ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿ

KannadaprabhaNewsNetwork |  
Published : Sep 24, 2025, 01:01 AM IST
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಪಂಚಮಸಾಲಿ ಸಮಾಜದವರು ಸಭೆ ನಡೆಸಿದರು. | Kannada Prabha

ಸಾರಾಂಶ

ಸೋಮವಾರದಿಂದ ಜನಗಣತಿ ಆರಂಭವಾಗಿದ್ದು, ಪಂಚಮಸಾಲಿ ಸಮಾಜ ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗದೆ ಉಭಯ ಶ್ರೀಗಳ ಆದೇಶದ ಮೇರೆಗೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ (ಕೋಡ್.ಸಂಖ್ಯೆ ಎ.0868) ಎಂದು ನಮೂದಿಸಿ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪರಮೇಶಪ್ಪ ಹಲಗೇರಿ ಮನವಿ ಮಾಡಿದರು.

ರಟ್ಟೀಹಳ್ಳಿ: ಸೋಮವಾರದಿಂದ ಜನಗಣತಿ ಆರಂಭವಾಗಿದ್ದು, ಪಂಚಮಸಾಲಿ ಸಮಾಜ ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗದೆ ಉಭಯ ಶ್ರೀಗಳ ಆದೇಶದ ಮೇರೆಗೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ (ಕೋಡ್.ಸಂಖ್ಯೆ ಎ.0868) ಎಂದು ನಮೂದಿಸಿ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪರಮೇಶಪ್ಪ ಹಲಗೇರಿ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೂಡಲ ಸಂಗಮದ ಜಯಮೃತ್ಯುಂಜಯ್ಯ ಮಹಾಸ್ವಾಮಿಗಳು ಹಾಗೂ ಹರಿಹರ ಪೀಠದ ವಚನಾನಂದ ಮಹಾಸ್ವಾಮಿಗಳ ಆದೇಶದ ಮೇರೆಗೆ ಹಾಗೂ ಎಲ್ಲ ಜಾತಿಯ ಗುರುಗಳು ಧರ್ಮ ಕಾಲಂನಲ್ಲಿ ಹಿಂದೂ ಅಂತ ಬರೆಸಲು ಆದೇಶಿಸಿದ್ದು ಅದರಂತೆ ಸಮಾಜ ಬಾಂದವರು ಜಾತಿ ಗಣತಿಯಲ್ಲಿ ನಮೂದಿಸಿ ಹಾಗೂ ಕೆಲ ಪಟ್ಟ ಬದ್ಧ ಹಿತಾಸಕ್ತಿಗಳು ವಿನಾಕಾರಣ ಗೊಂದಲ ಸೃಷ್ಟಿಸಿ ಸಮಾಜವನ್ನು ದಾರಿ ತಪ್ಪಿಸುವಂತ ಕಾರ್ಯ ಮಾಡುತ್ತಿದ್ದು ಅದನ್ನು ತಾಲೂಕು ಪಂಚಮಸಾಲಿ ಖಂಡಿಸುತ್ತಿದೆ ಎಂದರು.ವಿಜಯಾನಂದ ಕಾಶಪ್ಪನವರ ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದು ನಮೂದಿಸುವಂತ ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅದನ್ನು ಪಂಚಮಸಾಲಿ ಸಮಾಜ ಬಾಂದವರು ಕಿವಿಗೊಡದೆ ಧರ್ಮ ಕಾಲಂನಲ್ಲಿ ಹಿಂದೂ ಅಂತ ನಮೂದಿಸಿ ನಾಡಿನ ಮಠಾಧೀಶರು, ಹಿಂದೂ ವೀರಶೈವ ಮಹಾಸಭಾ, ವೀರಶೈವ ಮಹಾಸಭಾ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಸಮಾವೇಶದಲ್ಲಿಯೂ ಸಹ ಧರ್ಮದ ಕಾಲಂನಲ್ಲಿ ಹಿಂದೂ ಅಂತ ಬರೆಸಲು ನಿರ್ಧರಿಸಿದ್ದು, ಯಾವೊಬ್ಬ ಮಠಾಧೀಶರು ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತ ನಮೂದಿಸಲು ಹೇಳಿಕೆ ನೀಡಿಲ್ಲ. ವಿಜಯಾನಂದ ಕಾಶಪ್ಪನವರ ಹೇಳಿಕೆಯನ್ನು ಸಾರಾ ಸಘಟಾಗಿ ತಳ್ಳಿ ಹಾಕಲಾಗುವುದು ಎಂದರು. ದೇಶದ ಐಕ್ಯತೆ ಕಾಪಾಡುವ ನಿಟ್ಟಿನಲ್ಲಿ ಜಾತಿ ಕಾಲಂನಲ್ಲಿ ಹಿಂದೂ ಅಂತ ನಮೂದಿಸುವ ನಮ್ಮ ನಿರ್ಧಾರ ಅಚಲ, ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಹಿಂದೂ ಸಮಾಜವನ್ನು ಒಡೆದಾಳುವ ನೀತಿಯ ಹುನ್ನಾರ ನಡೆಯುತ್ತಿದ್ದು ಇನ್ನು ಅನೇಕ ಧರ್ಮಗಳಲ್ಲಿ ನೂರಾರು ಒಳ ಪಂಗಡಗಳಿದ್ದು ಅವುಗಳನ್ನು ಮುಚ್ಚಿ ಹಾಕಿ ಕೇವಲ ಹಿಂದೂ ಸಮಾಜದ ಒಳ ಪಂಗಡಗಳನ್ನು ಮುನ್ನಲೆಗೆ ತಂದು ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ ನಾವೇಲ್ಲ ಒಗ್ಗಟ್ಟಾಗಿದ್ದೇವೆ ಎಂದರು. ನಡೆದಾಡುವ ದೇವರೆಂದೆ ಭಾವಿಸು ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ್ಯ ಮಹಾಸ್ವಾಮಿಗಳನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ಟ್ರಸ್ಟ ಹೇಳುತ್ತಿದೆ ಇಂತಹ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಶ್ರೀಗಳ ಉಚ್ಚಾಟನೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಕಿಡಿಕಾರಿದರು. ಮುಂಬರುವ ದಿನಗಳಲ್ಲಿ ಶ್ರೀಗಳು ರಾಜ್ಯ ಮಟ್ಟದ ಭಕ್ತರ ಸಭೆ ಕರೆಯಲಿದ್ದಾರೆ ಎರಡು ತಾಲೂಕಿನ ಪಂಚಮಸಾಲಿ ಸಮಾಜ ಶ್ರೀಗಳ ಬೆಂಬಲಕ್ಕೆ ಇದ್ದು, 30.ಎಕರೆ ಜಮೀನು ಖರುದಿ ಮಾಡುವ ನಿರ್ಧಾರ ಮಾಡಿದ್ದು ಅಲ್ಲಿ ಪ್ರತ್ಯೇಕ ಪೀಠ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದು ಎನೇ ನಿರ್ಧಾರ ಕೈಗೊಂಡರು ಅವರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಪಿ.ಡಿ ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಶಿವಾನಂದ ಪೂಜಾರ, ರವಿ ಹರವಿಶೆಟ್ಟರ, ಮಾಲತೇಶ ಬೆಳಕೆರಿ, ನಾಗನಗೌಡ ಪಾಟೀಲ, ಭರಮಗೌಡ ಪಾಟೀಲ್, ಕಾಂತೇಶ ಪಾಟೀಲ್, ವಿಶ್ವನಾಥ ಬೆಳಕೆರಿ, ರಿಂದೇಶ ಗೌಳೇರ, ಮಾಲತೇಶ ಪಾಟೀಲ್, ನಾಗರಾಜ ತೋಟದ, ಹೇಮಣ್ಣ ಅಂಗಡಿ, ಸೋಮನಗೌಡ ಪೂಜಾರ, ಶೋಭಾ ಪೂಜಾರ, ಚೆನ್ನಮ್ಮ ಪೂಜಾರ, ರಾಜೇಶ್ವರಿ ಹರವಿಶೆಟ್ಟರ, ಲಲಿತಾ ನೂಲಗೇರಿ, ಚಂದ್ರಪ್ಪ ಸೊಂಡಕ್ಕಳವರ, ವೀರೇಶ ಪೂಜಾರ, ಬಸವರಾಜ ಪೂಜಾರ ಮುಂತಾದವರು ಇದ್ದರು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ