ಉದ್ಯಮಿಗಳಿಗೆ ಬ್ಯಾಂಕಿನಿಂದ ಸಿಗುವ ಸಹಕಾರಗಳ ಅರಿವಿರಬೇಕು

KannadaprabhaNewsNetwork |  
Published : Nov 20, 2025, 12:15 AM IST
19ಎಚ್ಎಸ್ಎನ್10 :  | Kannada Prabha

ಸಾರಾಂಶ

ಉದ್ದಿಮೆದಾರರು ಕೈಗಾರಿಕೆಗಳನ್ನು ಪ್ರಾರಂಭಿಸಲು ಕೇವಲ ಕೈಗಾರಿಕೆಗಳ ಬಗ್ಗೆ ತರಬೇತಿ ಮಾತ್ರವಲ್ಲ ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಕಾಸಿಯಾ ಸಂಸ್ಥೆ ಅಧ್ಯಕ್ಷರಾದ ಗಣೇಶ್ ರಾವ್ ಬಿ.ಆರ್ ತಿಳಿಸಿದರು. ಕೈಗಾರಿಕೆಗಳನ್ನು ಪ್ರಾರಂಭಿಸಲು ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರದೊಂದಿಗೆ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕೆಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಉದ್ದಿಮೆದಾರರು ಕೈಗಾರಿಕೆಗಳನ್ನು ಪ್ರಾರಂಭಿಸಲು ಕೇವಲ ಕೈಗಾರಿಕೆಗಳ ಬಗ್ಗೆ ತರಬೇತಿ ಮಾತ್ರವಲ್ಲ ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಕಾಸಿಯಾ ಸಂಸ್ಥೆ ಅಧ್ಯಕ್ಷರಾದ ಗಣೇಶ್ ರಾವ್ ಬಿ.ಆರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಎಂ.ಎಸ್.ಎಂ.ಇ ಉದ್ದಿಮೆಗಳು ತಮ್ಮ ಸಾಮರ್ಥ್ಯ ಮತ್ತು ಆರ್ಥಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎಂ.ಎಸ್.ಎಂ.ಇ ಉದ್ದಿಮೆದಾರರಿಗೆ ಕಾಸಿಯಾ ಸಂಸ್ಥೆ, ಬೆಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಹಾಸನ ಹಾಗೂ ಹಾಸನ ಜಿಲ್ಲಾ ಕೈಗಾರಿಕೆಗಳ ಸಂಘದವರ ವತಿಯಿಂದ ನಡೆದ ಒಂದು ದಿನದ ಐಇಂಒ ಯೋಜನೆ ಮತ್ತು ಝೆಡ್‌ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಲೆನಾಡು ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಬೆಳೆಯಬೇಕಾಗಿದೆ. ಉದ್ದಿಮೆದಾರರಿಗೆ ಸಾಕಷ್ಟು ತೊಂದರೆಗಳಿದ್ದು, ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಲಹೆ ಸೂಚನೆಗಳು ಸಿಗುತ್ತದೆ, ಉದ್ದಿಮೆದಾರರಿಗೆ ಕೇವಲ ತರಬೇತಿ ಜೊತೆಯಲ್ಲಿ ಕೈಗಾರಿಕೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಕೈಗಾರಿಕೆಗಳನ್ನು ಪ್ರಾರಂಭಿಸಲು ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರದೊಂದಿಗೆ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕೆಂದು ಕರೆ ನೀಡಿದರು.

ಜಿಕೈಕೇ ಜಂಟಿ ನಿರ್ದೇಶಕರಾದ ವಿ ಉಮೇಶ ಅವರು ಮತನಾಡಿ ಝೆಡ್‌ & ಎಲ್‌ಇಎಎನ್‌ ಕಾರ್ಯಾಗಾರದ ಉದ್ದೇಶವನ್ನು ಸ್ಥಳೀಯ ಎಂ.ಎಸ್.ಎಂ.ಇ ಉದ್ದಿಮೆದಾರರು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರು ಮಾಡುವುದು ಹಾಗೂ ರಫ್ತು ಮಾಡುವುದರಿಂದ ತಮ್ಮ ಆರ್ಥಿಕ ಗುಣಮಟ್ಟದಲ್ಲಿ ಸಬಲರಾಗಬೇಕೆಂದು ಮತ್ತು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಲಘು ಉದ್ಯೋಗ ಭಾರತಿ ನಿರ್ದೇಶಕರಾದ ಮದನ್ ಕುಮಾರ್ ಮಾತನಾಡಿ ಎಂ.ಎಸ್.ಎಂ.ಇ ಉದ್ದಿಮೆದಾರರು ಉತ್ಪಾದಿಸುವ ಉತ್ಪನ್ನಗಳಲ್ಲಿ "ಝೀರೋ ಎಫೆಕ್ಟ್ ಝೀರೋ ಡಿಫೆಕ್ಟ್‌ " ಪಾಲಿಸಿಯನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಯೋಚಿಸಬೇಕೆಂದು ತಿಳಿಸಿದರು.

ಹಾಸನ ಜಿಲ್ಲಾ ಅಭಿವೃದ್ಧಿ ಸಮಿತಿ ಕಾಸಿಯಾ ಹಾಸನ ಜಿಲ್ಲಾ ಪ್ಯಾನಲ್ ಅಧ್ಯಕ್ಷ ಪ್ರಕಾಶ್ ಎಸ್ ಯಾಜಿ ಮಾತನಾಡಿ, ಎಂಎಸ್‌ಎಂಇಗಳು ದೇಶದ ಅಭಿವೃದ್ಧಿಗೆ ಹಾಗೂ ಜಿಡಿಪಿ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಮಹತ್ವದಾಗಿದೆ ಎಂದು ತಿಳಿಸಿದರು. ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಹಾಗೂ ಗುಣಮಟ್ಟದ ಉತ್ಪನ್ನ ತಯಾರಿಕೆ ಬಗ್ಗೆ ಗಮನಹರಿಸಬೆಕೆಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಹಾಸನ ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಮ್, ಪ್ರಧಾನ ಕಾರ್ಯದರ್ಶಿ ಸುದರ್ಶನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ, ಉಪ ನಿರ್ದೇಶಕರು ಕೆ.ಎಸ್ ರವಿಪ್ರಸಾದ್‌, ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕಾಸಿಯಾ ಪ್ರತಿನಿಧಿಯಾದ ಶ್ರೀಧರ್, ಸುಚಿತ್ ಕುಮಾರ್, ನಿಂಗಣ್ಣ ಎಸ್ ಬಿರಾದಾರ್ ಸೇರಿದಂತೆ ಇತರರಿದ್ದರು.

PREV

Recommended Stories

ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ
ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ: ಟಿ.ಶ್ಯಾಮ್ ಭಟ್