ಹುಬ್ಬಳ್ಳಿ:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈಶ್ವರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಜಾತಿಯಲ್ಲಿ ಬೇರೆ-ಬೇರೆಯಾಗಿದ್ದರೂ ತಾಯಿ- ಮಗನಂತೆ ಚೆನ್ನಮ್ಮ ಮತ್ತು ರಾಯಣ್ಣ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಲು ಶ್ರಮಿಸಿದ್ದಾರೆ. ಹಿಂದೆ ರಾಯಣ್ಣನಿಗೆ ಮೋಸ ಮಾಡಿದ ಮಲ್ಲಪ್ಪ ಶೆಟ್ಟಿಯಂತಹ ದೇಶ ದ್ರೋಹಿಗಳು ಇಂದಿಗೂ ದೇಶದ ಒಳಗೆ ಮತ್ತು ಹೊರಗಿದ್ದಾರೆ. ಅವರ ಷಡ್ಯಂತ್ರಕ್ಕೆ ಒಳಗಾಗದೇ, ಸಮಾಜ ಬಾಂಧವರೆಲ್ಲರು ಒಂದಾಗಿ ದೇಶದ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.ಕೇಂದ್ರದಲ್ಲಿರುವ ವಿಪಕ್ಷಗಳು ದೇಶವನ್ನು ದುರ್ಬಲಗೊಳಿಸುವ ಕಾರ್ಯ ನಡೆಸುತ್ತಿವೆ. ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿದ್ದರೂ, ಅವರನ್ನು ಹೀಯಾಳಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿದೆ. ರಾಷ್ಟ್ರದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ನಡೆಸಲಾಗುತ್ತಿದೆ ಎಂದರು.
ಅದಕ್ಕೂ ಮುನ್ನ ಗಜಾನನ ಮಹಾಮಂಡಳದ ಸಂಸ್ಥಾಪಕ ಅಧ್ಯಕ್ಷ ಡಿ. ಗೋವಿಂದರಾವ್ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಸಾನ್ನಿಧ್ಯ ವಹಿಸಿದ್ದ ಡಾ. ಚಂದ್ರಶೇಖರ ಶಿವಯೋಗಿ ರಾಜೇಂದ್ರ ಶ್ರೀ ಹಾಗೂ ಮನಸೂರಿನ ಡಾ. ಬಸವರಾಜ ದೇವರು ಆಶೀರ್ವಚನ ನೀಡಿದರು.