ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಿ

KannadaprabhaNewsNetwork |  
Published : May 06, 2025, 12:17 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಕೋಡಿಹಳ್ಳಿಯ ಮಾದಿಗರ ಕಾಲೋನಿಯಲ್ಲಿ ಶ್ರೀ ಷಡಕ್ಷರ ಮುನಿ ಸ್ವಾಮೀಜಿಗಳು ಸೋಮವಾರ ಜನಜಾಗೃತಿ ಮತ್ತು ಜಾತಿಜಾಗೃತಿ ಪಾದಯಾತ್ರೆ ಮೂಲಕ ಸಮುದಾಯಕ್ಕೆ ಅರಿವು ಮೂಡಿಸಿದರು.

ಜನಜಾಗೃತಿ, ಜಾತಿಜಾಗೃತಿ ಪಾದಯಾತ್ರೆಯಲ್ಲಿ ಷಡಕ್ಷರಮುನಿ ಸ್ವಾಮೀಜಿ ಸೂಚನೆಕನ್ನಡಪ್ರಭ ವಾರ್ತೆ ಹಿರಿಯೂರು

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನಡೆಯುವ ಸಮೀಕ್ಷೆ ಸಂದರ್ಭದಲ್ಲಿ ಮಾದಿಗ ಸಮುದಾಯದವರು ಮಾದಿಗ ಜಾತಿ ನಮೂದಿಸಲು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಕೋಡಿಹಳ್ಳಿಯ ಮಾದಿಗರ ಕಾಲೋನಿಯಲ್ಲಿ ಸೋಮವಾರ ಜನಜಾಗೃತಿ ಮತ್ತು ಜಾತಿಜಾಗೃತಿ ಪಾದಯಾತ್ರೆ ಮೂಲಕ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಮಾದಿಗ ಸಮುದಾಯ ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ, ಹರಿಜನ ಮುಂತಾದ ಜಾತಿಯನ್ನು ನಮೂದಿಸ ಬೇಡಿ. ಇದರಿಂದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಸಿಗಲು ಕಷ್ಟವಾಗುತ್ತದೆ. ನೀವು ಮಾದಿಗ ಎಂದು ಬರೆಸುವುದು ಅತ್ಯವಶ್ಯಕವಾಗಿದೆ. ಮೇ 5ರಿಂದ 17ರವೆಗೆ ಸಮೀಕ್ಷೆ ನಡೆಯಲಿದ್ದು ಗಣತಿದಾರರು ನಿಮ್ಮಲ್ಲಿಗೆ ಬಂದಾಗ ಕ್ರಮ ಸಂಖ್ಯೆ-61 ರಲ್ಲಿ ಮಾದಿಗ ಜಾತಿ ಬರೆಸಿ ದಾಖಲಿಸಬೇಕು. ಮಾದಿಗ ಸಮುದಾಯಕ್ಕೆ ಹಕ್ಕು ಸ್ಥಾಪಿಸಲು ಸೌಲಭ್ಯ ಪಡೆಯಲು ನೀವು ಮಾದಿಗ ಎಂದು ಬರೆಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಕೋಡಿಹಳ್ಳಿ ಸಂತೋಷ್ ಮಾತನಾಡಿ, ಮಾದಿಗ ಸಮುದಾಯಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಅನುಕೂಲ ಸಿಗಲು ಜಾತಿ ಸಮೀಕ್ಷೆ ವೇಳೆ ಮಾದಿಗ ಎಂದು ಬರೆಸುವುದು ಅತ್ಯಂತ ಅವಶ್ಯಕವಾಗಿದೆ. ಇದುವರೆಗೆ ಅನ್ಯಾಯಕ್ಕೆ ಒಳಗಾದ ಮಾದಿಗ ಸಮುದಾಯ ಇದೀಗ ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಸಮೀಕ್ಷೆಯಲ್ಲಿ ಮಾದಿಗ ಎಂದು ಬರೆಸಿ ಜನಾಂಗಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ದೊರೆಯಲು ಎಲ್ಲರೂ ಕಾರಣರಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಠದ ಟ್ರಸ್ಟಿಗಳಾದ ಚಿದಾನಂದ್, ನಾಗ ಕುಮಾರ್, ಪೂಜಪ್ಪ, ಗ್ರಾಮದ ಮುಖಂಡರಾದ ಗೋವಿಂದಪ್ಪ, ಹೊನ್ನೂರಪ್ಪ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ