ಶಿಗ್ಗಾಂವಿ:ಪಟ್ಟಣದ ತಹಸೀಲ್ದಾರ್ ಕಚೇರಿಯ ಹಿಂದುಗಡೆಯ ಅಪ್ಪಿನಕೇರಿ ಗೋವಿನ ಜೋಳದ ಹೊಲದಲ್ಲಿ ಚಿರತೆಯೊಂದು ಸುಮಾರು ದಿನಗಳಿಂದ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಯವರು ಮಾತ್ರ ಸೆರೆ ಹಿಡಿಯುವ ಗೋಜಿಗಿ ಹೋಗದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ರಾತ್ರಿ ವೇಳೆ ಬಂದು ಸ್ಥಳ ಪರಿಶೀಲನೆ ಮಾಡಿದರೂ ಕತ್ತಲಾಗಿದ್ದರಿಂದ ಮುಂಜಾನೆ ಬರುವುದಾಗಿ ಹೇಳಿದ ಹೋದರಾದರು ಮುಂಜಾನೆ ಬಂದರೂ ಕೂಡಾ ಚಿರತೆಯನ್ನು ಹಿಡಿಯುವವರನ್ನು ಕರೆತರುವುದಾಗಿ ಹೇಳಿ ಹೋದ ಅರಣ್ಯ ಇಲಾಖೆಯವರು ತನಿಖೆಯಾಗಲಿ ಮುಂದಿನ ಕ್ರಮಕ್ಕಾಗಲಿ ಮುಂದಾಗಿಲ್ಲ. ಅಧಿಕಾರಿಗಳು ಇದರ ಕುರಿತು ತನಿಖೆಯನ್ನು ಮಾಡಿ ಅರಣ್ಯಪ್ರದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಹಸಿರು ಸೇನಾ ಕರ್ನಾಟಕ ಜಿಲ್ಲಾ ಅಧ್ಯಕ್ಷ ವರುಣಗೌಡ ಪಾಟೀಲ ಆಗ್ರಹಿಸಿದ್ದಾರೆ.
ದಿನ ನಿತ್ಯ ಹೊಲದಲ್ಲಿ ಕಾಲ ಕಳೆಯುವ ರೈತರು ಇಂದು ಹೊಲಕ್ಕೆ ಭಯದಲ್ಲಿ ಹೋಗುವ ದಯನೀಯ ಸ್ಥಿತಿ ಬಂದಿದ್ದು, ಆದ್ದರಿಂದ ತಕ್ಷಣವಾಗಿ ಚಿರತೆಯನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಮಹಿಳಾ ಘಟಕ ಸಂಜನಾ ರಾಯ್ಕರ ಆಗ್ರಹಿಸಿದ್ದಾರೆ.ತಾಲೂಕಿನಲ್ಲಿ ಚಿರತೆಯ ಹಾವಳಿ ಹಚ್ಚಿಗೆ ಕಂಡು ಬಂದರು ಅದು ಎಲ್ಲಿ ಹೋಗಿದೆ, ಅದರ ಕುರಿತು ಸಹಾಯಕ ಅರಣ್ಯಾಧಿಕಾರಿಗಳು ತನಿಖೆಯ ಕೆಲಸವನ್ನು ಮಾಡುತ್ತಿದ್ದಾರೆ. ಚಿರತೆಯು ಒಂದೇ ಸ್ಥಳದಲ್ಲಿರದೆ ಎಲ್ಲೆಂದರಲ್ಲಿ ಸುಮಾರು ೪೦ ಕಿಮೀವರೆಗೆ ಹೆಚ್ಚು ಸ್ಥಳವನ್ನು ಬದಲಾಯಿಸುತ್ತದೆ. ಆದ್ದರಿಂದ ಅಂಥಹ ಸುಳಿವು ಸಿಕ್ಕಲ್ಲಿ ತಕ್ಷಣವಾಗಿ ಇಲಾಖೆಗೆ ತಿಳಿಸಬೇಕು ದುಂಡಶಿ ವಲಯ ಅರಣ್ಯಾಧಿಕಾರಿ ಮಲ್ಲಪ್ಪಹೇಳಿದರು.