ಮಹಿಳೆಯರ ದುಡಿಮೆಯಿಂದ ಬಡತನ ನಿರ್ಮೂಲನೆ

KannadaprabhaNewsNetwork | Published : Mar 10, 2024 1:30 AM

ಸಾರಾಂಶ

ಮಾಗಡಿ: ದುಡಿಯುವ ಕೈಗಳಿಗೆ ಕೌಶಲ್ಯ ತರಬೇತಿ ನೀಡಿ ಆರ್ಥಿಕ ಸಹಾಯ ಮಾಡಿದರೆ ಮಹಿಳೆಯರೇ ಬಡತನ ನಿರ್ಮೂಲನೆ ನಿವಾರಿಸಿಕೊಳ್ಳುವರು ಎಂದು ರಾಜ್ಯ ಒಕ್ಕೂಟದ ನಿರ್ದೇಶಕ ಅಶೋಕ್ ತಿಳಿಸಿದರು.

ಮಾಗಡಿ: ದುಡಿಯುವ ಕೈಗಳಿಗೆ ಕೌಶಲ್ಯ ತರಬೇತಿ ನೀಡಿ ಆರ್ಥಿಕ ಸಹಾಯ ಮಾಡಿದರೆ ಮಹಿಳೆಯರೇ ಬಡತನ ನಿರ್ಮೂಲನೆ ನಿವಾರಿಸಿಕೊಳ್ಳುವರು ಎಂದು ರಾಜ್ಯ ಒಕ್ಕೂಟದ ನಿರ್ದೇಶಕ ಅಶೋಕ್ ತಿಳಿಸಿದರು.

ಪಟ್ಟಣದ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೌಶಲ್ಯ ಕೇಂದ್ರದಲ್ಲಿ ಹೊಲಿಗೆ ತರಬೇತಿ ಪಡೆದ 60 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚಿನ ಕೌಶಲ್ಯ ತರಬೇತಿಗಳು ನಡೆಯಬೇಕು. ತರಬೇತಿ ಪಡೆದವರು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸುಧಾರಣೆ ಕಂಡುಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ ಧನಂಜಯ ಮಾತನಾಡಿ, ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡುತ್ತಿರುವ ಸಮೃದ್ಧ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭಾಗಕ್ಕೆ ವರದಾನವಾಗಿದೆ. ಹೀಗಾಗಿ ಸರಕಾರ ಫಲಾನುಭವಿಗಳನ್ನು ಗುರುತಿಸಿ ತರಬೇತಿದಾರರಿಗೆ ಯಂತ್ರಗಳನ್ನು ವಿತರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಗ್ರಾಮೋದ್ಯೋಗ ಯೋಜನೆ ಅಡಿಯಲ್ಲಿ ಅರವತ್ತು ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದೇವೆ. ಹೀಗಾಗಿ ಸರ್ಕಾರ ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದೆ. ಇದು ಯುವತಿಯರ ಹಾಗೂ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಹಕಾರಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆ ವತಿಯಿಂದ ವಿಶ್ವಕರ್ಮ ಕುಟುಂಬದವರಿಗೆ ಹಾಗೂ ಭಜಂತ್ರಿಗಳ ಕುಟುಂಬಗಳಿಗೆ, ಕಟ್ಟಡ ಕಾರ್ಮಿಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಡಾ. ನಂಜುಂಡಯ್ಯ, ಕಾರ್ಮಿಕ ಹಾಗೂ ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುರೇಂದ್ರ, ಮಾಗಡಿ ಕಸಾಪ ಅಧ್ಯಕ್ಷ ತಿ.ನಾ ಪದ್ಮನಾಭ, ತಾಪಂ ಮಾಜಿ ಅಧ್ಯಕ್ಷ ಶಿವರಾಜು, ಉಪನ್ಯಾಸಕರಾದ ಲೀಲಾವತಿ, ಸರಸ್ವತಿ ಇತರರು ಪಾಲ್ಗೊಂಡಿದ್ದರು.

ಫೋಟೊ 9ಮಾಗಡಿ1 :

ಮಾಗಡಿಯ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೌಶಲ ಕೇಂದ್ರದಲ್ಲಿಹೊಲಿಗೆ ತರಬೇತಿ ಪಡೆದ 60 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ರಾಜ್ಯ ಒಕ್ಕೂಟದ ನಿರ್ದೇಶಕ ಅಶೋಕ್ ವಿತರಿಸಿದರು.

Share this article