ನರಗುಂದ: ಭಾರತ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಸಂವಿಧಾನ ರಚನೆಯಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಜಗತ್ತ ನಾಯಕ ಕಣವಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸರ್ಕಾರಿ ಶ್ರೀಸಿದ್ದಲಿಂಗೇಶ್ವರ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಸಹಾಯಕ ಸರ್ಕಾರಿ ಅಭಿಯೋಜಕರು, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಶು ಸಂಗೋಪಣೆ ಇಲಾಖೆ, ತೋಟಗಾರಿಕೆ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೆ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ, ಸಭೆ ಸ್ವಾತಂತ್ರ್ಯ (ಶಾಂತಿಯುತ ಸಭೆ) ಧರ್ಮದ ಸ್ವಾತಂತ್ರ್ಯ, ಸಾಂವಿಧಾನಿಕ ಪರಿಹಾರಗಳ ಹಕ್ಕು ಹೇಬಿಯಸ್ ಕಾರ್ಪಸ್, ಮ್ಯಾಂಡಮಸ, ನಿಷೇಧ, ಸೆರ್ಟಿಯೊರಾರಿ ಮತ್ತು ಕ್ವೊ ವಾರಂಟೊ ಮುಂತಾದ ಬರಹಗಳ ಮೂಲಕ ನಾಗರಿಕ ಹಕ್ಕುಗಳ ರಕ್ಷಣೆ. ಜನಾಂಗ, ಜನ್ಮಸ್ಥಳ, ಧರ್ಮ, ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲ ನಾಗರಿಕರಿಗೆ ಮೂಲಭೂತ ಹಕ್ಕುಗಳು ಸಾರ್ವತ್ರಿಕವಾಗಿ ಅನ್ವಯಿಸುತ್ತವೆ. ಭಾರತೀಯ ದಂಡ ಸಂಹಿತೆ ಮತ್ತು ಇತರ ಕಾನೂನುಗಳು ಈ ಹಕ್ಕುಗಳ ಉಲ್ಲಂಘನೆಗೆ ಶಿಕ್ಷೆ ಸೂಚಿಸುತ್ತವೆ, ಇದು ನ್ಯಾಯಾಂಗದ ವಿವೇಚನೆಗೆ ಒಳಪಟ್ಟಿರುತ್ತದೆ ಎಂದರು.ಡಾ. ಆನಂದಕುಮಾರ ಲಾಳಸಂಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಎಂ. ಬಡಿಗೇರ ಡಾ. ಆರ್.ಸಿ. ಕೊರವನವರ, ಬಸವರಾಜ ಬಾಗಿ, ಎಚ್.ಎಂ. ಕುದಾವಂದ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನರ, ವಿ.ಎಸ್. ದೇಶಪಾಂಡೆ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಬಿ. ಕುಲಕರ್ಣಿ, ಕೆ.ಎಸ್. ಹೂಲಿ, ಆರ್.ಆರ್. ನಾಯ್ಕರ, ಜೆ.ಸಿ. ಬೋಗಾರ, ಡಿ.ಬಿ. ಯಲ್ಲಿಗಾರ, ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.