ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಮೇಯರ್ ಕಿಡಿ

KannadaprabhaNewsNetwork |  
Published : Apr 19, 2026, 02:15 AM IST
ಮೇಯರ್‌ ಜ್ಯೋತಿ ಪಾಟೀಲ | Kannada Prabha

ಸಾರಾಂಶ

ಮಹಿಳೆಯರಿಂದಲೇ ನಡೆಸಲ್ಪಟ್ಟ ಮತ್ತು ಒಂದೇ ಕುಟುಂಬ ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಲ್ಲ ಎನ್ನುವ ಕಾರಣಕ್ಕೆ ಈ ವಿಧೇಯಕ ವಿರೋಧಿಸುತ್ತಿದೆ ಎಂದು ಮೇಯರ್‌ ಜ್ಯೋತಿ ಪಾಟೀಲ ಹೇಳಿದರು.

ಧಾರವಾಡ:

12ನೇ ಶತಮಾನದ ಅನುಭವ ಮಂಪಟದ ಸಂಸತ್ತಿನಲ್ಲಿ ಅಕ್ಕಮಹಾದೇವಿಗೆ ಪ್ರಾತಿನಿಧ್ಯ ನೀಡಿದ ಸಂಸ್ಕೃತಿ ಇರುವ ಈ ನಾಡಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುವ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ಗೆ ಸೋಲಿನ ಭಯ ಕಾಡುತ್ತಿದೆ ಎಂದು ಮೇಯರ್ ಜ್ಯೋತಿ ಪಾಟೀಲ್ ಹೇಳಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದಲೇ ನಡೆಸಲ್ಪಟ್ಟ ಮತ್ತು ಒಂದೇ ಕುಟುಂಬ ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಲ್ಲ ಎನ್ನುವ ಕಾರಣಕ್ಕೆ ಈ ವಿಧೇಯಕ ವಿರೋಧಿಸುತ್ತಿದೆ ಎಂದು ಛೇಡಿಸಿದರು.

ನಾರಿಶಕ್ತಿ ವಂದನಾ ಕಾಯಿದೆಗೆ ಸೋಲುಂಟಾಗಲು ಕಾರಣವಾಗಿರುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲವಾಗಿದೆ. ಸರ್ವಾಧಿಕಾರ ಮತ್ತು ಏಕ ಕುಟುಂಬ ಕೇಂದ್ರಿತ ರಾಜಕಾರಣವೇ ಕಾಂಗ್ರೆಸ್‌ ಸಂಸ್ಕೃತಿ. ಹೀಗಾಗಿ ಅವರು ಮಹಿಳೆಯರು ರಾಜಕೀಯವಾಗಿ ಬೆಳೆಯುವುದನ್ನು ವಿರೋಧಿಸುತ್ತಿದ್ದಾರೆ ಎಂದು ಹರಿಹಾಯ್ದರು.ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಐತಿಹಾಸಿಕ ನಿರ್ಣಯ ಕೈಗೊಂಡು ಆ ಮೂಲಕ ದೇಶದ ಮಹಿಳೆಯರು ರಾಜಕೀಯ ಪ್ರಾತಿನಿಧ್ಯ ಪಡೆದು ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವ್ಯವಸ್ಥೆ ಮಾಡಿದ್ದರು. ಆದರೆ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಈ ಮಸೂದೆ ವಿರೋದ್ಧ ಮತ ಚಲಾಯಿಸಿ ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ಕಾಂಗ್ರೆಸ್ ಅಭಿವೃದ್ಧಿ ವಿರೋಧಿಯಾಗಿದ್ದು, ವಿನಾ ಕಾರಣ ಈ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಜ್ಯೋತಿ ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರತ್ನಾಬಾಯಿ ನಾಝರೆ, ಅನಿತಾ ಚಳಗೇರೆ, ಲಕ್ಷ್ಮೀ ಹಿಂಡಸಗೇರಿ, ರೂಪಾ ಚೌಧರಿ, ಮಹಾಲಕ್ಷ್ಮೀ ಕುಲಕರ್ಣಿ, ಅಶ್ವಿನಿ ವೀರಾಪೂರ ಹಾಗೂ ಸುಮಿತ್ರಾ ಬಡಿಗೇರ ಉಪಸ್ಥಿತರಿದ್ದರು.ಕೋಟ್‌..ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ವಿರೋಧಿಸಿರುವ ಕಾಂಗ್ರೆಸ್‌ಗೆ ದೇಶದೆಲ್ಲಡೆ ಮಹಿಳೆಯರು ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ. ಎಲ್ಲ ಚುನಾವಣೆಗಳಲ್ಲೂ ಮಹಿಳೆಯರು ಕಾಂಗ್ರೆಸ್ ತಿರಸ್ಕರಿಸುವುದು ನಿಶ್ಚಿತ.ಜ್ಯೋತಿ ಪಾಟೀಲ್, ಮೇಯರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಂಡ್ ಪವರ್ ಕಾಟಕ್ಕೆ ಬೇಸತ್ತು ಹೈಟೆನ್ಷನ್ ಕಂಬ ಏರಿದ ರೈತ
ತುಂಗಭದ್ರಾ ಒಡಲು ಬಗೆದು, ಮರಳು ದಂಧೆ