ಕೆವಿಕೆಯಲ್ಲಿ ಇನ್‌ಕ್ಯೂಬೇಷನ್‌ ಕೇಂದ್ರ ಸ್ಥಾಪನೆ: ಕೆಪೆಕ್‌ ಎಂಡಿ ಶಿವಪ್ರಕಾಶ್‌

KannadaprabhaNewsNetwork |  
Published : Dec 20, 2025, 01:15 AM IST
ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯ ಕ್ಯಾಂಪಸ್‌ನಲ್ಲಿ ತೆರೆಯಲಾಗಿರುವ ಇನ್‌ಕ್ಯೂಬೇಷನ್‌ ಸೆಂಟರ್‌ ಬಗ್ಗೆ ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌. ಶಿವಪ್ರಕಾಶ್‌ ಅವರು ಶಾಸಕಿ ನಯನಾ ಮೋಟಮ್ಮ ಅವರಿಗೆ ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ. ಆರ್‌.ಸಿ. ಜಗದೀಶ್‌, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಇದ್ದರು. | Kannada Prabha

ಸಾರಾಂಶ

ಮೂಡಿಗೆರೆ, ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುತ್ತಿರುವ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್‌) ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರವನ್ನು ತೆರೆದಿದೆ.

ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುತ್ತಿರುವ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್‌) ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರವನ್ನು ತೆರೆದಿದೆ.

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಶುಕ್ರವಾರ ಈ ಕೇಂದ್ರವನ್ನು ಉದ್ಘಾಟಿಸಿ ವೀಕ್ಷಿಸಿದರು. ಬಳಿಕ ನಡೆದ ಸಮಾರಂಭ ದಲ್ಲಿ ಮಾತನಾಡಿದ ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌. ಶಿವಪ್ರಕಾಶ್‌, ಹೊಸ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರಾರಂಭಿಸಲು ನವೋದ್ಯಮಿಗಳಿಗೆ, ಪ್ರಗತಿಪರ ರೈತರಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಅಗತ್ಯ ಇರುವ ನೆರವು ಮತ್ತು ಸಹಾಯಹಸ್ತ ನೀಡುವ ಉದ್ದೇಶದಿಂದ ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 14 ಸಾಮಾನ್ಯ ಇನ್‌ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸ್ಥಾಪನೆ ಮಾಡಲಾಗಿರುವ ಸಾಂಬಾರ ಪದಾರ್ಥಗಳ ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರ ಇಂದು ಉದ್ಘಾಟನೆಗೊಂಡಿದೆ ಎಂದು ಹೇಳಿದರು.

ಇಲ್ಲಿ ಸಾಂಬಾರು ಪದಾರ್ಥಗಳ ಗ್ರೇಡಿಂಗ್‌ ಘಟಕ ತೆರೆಯಲಾಗಿದೆ. ಇದರಲ್ಲಿ ಬಿಸಿ ನೀರಿನ ಉಪಚಾರ ಘಟಕ, ಸಾಂಬಾರು ಪದಾರ್ಥಗಳ ಪೀಲಿಂಗ್‌ ಯಂತ್ರ, ಕಲರ್‌ ಸಾರ್ಟಿಂಗ್‌, ಪ್ಯಾಕೇಜಿಂಗ್, ಗಾತ್ರ ವಿಂಗಡಣೆ ಯಂತ್ರಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಪಾಲಿಟನಲ್‌ ಡ್ರೈಯರ್‌, ಶೀತಲ ಘಟಕ, ಸಾಂಬಾರು ಪದಾರ್ಥಗಳ ಪೌಡರ್‌ ಘಟಕ, ಇಲ್ಲಿ ಪುಡಿ ಮಾಡುವ ಯಂತ್ರ, ಕಸ ವಿಂಗಡಿಸುವ ಯಂತ್ರ, ಡ್ರಮ್‌ ರೋಸ್ಟರ್‌, ಮಿಕ್ಸಿಂಗ್‌ ಮತ್ತು ಪ್ಯಾಕಿಂಗ್‌ ಹಾಗೂ ಪ್ರಯೋಗಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ತೋಟಗಾರಿಕೆ ಮಹಾವಿದ್ಯಾಲಯ ಜಾಗ ನೀಡಿದ್ದರಿಂದ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಸಾಮಾನ್ಯ ಇನ್‌ಕ್ಯೂ ಬೇಷನ್ ಸೆಂಟರ್‌ ಸ್ಥಾಪನೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ತಮ್ಮ ಊರುಗಳಲ್ಲಿ ಕಿರು ಆಹಾರ ಸಂಸ್ಕರಣಾ ಘಟಕ ನಿರ್ಮಾಣ ಮಾಡಿ, ತಮ್ಮದೆ ಬ್ರಾಡಿಂಗ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡಬಹುದು. ಇದರಿಂದ ಹೆಚ್ಚು ಆದಾಯ ಪಡೆಯ ಬಹುದು. ಇದಕ್ಕೆ ಬೇಕಾದ ಆರ್ಥಿಕ ನೆರವು ಕೆಪೆಕ್‌ ನೀಡುತ್ತಿದೆ ಎಂದು ಹೇಳಿದರು.

ಫಾರ್ಮರ್‌ ಪ್ರೋಡೂಜರ್ಸ್‌ ಆರ್ಗನೈಜರ್ಸ್ (ಎಫ್‌ಪಿಓ) ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರ ತೆರೆಯುವುದಾದರೆ ಶೇ. 30 ರಷ್ಟು ಸಬ್ಸಿಡಿಯನ್ನು ಕೆಫೆಕ್‌ ನೀಡುತ್ತದೆ. ಅಂದರೆ ₹10 ಕೋಟಿ ಯೋಜನಾ ವೆಚ್ಚ ಇದ್ದರೆ, ₹3 ಕೋಟಿಯನ್ನು ನಿಗಮದಿಂದ ನೀಡಲಾಗುವುದು. ಜತೆಗೆ ತಜ್ಞರ ಸಲಹೆಗಳನ್ನು ಕಾಲ ಕಾಲಕ್ಕೆ ನೀಡಲಾಗುವುದು ಎಂದರು.

ಸುಮಾರು ₹10 ಲಕ್ಷ ವೆಚ್ಚದಲ್ಲಿ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲು ಪಿಎಂಎಫ್ಎಂಇ ಯೋಜನೆಯಡಿ ಕೇಂದ್ರ ಸರ್ಕಾರ ಶೇ. 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ಸಬ್ಸಿಡಿ ನೀಡಲಿದೆ. ಕೆಪೆಕ್‌ ಸಂಸ್ಥೆಯಿಂದ ಸಹಾಯ ಧನ ಪಡೆಯಲು ಅಪೇಕ್ಷಿಸುವವರ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು, ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದ ಅವರು, ₹30 ಲಕ್ಷ ರು. ಘಟಕ ಸ್ಥಾಪನೆ ಮಾಡುವವರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಹೇಳಿದರು.

19 ಕೆಸಿಕೆಎಂ 2ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯ ಕ್ಯಾಂಪಸ್‌ನಲ್ಲಿ ತೆರೆಯಲಾಗಿರುವ ಇನ್‌ಕ್ಯೂಬೇಷನ್‌ ಸೆಂಟರ್‌ ಬಗ್ಗೆ ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌. ಶಿವಪ್ರಕಾಶ್‌ ಶಾಸಕಿ ನಯನಾ ಮೋಟಮ್ಮ ಅವರಿಗೆ ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ. ಆರ್‌.ಸಿ. ಜಗದೀಶ್‌, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!