ಪರಿಸರದ ಉಳಿವಿಗೆ ಪ್ರತಿಯೊಬ್ಬರು ಮುಂದಾದರೆ ಆಮ್ಲಜನಕ, ಕಾಲ-ಕಾಲಕ್ಕೆ ಮಳೆಯಾಗುವುದು ಸೇರಿದಂತೆ ಮನುಷ್ಯನಿಗೆ ನೈಸರ್ಗಿಕವಾಗಿ ಸಂಪನ್ಮೂಲ ಸಿಗಲಿದೆ.
ಕನಕಗಿರಿ:
ಗಿಡ ನೆಟ್ಟು ಪೋಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂದು ಶಿರಸ್ತೇದಾರ ಅನಿತಾ ಇಂಡಿ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿದರು. ಪರಿಸರ ನಮಗೆ ಉಸಿರಾಗಿದೆ. ಗಿಡ-ಮರಗಳಿಲ್ಲದೆ ಮಾನವ ಜೀವಿಸಲಾರ. ಮನುಷ್ಯ ಪ್ರಕೃತಿಯ ಭಾಗವಾಗಿ ಬದುಕುತ್ತಾನೆ ಎಂದ ಅವರು, ಪರಿಸರದ ಉಳಿವಿಗೆ ಪ್ರತಿಯೊಬ್ಬರು ಮುಂದಾದರೆ ಆಮ್ಲಜನಕ, ಕಾಲ-ಕಾಲಕ್ಕೆ ಮಳೆಯಾಗುವುದು ಸೇರಿದಂತೆ ಮನುಷ್ಯನಿಗೆ ನೈಸರ್ಗಿಕವಾಗಿ ಸಂಪನ್ಮೂಲ ಸಿಗಲಿದೆ ಎಂದರು.
ಮನೆಯ ಮುಂದೆ, ಹೊಲ, ತೋಟಗಳಲ್ಲಿ ಗಿಡ-ಮರ ಬೆಳೆಸಬೇಕಾಗಿದೆ. ಜಾಗತೀಕರಣದಲ್ಲಿ ಪರಿಸರದ ಸಂರಕ್ಷಣೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಧ್ಯೇಯವಾಗಬೇಕು ಎಂದು ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಸಿ ನೆಟ್ಟರು.
ಈ ವೇಳೆ ಶಿರಸ್ತೇದಾರ ಶರಣಪ್ಪ, ಪ್ರಕಾಶ, ಮಂಜುನಾಥ ಹಿರೇಮಠ, ಕಂದಾಯ ನೀರಿಕ್ಷಕ ರವೀಶ ಹಿರೇಮಠ, ನಿಲಾಂಬಿಕಾ, ಸಂಗಮೇಶ ಗುಂಡೂರಾವ್, ವಿಜಯ್, ಗುರುಲಿಂಗಯ್ಯ, ಅಮರೇಶ ತೆಗ್ಗಿನಮನಿ, ಅಮರೇಶ, ಮುತ್ತಣ್ಣ, ಗ್ರಾಮ ಆಡಳಿತಾಧಿಕಾರಿ ಶರಣಪ್ಪ ಚಳಿಗೇರಿ, ಯಂಕೋಬ, ಮೈಬೂಬ ಸೇರಿದಂತೆ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.