ಪರಿಸರ ರಕ್ಷಣೆ ಭಾಷಣಕ್ಕೆ ಸೀಮಿತವಾಗದಿರಲಿ: ಸಿಪಿಐ ಬಸವರಾಜ

KannadaprabhaNewsNetwork |  
Published : Jun 07, 2025, 03:22 AM IST
ರಟ್ಟೀಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ವಿವಿಧ ಬಗೆಯ ಸಸಿ ನಡೆಸುವ ಮೂಲಕ ವಿಶ್ವ ಪರಿಸರ ದಿನಾಚರಣೆ ಮಾಡಲಾಯಿತು. | Kannada Prabha

ಸಾರಾಂಶ

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದನ್ನು ಕೇವಲ ತೋರಿಕೆಗೆ ಸಸಿ ನೆಟ್ಟು ಕೈಬಿಡುವುದಲ್ಲ. ಅದರ ಪಾಲನೆ, ಪೋಷಣೆ ಮಾಡಿದರೆ ವಿಶ್ವ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ.

ರಟ್ಟೀಹಳ್ಳಿ: ಪರಿಸರ ಸಂರಕ್ಷಣೆ ಕೇವಲ ಭಾಷಣಗಳಿಗೆ ಸೀಮಿತಗೊಳಿಸಬಾರದು. ಪ್ರಕೃತಿಯನ್ನು ಪ್ರೀತಿಸಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಸಿಪಿಐ ಪಿ.ಎಸ್. ಬಸವರಾಜ ಅಭಿಪ್ರಾಯಪಟ್ಟರು.ಪೊಲೀಸ್ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಹಾಗೂ ತಾಲೂಕು ಪತ್ರಕರ್ತರ ಸಹಯೋಗದಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದನ್ನು ಕೇವಲ ತೋರಿಕೆಗೆ ಸಸಿ ನೆಟ್ಟು ಕೈಬಿಡುವುದಲ್ಲ. ಅದರ ಪಾಲನೆ, ಪೋಷಣೆ ಮಾಡಿದರೆ ವಿಶ್ವ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು. ಪಿಎಸ್‍ಐ ರಮೇಶ ಪಿ.ಎಸ್. ಮಾತನಾಡಿ, ಪರಿಸರ ರಕ್ಷಣೆ ಎಂಬುದು ಮಾನವನ ಬದುಕಿಗೆ ಅತ್ಯಾವಶ್ಯಕವಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೆಲ, ಜಲ, ಗಾಳಿ, ನೀರು, ಪರಿಸರ ಸಕಲ ಜೀವಿಗಳಿಗು ಆಸರೆಯಾಗಿದ್ದು, ಇದು ಇಡೀ ಗ್ರಹದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದರು.

ತಾಲೂಕು ಪಂಚಾಯಿತಿ ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ, ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಗುಡ್ಡಾಚಾರಿ ಕಮ್ಮಾರ, ನಾಗನಗೌಡ ಕೋಣ್ತಿ, ರಾಮಣ್ಣ ಮಕರಿ, ಫಕ್ಕಿರೇಶ ತುಮ್ಮಿನಕಟ್ಟಿ, ಪಿಎಸ್‌ಐ ಕೃಷ್ಣಪ್ಪ ತೋಪಿನ, ಎಎಸ್‌ಐ ಅಶೋಕ ಕೊಂಡ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಚಿಕ್ಕಯಡಚಿ: ತಾಲೂಕಿನ ಚಿಕ್ಕಯಡಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಫಕ್ಕೀರಪ್ಪ ಚಲವಾದಿ, ಮುಖ್ಯ ಶಿಕ್ಷಕ ಕೆ.ಜಿ. ಚನ್ನಳ್ಳಿ, ಶಿಕ್ಷಕರಾದ ವಿ.ವಿ. ಅಂಗಡಿ, ಕೆ. ಷಹಜಹಾನ್, ಮಂಗಳಾ ಕೆ.ಬಿ. ಚಂದ್ರಶೇಖರ ಅಂಗಡಿ, ವಿ.ಬಿ. ಉಜ್ಜಗೋಳ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.ಪಿಎಂ ಇ ಡ್ರೈವ್‌ ಯೋಜನೆಯಡಿ ದ್ವಿಚಕ್ರ ವಾಹನ ಹಸ್ತಾಂತರ

ರಾಣಿಬೆನ್ನೂರು: ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯ ಪಿಎಂ ಈ ಡ್ರೈವ್ ಯೋಜನೆಯಡಿ ಮುರಿಗೆಯ್ಯ ಬೆಳವಿಗಿಮಠ ದಂಪತಿಗಳಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕೀಲಿ ಕೈಯನ್ನು ಸಂಸದ ಬಸವರಾಜ ಬೊಮ್ಮಾಯಿ ಅವರು ಹಸ್ತಾಂತರಿಸಿದರು.ಶಹರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಬಹದ್ದೂರ ದೇಸಾಯಿ ಹೀರೋ ಬೈಕ್ ಶೋ ರೂಂನಲ್ಲಿ ಶುಕ್ರವಾರ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕೀಲಿ ಕೈಯನ್ನು ನೀಡಿದರು.ಈ ವೇಳೆ ಪವನಕುಮಾರ ಬಹದ್ದೂರ ದೇಸಾಯಿ, ಬಾಬಣ್ಣ ಪಾಟೀಲ, ಸಂತೋಷಕುಮಾರ ಪಾಟೀಲ, ಬಸವರಾಜ ಅರಬಗೊಂಡ ಮತ್ತಿತರರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ