ದೇವರ ದರ್ಶನದಿಂದ ಬದುಕಿಗೆ ಹುಮ್ಮಸ್ಸು-ಮೋಟಮ್ಮ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ದೈವ ಸನ್ನಿಧಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ದೇವರ ದರ್ಶನ ಭಾಗ್ಯ ಬದುಕುವ ಹುಮ್ಮಸ್ಸು ನೀಡುತ್ತದೆ

ಕೊಪ್ಪಳ: ದೈವ ಸನ್ನಿಧಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ದೇವರ ದರ್ಶನ ಭಾಗ್ಯ ಬದುಕುವ ಹುಮ್ಮಸ್ಸು ನೀಡುತ್ತದೆ ಎಂದು ಮಾಜಿ ಸಚಿವೆ ಮೋಟಮ್ಮ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಹುಲಗಿ ಗ್ರಾಮದ ಸುಕ್ಷೇತ್ರ ಶ್ರೀಹುಲಿಗೆಮ್ಮದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಚುನಾವಣೆ ಪೂರ್ವದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಹರಕೆ ಕಟ್ಟಿಕೊಂಡ ಪ್ರಯುಕ್ತ ಸನ್ನಿಧಿಗಳ ಭೇಟಿ ಹಾಗೂ ಅಲ್ಲೆಲ್ಲ ಹೋಗಿ ದರ್ಶನ ಪಡೆದು ಬರುತ್ತಿದ್ದೇನೆ. ಉತ್ತರ ಕರ್ನಾಟಕದ ಹುಲಿಗೆಮ್ಮನ ಶಕ್ತಿ ಅಪಾರವಾದದ್ದು, ಇಲ್ಲಿ ತಾಯಿ ಜಾಗೃತಾವಸ್ಥೆಯಲ್ಲಿ ಇರುವುದು ಇಲ್ಲಿ ಕುಳಿತಾಗ ಅರಿವಿಗೆ ಬರುತ್ತದೆ ಎಂದರು.

ಮಕ್ಕಳಿಗೆ ನಾವು ಉತ್ತಮ ಶಿಕ್ಷಣ ಕೊಡುವುದರ ಜೊತೆಗೆ ದೇವರು. ಭಕ್ತಿ, ದಾನ-ಧರ್ಮ ಹಾಗೂ ಸೇವೆಯ ಗುಣಗಳನ್ನು ಕಲಿಸಿಕೊಡಬೇಕು ಎಂದರು.

ಕ್ಷೇತ್ರಕ್ಕೆ ಸ್ವಾಗತಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ದೇವಿಯ ಸನ್ನಿಧಿಯಲ್ಲಿ ಮೋಟಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಾಂಗ್ರೆಸ್ ಮಹಿಳಾ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರ, ಮುಖಂಡರಾದ ನಾಗರತ್ನ ಹುಲಗಿ, ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಎಸ್ಸಿ ಘಟಕ ಉಪಾಧ್ಯಕ್ಷ ಗಣೇಶ ಹಿಟ್ನಾಳ, ವಿಜಯಕುಮಾರ ಹುಲಗಿ, ರಾಜಾಸಾಬ ಜವಳಿ, ಸಾಹಿತ್ಯ ಗೊಂಡಬಾಳ, ಅಕ್ಷರ ಗೊಂಡಬಾಳ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುತಗುಂಡಿ ಇದ್ದರು.

Share this article