ಕನ್ನಡಪ್ರಭ ವಾರ್ತೆ ತುಮಕೂರುಭಾರತ ಪತ್ರಿಕೋದ್ಯಮದಲ್ಲಿ ಪಾಶ್ಚಾತ್ಯೀಕರಣ ಪ್ರವೇಶಿಸಿದೆ. ಆದರೆ, ಏಷ್ಯಾದ ಪತ್ರಿಕೋದ್ಯಮವು ಸಂಸ್ಕೃತಿ ಮತ್ತು ನಂಬಿಕೆಗೆ ಋಣಿಯಾಗಿರುವುದರಿಂದ, ಇಲ್ಲಿ ನಾವು ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ನಿವೃತ್ತ ಸಹ ಕುಲಪತಿ ಪ್ರೊ. ಕೆ. ವಿ. ನಾಗರಾಜ್ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿರುವ ‘ವಿಕಸಿತ್ ಭಾರತ್@೨೦೪೭: ಭಾರತದ ಸಮಗ್ರಅಭಿವೃದ್ಧಿಯಲ್ಲಿ ಡಿಜಿಟಲ್ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ಬಹುಶಾಸ್ತ್ರೀಯ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ತಂತ್ರಜ್ಞಾನದ ರೂಪಾಂತರದಿಂದ ಉತ್ತರ ಭಾರತದಲ್ಲಿ ಡಿಜಿಟಲ್ ಅನಾಗರಿಕತೆಯನ್ನು ನೋಡುತ್ತೇವೆ. ಪ್ರತಿಯೊಬ್ಬರೂ ಡಿಜಿಟಲ್ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದಾರೆ. ಉತ್ಕೃಷ್ಟರಾಗಲು ತಂತ್ರಜ್ಞಾನವನ್ನು ಬಳಸಿಕೊಂಡಾಗ ಕೆಡುಕುಗಳಿರುವುದಿಲ್ಲ ಎಂದರು.ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದಾಗಿ ಮಾಧ್ಯಮಗಳು ಡಿ-ಗ್ಲಾಮರೈಸ್ ಆಗಿವೆ. ಎಲ್ಲರೂ ಸಂವಹನಕಾರರಾಗಿದ್ದು, ಪತ್ರಿಕೋದ್ಯಮ ಪದ ಸಂವಹನಕಾರ ಎಂದು ಬದಲಾಗುತ್ತಿದೆ. ಮುಂದುವರೆದ ದೇಶಗಳಲ್ಲಿ ಸಂವಹನ ಕಾರ್ಯಕ್ಷೇತ್ರದಲ್ಲಿ ಶೇ.50 ರಷ್ಟು ಅವಕಾಶಗಳಿವೆ. ಭಾರತದ ಅನೇಕ ಪತ್ರಕರ್ತರು ಸವಲತ್ತುಗಳನ್ನು ಹುಡುಕುತ್ತಾರೆ. ಇದೊಂದು ಸರಣಿ ಪ್ರಕ್ರಿಯೆಯಾಗಿದ್ದು, ಅಪರಾಧೀಕರಣಕ್ಕೆ ಕಾರಣವಾಗುತ್ತದೆ. ಇದರಿಂದ ವೃತ್ತಿಯು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಎಂದರು.‘ನ್ಯೂಸ್೧೮ ಕನ್ನಡ’ ಸಂಪಾದಕ ಹರಿಪ್ರಸಾದ್ ಎ.‘ಇಂಪ್ರೆಶನ್-2024’ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತ ಭ್ರಷ್ಟಾಚಾರಿ, ಕೋಮುವಾದಿ, ಜಾತಿವಾದಿಯಾಗಬಾರದು. ಧ್ವನಿ ಇಲ್ಲದವರ, ಶೋಷಿತರ ಧ್ವನಿಯಾಗಬೇಕು. ಮಾಧ್ಯಮವನ್ನು ಮುನ್ನಡೆಸಲು ಸಹಕಾರ, ಸಂವಹನ, ಬದ್ಧತೆ ಮತ್ತು ನೈತಿಕತೆ ಅತ್ಯಂತ ಅವಶ್ಯಕ ಸೂತ್ರಗಳು. ಪತ್ರಿಕೋದ್ಯಮವಷ್ಟೇ ಎಲ್ಲರನ್ನೂ ಸಮಾನವಾಗಿ ಕಾಣಲು ಸಾಧ್ಯ ಎಂದರು.ಮಾಧ್ಯಮಗಳನ್ನು ನಡೆಸುತ್ತಿರುವುದು ಉದ್ಯಮಿಗಳೇ ಹೊರೆತು ಪತ್ರಕರ್ತರಲ್ಲ. ಎಲ್ಲರ ವಿಚಾರಧಾರೆಗಳನ್ನು ಒಪ್ಪಿಕೊಳ್ಳಬೇಕು. ತಪ್ಪಿದ್ದಲ್ಲಿ ಪ್ರಶ್ನಿಸಬೇಕು. ಪತ್ರಿಕೋದ್ಯಮದಲ್ಲಿ ನಿರ್ದಿಷ್ಟಗುರಿ ಸಾಧಿಸಲು ಪೂರಕ ಕಲಿಕೆ ಮುಖ್ಯ. ಮೊದಲು ವರದಿಗಾರನಾಗಬೇಕು. ನಂತರ ಪತ್ರಿಕೋದ್ಯಮದ ಎಲ್ಲ ಭಾಗಗಳಲ್ಲೂ ಕಾರ್ಯನಿರ್ವಹಿಸುವ ಧೈರ್ಯ, ಆತ್ಮವಿಶ್ವಾಸ, ನಿಪುಣತೆ ತಾನಾಗಿಯೇ ಬರುತ್ತದೆ ಎಂದರು.ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ.ರವಿ ಮಾತನಾಡಿ, ಮೂಲ ಸಂವಹನ ಕ್ರಿಯೆ ಎಂದಿಗೂ ಬದಲಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮನುಷ್ಯನ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆ ಪ್ರಪಂಚವನ್ನು ಆಳುತ್ತದೆ ಎಂಬ ಭ್ರಮೆ ಬೇಡ. ಕಠಿಣ ಶ್ರಮ, ಸಂವಹನ, ಕ್ರಿಯಾಶೀಲತೆ, ಜ್ಞಾನ, ಬರೆವಣಿಗೆ ಪತ್ರಕರ್ತರನ್ನು, ಪತ್ರಿಕೋದ್ಯಮವನ್ನು ಸದಾಕಾಪಾಡುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ತಂತ್ರಜ್ಞಾನವುನಮ್ಮ ಸ್ಮರಣೆಯ ಗುಣಮಟ್ಟವನ್ನು ಕುಂದಿಸುತ್ತಿದೆ. ತಂತ್ರಜ್ಞಾನ ವ್ಯಸನಿಗಳಾಗಿದ್ದೇವೆ. ಅಭಿವೃದ್ಧಿಗಾಗಿ, ನಿಖರತೆಗಾಗಿ ಡಿಜಿಟಲ್ ವೇದಿಕೆಯನ್ನು ಬಳಸಬೇಕು ಎಂದರು.ಭಾರತೀಯ ಸಂವಹನ ಕಾಂಗ್ರೆಸ್‌ನ ಅಧ್ಯಕ್ಷ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ.ಬಿಪ್ಲಬ್ ಲೋಹೋ ಚೌಧರಿ ಮಾತನಾಡಿ, ವಸಾಹತುಶಾಹಿ ಕ್ರಮದಲ್ಲಿ ಸಂವಹನ ಪರಿಕಲ್ಪನೆಯ ರೂಪಾಂತರವು ನಡೆಯುತ್ತಿದೆ.ಸಂವಹನವುಎಲ್ಲವನ್ನೂ, ಎಲ್ಲರನ್ನೂಒಂದೇ ಸೂರಿನಡಿ ತರುತ್ತದೆ.ವಿಕಸಿತ್ ಭಾರತ್ ಇದರ ಮೊದಲ ಹೆಜ್ಜೆಎಂದರು.‘ಮೀಡಿಯಾ ಲಿಟೆರೆಸಿ ಇನ್ ದಿ ಟಿಜಿಟಲ್ ಇರಾ’ ಎಂಬ ಸಂಪಾದಿತ ಪುಸ್ತಕ, ಸಮ್ಮೇಳನದ ಪ್ರಬಂಧ ಸಾರ ಲೇಖಗಳ ಕೈಪಿಡಿ, ‘ಕಲ್ಪತರು ಟೈಮ್ಸ್’ಪ್ರಾಯೋಗಿಕ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.ಭೋಪಾಲ್‌ನ ಮಖನ್ ಲಾಲ್ ಚತುರ್ವೇದಿ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಜಿ. ಸುರೇಶ್‘ ಭಾರತದಲ್ಲಿ ಡಿಜಿಟಲ್ ಪರಿವರ್ತನೆಗೆ ಮಾಧ್ಯಮ ಸಾಕ್ಷರತೆಯಅಗತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.ಪ್ರೊ.ಕೆ.ಜಿ. ಸುರೇಶ್,ಪ್ರೊ. ಪ್ರೊ. ನಿರಂಜನ ವಾನಳ್ಳಿ, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಡಾ.ಯು. ಬಿ. ಪವನಜ, ಪ್ರೊ.ರಮೇಶ್ ಸಾಲಿಯಾನ್, ಡಾ.ಸಂಸ್ಕೃತಿ ಗುಲ್ವಾಡಿ, ಪ್ರೊ.ಸಪ್ನಾ ಎಂ.ಎಸ್.,ಸಂವಾದದಲ್ಲಿ ಭಾಗವಹಿಸಿದ್ದರು.
ಸಮ್ಮೇಳನ ಹಾಗೂ ಮಾಧ್ಯಮ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ.ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಉಪಸ್ಥಿತರಿದ್ದರು .ಒಡಿಶಾದ ಉತ್ಕಲ್ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಉಪೇಂದ್ರ ಪಾಡಿ ವಂದಿಸಿದರು.ಫೋಟೋ: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿರುವ ‘ವಿಕಸಿತ್ ಭಾರತ್@೨೦೪೭: ಭಾರತದ ಸಮಗ್ರಅಭಿವೃದ್ಧಿಯಲ್ಲಿ ಡಿಜಿಟಲ್ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ಬಹುಶಾಸ್ತ್ರೀಯ ರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.