ಗದಗ: ನರ್ಸಿಂಗ್ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗದೇ ತಮ್ಮ ವೃತ್ತಿಯಲ್ಲಿ ಬದ್ಧತೆ ಕಾಪಾಡಿಕೊಂಡು, ನಿರಂತರ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸಬೇಕು. ಆಸ್ಪತ್ರೆಯಲ್ಲಿ ರೋಗಿಗಳನ್ನು ಆತ್ಮೀಯತೆಯಿಂದ ಉಪಚರಿಸಬೇಕು ಎಂದು ಸೋಲೂರನ ರಾಜಶೇಖರಯ್ಯ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸ್ ಮತ್ತು ಆಸ್ಪತ್ರೆಯ ಪ್ರಾಚಾರ್ಯ, ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯ ಡಾ. ಸಂಕನಗೌಡ ಪಾಟೀಲ ಹೇಳಿದರು.
ಮಂಡ್ಯ ಜಿಲ್ಲೆಯ ಬೇಲೂರನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆದಿಚುಂಚನಗಿರಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಚಾರ್ಯ ವಿಕ್ಟೋರಿಯಾ ಸರ್ವಂದ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳನ್ನು ತಮ್ಮ ಬಂಧುಗಳಂತೆ ತಿಳಿದು ಆರೈಕೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಪ ಸದಸ್ಯ ಹಾಗೂ ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್.ವಿ. ಸಂಕನೂರ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಅಭಿಮಾನ ಬೆಳೆಸಿಕೊಳ್ಳಬೇಕು. ಪದವಿಯ ಜತೆಗೆ ಜ್ಞಾನ, ಕೌಶಲ್ಯ ಬೆಳೆಸಿಕೊಳ್ಳಬೇಕು. ರೋಗಿಗಳಿಗೆ ಔಷಧಿಗಿಂತಲೂ ಆತ್ಮೀಯತೆ, ಬಾಂಧವ್ಯಯುತ ಸೇವೆ ದೊರೆಯಬೇಕು ಎಂದರು.ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನ ಉಪಾಧ್ಯಕ್ಷ ಡಾ. ಪ್ರಕಾಶ ಸಂಕನೂರ, ನಿರ್ದೇಶಕಿ ಡಾ. ಶ್ವೇತಾ ಸಂಕನೂರ, ವಿದ್ಯಾರ್ಥಿ ಪ್ರತಿನಿಧಿ ಅನುಷಾ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಡಾ. ಮೀನಾಕ್ಷಿ ದೇವಾಮಗಮಠ ಸಂಸ್ಥೆಯ ವಾರ್ಷಿಕ ವರದಿ ಓದಿದರು. ನರ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಅರ್ಪಿತಾ ಹಾಗೂ ರೇಣುಕಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕವಿತಾ ನಡೆಸಿಕೊಟ್ಟರು.