ಮುಖ್ಯಶಿಕ್ಷಕರಿಗೆ ಆಹ್ವಾನ ನೀಡಬೇಕು. ದೈಹಿಕ ಶಿಕ್ಷಕರು ಕ್ರೀಡಾಕೂಟಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ಜಯಶಾಲಿಯಾದ ಶಾಲೆಯ ವಿದ್ಯಾರ್ಥಿಗಳು ನಂತರ ವಲಯದ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಾರೆ.ಆ ಕ್ರೀಡಾಕೂಟ ಕುಷ್ಟಗಿ ರಸ್ತೆಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ ನಡೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಬಸಪ್ಪ ಬಂಡಿವಡ್ಡರ, ಬಸವರಾಜ ವಡ್ಡರ, ಚಂದಪ್ಪ ಹಕ್ಕಿ, ಭಾರತಿ ದೇಸಾಯಿ, ಮೈಬೂಬಸಾಬ್, ದೈಹಿಕ ಶಿಕ್ಷಕ ಗೌರಮ್ಮ ತಳವಾರ, ಶಕುಂತಲಾ ಚಿನಿವಾಲರ, ಶಿವಲೀಲಾ, ಈರಣ್ಣ ಅಂಗಡಿ, ಶಿವಪ್ಪ ಕಮ್ಮಾರ, ತಿಪ್ಪಣ್ಣ ಪಾಲಕಾರ, ಹೂವಪ್ಪ, ಸುಧಾ ಗೌಡರ, ಗಂಗಮ್ಮ ಪತ್ತಾರ, ಇತರರು ಇದ್ದರು.