ಜಾನಪದ ಕಲಾವಿದರ ಕಲ್ಯಾಣಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ

KannadaprabhaNewsNetwork |  
Published : Mar 09, 2024, 01:32 AM IST
ಕೆ ಕೆ ಪಿ ಸುದ್ದಿ 01:ನಗರದ ಲಯನ್ಸ್ ಸಂಸ್ಥೆಯ ಆವರಣ ದಲ್ಲಿ ಜಾನಪದ ಪರಿಷತ್ ನ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.  | Kannada Prabha

ಸಾರಾಂಶ

ಕನಕಪುರ: ಜಾನಪದ ಕಲೆ ಮತ್ತು ಕಲಾವಿದರ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸುವ ಅಗತ್ಯವಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರದ ಐಸಿಸಿಆರ್ ಸದಸ್ಯ ಡಾ.ಎಸ್ ಬಾಲಾಜಿ ತಿಳಿಸಿದರು.

ಕನಕಪುರ: ಜಾನಪದ ಕಲೆ ಮತ್ತು ಕಲಾವಿದರ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸುವ ಅಗತ್ಯವಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರದ ಐಸಿಸಿಆರ್ ಸದಸ್ಯ ಡಾ.ಎಸ್ ಬಾಲಾಜಿ ತಿಳಿಸಿದರು.

ನಗರದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಏರ್ಪಡಿಸಿದ್ದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಜಾನಪದ ಕಲಾವಿದರ ದಾಖಲೀಕರಣ, ಕ್ಷೇತ್ರ ಕಾರ್ಯ ಮೊದಲಾದ ಮೂಲ ಉದ್ದೇಶದಿಂದ 2015 ಮಾ. 6ರಂದು ಕನ್ನಡ ಜಾನಪದ ಪರಿಷತ್ ಸ್ಥಾಪಿಸಿ ಸರ್ಕಾರದ ನೆರವಿಲ್ಲದೆ ರಾಜ್ಯಾದ್ಯಂತ 9 ವರ್ಷದಿಂದ ನಿರಂತರವಾಗಿ 8 ಸಾವಿರಕ್ಕೂ ಹೆಚ್ಚು ಜಾನಪದ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಿ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಕಲಾವಿದರ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದರು.

ಪರಿಸರ ಪ್ರೇಮಿ, ಲಯನ್ಸ್ ಸಂಸ್ಥೆ ಸದಸ್ಯ ಮರಸಪ್ಪರವಿ ಮಾತನಾಡಿ, ಇಂದು ವಿದ್ಯಾರ್ಥಿ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಮಾನವೀಯ ಮೌಲ್ಯ ಬಿತ್ತುವ ಜಾನಪದ ಸೇವೆ ಶ್ಲಾಘನೀಯ ಎಂದರು.

ಇದೇ ವೇಳೆ ದುಬೈ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಿದರಾದ ಕೆ ನಾಗರಾಜ, ಡಾ.ಬಿ.ಆರ್.ಶಿವಕುಮಾರ್, ಅರುಣ್ ವೇ. ಚಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಕೆ ನಾಗರಾಜು, ಕಜಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕನಕತಾರ, ವಿಭಾಗೀಯ ಸಂಚಾಲಕ ಎ.ಪಿ.ಕುಮಾರ್, ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ, ಕಾರ್ಯಾಧ್ಯಕ್ಷ ಡಾ.ಚಂದ್ರ, ತಾಲೂಕು ವೈದ್ಯಾಧಿಕಾರಿ ಜೆ ಈ ರಾಜು, ಎನ್ಎಸ್ಎಸ್ ಸಲಹಾ ಸಮಿತಿ ಸದಸ್ಯ ಡಾ. ಎಂ ಕೃಷ್ಣ, ಮುಖ್ಯಶಿಕ್ಷಕ ರಾಜೇಶ್ ಹಾಜರಿದ್ದರು.

ಸಿ. ಚಂದ್ರಾಜ್, ವೆಂಕಟಾಚಲ,ಶಿವರಾಜು, ಶ್ರೀನಿವಾಸ್, ಅಭಿನಂ ಭೈರವ್, ಮಹೇಶ್ ಸಂಗಡಿಗರಿಂದ ಜಾನಪದ ಗೀತ ಗಾಯನ ಹಾಗೂ ಲಯನ್ ಸಂಸ್ಥೆಯ ಶಾಲಾ ಮಕ್ಕಳು ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

(ಫೋಟೋ ಕ್ಯಾಫ್ಷನ್‌)

ಕನಕಪುರದಲ್ಲಿ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...