ಬಸ್ತಿಮಠದ ಸರ್ಕಾರಿ ಶಾಲಾ ಆವರಣದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ರಾಜಕುಮಾರ್ ಗೆ ಬೀಳ್ಕೊಡುಗೆ
ಉದ್ಯೋಗದಲ್ಲಿ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾಬೆನ್ನಿ ತಿಳಿಸಿದರು.
ಭಾನುವಾರ ಬಸ್ತಿಮಠದ ಸರ್ಕಾರಿ ಶಾಲಾ ಆವರಣದಲ್ಲಿ ಬಾಲವಿಕಾಸ ಸಮಿತಿ ಹಾಗೂ ಗ್ರಾಮಸ್ಥರಿಂದ ನಿವೃತ್ತರಾದ ಮುಂಡೊಳ್ಳಿ ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ರಾಜಕುಮಾರ್ ಖಂಡೋಜಿ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಂಡೊಳ್ಳಿಯ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಿದ ಶ್ಯಾಮಲ ಅವರ ಸೇವೆ ಅನನ್ಯವಾಗಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಅತಿಥಿಯಾಗಿದ್ದ ಸಿಡಿಪಿಒ ಇಲಾಖೆ ಮೇಲ್ವೀಚಾರಕಿ ದಾಕ್ಷಾಯಿಣಿ ಬಾಯಿ ಮಾತನಾಡಿ, ಮೇ 31 ರಂದು ನಿವೃತ್ತರಾದ ಶ್ಯಾಮಲ ರಾಜಕುಮಾರ್ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಯಾಗಿದ್ದಾರೆ. ಶ್ಯಾಮಲ ಅವರು ತಮ್ಮ ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುತ್ತದೆ. ಅವರ ಸೇವೆಯಲ್ಲಿ ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಯೋಗೀಶ್, ಶೃತಿ, ನಾಗರಾಜ ದೊಡ್ಡಮನಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.