ಗದಗ: ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ, ಪುರಾಣ ಪ್ರಾರಂಭೋತ್ಸವದ ಸಂದರ್ಭ ಘಟಸ್ಥಾಪನೆ ಧಾರ್ಮಿಕವಾಗಿ ಅಷ್ಟೇ ಅಲ್ಲ, ಸೃಷ್ಟಿಯಲ್ಲಿ ಕೃಷಿಗೂ ಸಹ ದಿಕ್ಸೂಚಿಯಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೈತ್ರಿ ಹೇಳಿದರು.
ಘಟಸ್ಥಾಪನೆಗೆ ಹಾಕಿದ ನವ ಧಾನ್ಯಗಳಲ್ಲಿ ಯಾವ ಬಗೆಯ ಧಾನ್ಯ ಹೆಚ್ಚು ಫಲವತ್ತಾಗಿ ವಿಸ್ತರಿಸಿಕೊಂಡಿದೆಯೂ ಆ ವರ್ಷ ಆ ಧಾನ್ಯದ ಬೆಳೆ ಉತ್ತಮ ಫಸಲು ನೀಡಬಲ್ಲದು ಎಂದು ನಂಬಿರುವ ರೈತರು ಈ ಸಂಕೇತ ಬಳಸಿಕೊಂಡು ಕೃಷಿ ಮಾಡುವರು ಎಂದು ನೈಸರ್ಗಿಕ, ವೈಜ್ಞಾನಿಕ ಕಾರಣ ನೀಡಿದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ಚರ ಸ್ವಾಮೀಜಿ ಹೊಸಳ್ಳಿಮಠ ಮಾತನಾಡಿದರು. ಜ. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ಜರುಗಿತು. ಚನ್ನಬಸಯ್ಯ ಶಾಸ್ತ್ರೀ ಹೇಮಗಿರಿಮಠ ಪುರಾಣ ಪಠಣ ಮಾಡಿದರು. ಸುಕ್ರುಸಾಬ್ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಬಿ. ಭಜಂತ್ರಿ ಅವರಿಂದ ಸಂಗೀತ ಜರುಗಿತು.ಉಸಿರು ಫೌಂಡೇಶನ್ ಅಧ್ಯಕ್ಷ ಶರಣ ಪಾಟೀಲ, ರೇಣುಕಾ ಪಾಟೀಲ ಸೇರಿದಂತೆ ಜಾತ್ರಾ ಮಹೋತ್ಸವದ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಇದ್ದರು. ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ ಸ್ವಾಗತಿಸಿದರು. ಪ್ರಸಾದ ಸೇವೆಯನ್ನು ಎ.ಎಂ.ವಿರಕ್ತಮಠ, ರಾಕೇಶ ದಾಸರಿ, ಎಸ್.ಎಸ್. ಸಜ್ಜನರ, ಶೋಭಾ ದಶವಂತ, ರೇಖಾ ಜಿರಾಳ, ಪಿ.ಟಿ. ನಾರಾಯಣಪೂರ, ಸಿದ್ಧಲಿಂಗಪ್ಪ ಕೋಟಿ, ಅತಿಶ ಖಂಡಪ್ಪಗೌಡ್ರ ವಹಿಸಿಸಿದ್ದರು. ಯು.ಆರ್. ಭೂಸನೂರಮಠ ನಿರೂಪಿಸಿದರು. ಆರ್.ಎಫ್. ಅಗಸಿಮನಿ ವಂದಿಸಿದರು.