ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಯಾವುದೇ ಸಮಯದಲ್ಲಾದ್ರೂ ಅಗ್ನಿ ಅವಘಡಗಳು ಸಂಭವಿಸುವುದು ಮಾಮೂಲು. ಇಂತಹ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದರೆ ಒಂದಷ್ಟು ಹಾನಿ ಕಡಿಮೆ ಮಾಡಬಹುದು. ಆದರೆ ದೇವರಹಿಪ್ಪರಗಿ ಹಾಗೂ ಆಲಮೇಲ ಹೊಸ ತಾಲೂಕುಗಳು ರಚನೆಯಾಗಿ 12 ವರ್ಷ ಕಳೆದರೂ ಇನ್ನೂ ಇಲ್ಲಿ ಅಗ್ನಿಶಾಮಕ ಠಾಣೆಗಳೇ ಮಂಜೂರಾಗಿಲ್ಲ.
ಇದರಿಂದಾಗಿ ಮನೆ, ವಾಣಿಜ್ಯ ಸಂಕೀರ್ಣ, ಅಗ್ನಿ ಆಕಸ್ಮಿಕ ಮತ್ತಿತರ ಕಡೆಗಳಲ್ಲಿ ಅವಘಡಗಳು ಸಂಭವಿಸಿದಾಗ ಹಳೆ ತಾಲೂಕು ಕೇಂದ್ರಗಳಿಂದಲೇ ಅಗ್ನಿಶಾಮಕ ಸಿಬ್ಬಂದಿ ಬರಬೇಕು. ಸಿಂದಗಿ ತಾಲೂಕಿನಿಂದ ದೇವರಹಿಪ್ಪರಗಿ ತಾಲೂಕಿನ ಕೊನೆಯ ಹಳ್ಳಿ 90 ಕಿ.ಮೀ ದೂರದಲ್ಲಿದೆ. ಗಡಿ ಗ್ರಾಮಗಳಿಗೆ ತೆರಳಬೇಕೆಂದರೆ 80 ಕಿ.ಮೀ ದೂರ ಹೋಗಬೇಕು. ಆದ್ದರಿಂದ ಹೊಸ ತಾಲೂಕು ಕೇಂದ್ರಗಳಲ್ಲಿಯೂ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕು ಎಂಬ ಬೇಡಿಕೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇನ್ನೂ ಸ್ಪಂದಿಸಿಲ್ಲ.ಇದ್ದ ಠಾಣೆಯಲ್ಲೂ ಸಿಬ್ಬಂದಿ ಕೊರತೆ:
ಸಿಂದಗಿ ಅಗ್ನಿಶಾಮಕ ಠಾಣೆಯಲ್ಲಿ ಈಗಿರುವ 15 ವರ್ಷದ ಹಳೆಯ ಅಗ್ನಿಶಾಮಕ ವಾಹನಗಳ ಬರುವ ಏಪ್ರಿಲ್‌ನಲ್ಲಿ ನೋಂದಣಿ ಕೊನೆಗೊಳ್ಳಲಿದೆ. ಮೊದಲೇ ವಾಹನದಲ್ಲಿ ಪಂಪ್ ವ್ಯವಸ್ಥೆ ಸರಿ ಇಲ್ಲ, ತುಂಬಾ ಹಳೆಯದಾದ ವಾಹನ ಮೂಲೆ ಸೇರಲಿದೆ. ಹಳೆಯ ವಾಹನದಿಂದ ಮೂರು ತಾಲೂಕುಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಸಮಸ್ಯೆಯಾಗುತ್ತದೆ. ಹೀಗಾಗಿ, ಪ್ರತಿ ತಾಲೂಕು ಕೇಂದ್ರಕ್ಕೆ ಹೊಸ ಅಗ್ನಿಶಾಮಕ ವಾಹನ ಹಾಗೂ ಸಿಂದಗಿ ಪಟ್ಟಣಕ್ಕೆ ಹೊಸ ವಾಹನಗಳ ಅವಶ್ಯಕತೆ ಇದೆ. ದೇವರಹಿಪ್ಪರಗಿ ತಾಲೂಕು ಕೇಂದ್ರಕ್ಕೆ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಜಾಗ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಂದಗಿ ಅಗ್ನಿಶಾಮಕ ಠಾಣೆ ಅಧಿಕಾರಿ ಪೂಜಾರಿ ಹೇಳುತ್ತಿದ್ದಾರೆ.
ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕ
ಕಾಸಪ್ಪ ಜಮಾದಾರ. ಪಪಂ ಸದಸ್ಯ ದೇವರಹಿಪ್ಪರಗಿ