ಕನ್ನಡಪ್ರಭವಾರ್ತೆ ಜಮಖಂಡಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈವರ್ಷ 0.4 ಡಿಗ್ರಿ ಸೆಲ್‌ಸಿಯಸ್‌ನಷ್ಟು ಉಷ್ಣತಾಂಶ ಹೆಚ್ಚಿದೆ. ಇದು ಹೀಗೆ ಮುಂದುವರಿದರೆ ಜನಜೀವನಕ್ಕೆ ತುಂಬಾ ತೊಂದರೆಯಾಗುತ್ತದೆ. ಉತ್ತರ ಭಾರತದಲ್ಲಿ 52 ಡಿಗ್ರಿಯಷ್ಟು ದಾಖಲೆಯ ಪ್ರಮಾಣದಲ್ಲಿ ತಾಪಮಾವ ಹೆಚ್ಚಾಗಿ ಸಾರ್ವಜನಿಕರು ಅನುಭವಿಸಿದ ತೊಂದರೆ ಕಂಡಿದ್ದೇವೆ. ಆದ್ದರಿಂದ ಪ್ರಕೃತಿಯನ್ನು ಕಾಪಾಡಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದರು.
ತಹಸೀಲ್ದಾರ್ ಸದಾಶಿವ ಮುಕ್ಕೊಜಿ ಮಾತನಾಡಿ, ತಾಲೂಕು ಆಡಳಿತ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಸುಮಾರು 12 ಸಾವಿರ ಸಸಿಗಳನ್ನು ತಾಲೂಕಿನಾದ್ಯಂತ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು, ಸಕಾಲಕ್ಕೆ ಮಳೆ ಬೆಳೆಯಾಗಲು ವೃಕ್ಷಗಳು ಬೇಕು. ಆದ್ದರಿಂದ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.ಅರಣ್ಯ ಇಲಾಖೆಯ ಅಧಿಕಾರಿ ಪವನ ಕುರಿನಿಂಗ ಮಾತನಾಡಿ, ಇಲಾಖೆಯ ವತುಯಿಂದ ತಾಲೂಕಿನಾದ್ಯಂತ 37 ಸಾವಿರ ಸಸಿಗಳನ್ನು ನೆಡುವಗುರಿ ಹೊಂದಿದ್ದೇವೆ. ತೊದಲಬಾಗಿ ಗ್ರಾಮದಿಂದ ಚಿಕ್ಕಲಕೆ ಕ್ರಾಸ್‌ವರೆಗೆ ಸಸಿಗಳನ್ನು ನೆಡುವ ಕೆಲಸ ಪ್ರಾರಂಭಿಸಿದ್ದೇವೆ. ರೈತರ ಜಮೀನುಗಳ ಹೊಂದಿಗೆ ರಸ್ತೆ ಪಕ್ಕದಲ್ಲಿ ಇಲಾಖೆಯಿಂದ ನೆಟ್ಟಿರುವ ಸಸಿಗಳನ್ನು ರೈತರೇ ರಕ್ಷಿಸಿಬೇಕು. ರೈತರಿಗೆ ಬೇಕಾಗುವ ಸಸಿಗಳನ್ನು ನೆಡಲಾಗುತ್ತದೆ ಎಂದರು.
ನಗರಸಭೆಯ ಮುಖ್ಯಾಧಿಕಾರಿ ಲಕ್ಷ್ಮೀ ಅಷ್ಟಗಿ, ನಗರ ಪಿಎಸ್‌ಐ ಎನ್.ಆರ್. ಖಿಲಾರಿ, ಸೇರಿದಂತೆ ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.