- ಜೈವಿಕ ಅನಿಲ ಸೃಷ್ಟಿಸಿದ ಮಾಂತ್ರಿಕತೆ: 300 ಕುಟುಂಬಗಳಲ್ಲಿ ಇಂಧನ ಸ್ವಾವಲಂಬನೆ
- ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಮತ್ತು ಟೈಟಾನ್‌ನೆರವು
- ಈ ಆರ್ಥಿಕ ವರ್ಷಕ್ಕೆ 200 ಕುಟುಂಬದ ಗುರಿಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಭಾಗದಲ್ಲಿ ಹೆಚ್ಚು ಸಮುದಾಯ ಆಧಾರಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಅಂಗ ಸಂಸ್ಥೆಯಾದ ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರವು ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಜೈವಿಕ ಅನಿಲ (ಬಯೋಗ್ಯಾಸ್) ಅಳವಡಿಕೆಗೆ ನೆರವಾಗಿರುವುದು ಇವತ್ತಿನ ಇಂಧನ ಅಭಾವವನ್ನು ಮರೆಸುತ್ತಿದೆ.
ಅಂತೆಯೇ ಅದೇ ತಾಲೂಕಿನ ಜೋಂಪನಹಳ್ಳಿಯ 53 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ನೆರವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 300 ಕುಟುಂಬಗಳಿಗೆ ಜೈವಿಕ ಅನಿಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದ ಸಂಸ್ಥೆಯು ಆ ಗುರಿ ಮುಟ್ಟಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಸುಮಾರು 200 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಜೈವಿಕ ಅನಿಲ ಅಳವಡಿಕೆಗೆ ಸುಮಾರು 10x15 ಅಡಿ ಸ್ಥಳಾವಕಾಶಬೇಕು ಮತ್ತು ಕನಿಷ್ಠ 2 ಹಸುಗಳು ಇರಬೇಕು. ಇವುಗಳ ಸಗಣಿ ಮೂಲಕ ಜೈವಿಕ ಅನಿಲ ತಯಾರಿಸಿ ಅಡುಗೆಗೆ ಬಳಸಿಕೊಳ್ಳಬಹುದು. ಗ್ಯಾಸ್‌ತಯಾರಾಗಿ ಉಳಿದ ಸಗಣಿಯನ್ನು ಗೊಬ್ಬರವಾಗಿಯೂ ರೈತರು ಬಳಸಿಕೊಳ್ಳಬಹುದು. ರೈತರಿಗೆ 3800 ರೂ. ಮಾತ್ರ ಪಡೆಯಲಾಗುತ್ತದೆ. ಉಳಿದ ಎಲ್ಲಾ ಹಣವನ್ನು ಟೈಟಾನ್‌ಮತ್ತು ವಿವೇಕ ಗ್ರಾಮೀಣ ಜೀವನಾಧಾರ ಸಂಸ್ಥೆ ಭರಿಸುತ್ತದೆ. ಈ ಎಲ್ಲಾ ಸೌಲಭ್ಯ ಇರುವುದರಿಂದ ಮತ್ತು ಸಿಮೆಎಣ್ಣೆ, ಗ್ಯಾಸ್, ಎಲೆಕ್ಟ್ರಿಕ್‌ಸ್ಟೌ ಮುಂತಾದ ಯಾವುದೇ ಮೂಲವನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ.
ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಅಡುಗೆ ಅನಿಲ ಬೇಕು ಎಂದರೂ ಒಂದು ಅಡುಗೆ ಅನಿಲ ಸಿಲಿಂಡರ್‌ಗೆ 900 ರೂ. ವೆಚ್ಚ ಮಾಡಬೇಕು. ಅದು ವರ್ಷಕ್ಕೆ 10,800 ರೂ. ಆಗುತ್ತದೆ. ಅಂತದ್ದು ಚಕ್ಕೂರು ಗ್ರಾಮದ 71 ಕುಟುಂಬಕ್ಕೆ ಎಷ್ಟಾಯಿತು? 7.66 ಲಕ್ಷ ರೂ. ಆಗುತ್ತದೆ. ಅಂದರೆ ಪ್ರತಿ ಕುಟುಂಬವು ಅಡುಗೆ ಅನಿಲ ಕೊರತೆಯ ತೊಂದರೆಗೆ ಆಳಗಾಗದೆ, ಉಳಿತಾಯವನ್ನೂ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.
ಚಕ್ಕೂರು ಗ್ರಾಮದಲ್ಲಿ 71 ಕುಟುಂಬ, ಜೋಂಪನಹಳ್ಳಿಯಲ್ಲಿ 53 ಕುಟುಂಬ, ಕೆ. ಯಡತೊರೆ ಗ್ರಾಮದಲ್ಲಿ 34 ಕುಟುಂಬ, ಮುಷ್ಕೆರೆಯಲ್ಲಿ 26 ಕುಟುಂಬ, ಬಾಚೇಗೌಡನಹಳ್ಳಿಯಲ್ಲಿ 20 ಕುಟುಂಬ, ಬನ್ನವಾಡಿಯಲ್ಲಿ 19 ಕುಟುಂಬ, ಅವರೆಗೆರೆಯಲ್ಲಿ 14 ಕುಟುಂಬ, ಕೈಲಾಸಪುರದಲ್ಲಿ 11 ಕುಟುಂಬ, ಹೊಸೂರು ಗ್ರಾಮದಲ್ಲಿ 10 ಕುಟುಂಬ, ಬಾವಿಕೆರೆಯಲ್ಲಿ 6 ಕುಟುಂಬ, ಹುಲ್ಮುಟ್ಲು ಗ್ರಾಮದಲ್ಲಿ 5 ಕುಟುಂಬ, ಮಲ್ಲಹಳ್ಳಿ, ವಡಕನಮಾಳ, ಬ್ರಹ್ಮಗಿರಿಹಾಡಿ, ಅಂಕನಾಥಪುರ ಹಾಡಿಯಲ್ಲಿ ತಲಾ 44, ನೆಮ್ಮನಹಳ್ಳಿ ಹಾಡಿಯಲ್ಲಿ 2, ಡಿ.ಬಿ. ಕುಪ್ಪೆ, ಕಡೇಗದ್ದೆ, ಗೋಳೂರು, ಮಾಚೂರು, ಹುಲ್ಲೇಮಾಳ, ಸರಗೂರು, ಚಿಕ್ಕಕೆರೆಯೂರು ಮತ್ತು ಎಂ.ಜಿ. ಹಳ್ಳಿ ಹಾಡಿಯ ತಲಾ ಒಂದು ಕುಟುಂಬಕ್ಕೆ ಜೈವಿಕ ಅನಿಲ ಸೌಲಭ್ಯ ಕಲ್ಪಿಸಲಾಗಿದೆ.
ಎಚ್.ಡಿ. ಕೋಟೆ ಮತ್ತು ಸರಗೂರು ಭಾಗದಲ್ಲಿ ಏಕಾಏಕಿ ಜೈವಿಕ ಅನಿಲದ ಬೇಡಿಕೆ ಹೆಚ್ಚಾಗಿದೆ. ಜೋಂಪನಹಳ್ಳಿಗೆ ಜೈವಿಕ ಅನಿಲ ಬಂದು ವರ್ಷದ ಮೇಲೆ ನಾಲ್ಕು ತಿಂಗಳಾಗಿದೆ. ಈ ಕುಟುಂಬಗಳು ಅಡುಗೆಗೆ ಗ್ಯಾಸ್‌ಸಿಲಿಂಡರ್‌ಅವಲಂಬಿಸಿಲ್ಲ. ಇದನ್ನು ನೋಡಿದ ಅನೇಕ ಕುಟುಂಬಗಳು ತಮಗೂ ಜೈವಿಕ ಅನಿಲ ಅಳವಡಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ.
ನಾವು ಸೇರಿದಂತೆ ಅನೇಕರು ಕಳೆದ ಹತ್ತು ತಿಂಗಳಿಂದ ಒಂದೇ ಒಂದು ಗ್ಯಾಸ್‌ಸಿಲಿಂಡರ್‌ತೆಗೆದುಕೊಂಡಿಲ್ಲ. ಜೈವಿಕ ಅನಿಲ ಅದ್ಭುತವಾಗಿ ಕೆಲಸ ಮಾಡುತ್ತಿದೆ. ನಮಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇದರ ಜೊತೆಗೆ ಬಲ್ಪ್‌ನೀಡುವಂತೆಯೂ ಸಂಸ್ಥೆಗೆ ಕೋರಿದ್ದೇವೆ. ಕೊಟ್ಟಿಗೆ ಮತ್ತು ಮನೆಗೆ ಅನುಕೂಲವಾಗುತ್ತದೆ. ನಮ್ಮ ಗ್ರಾಮದ ಅನೇಕರ ಬಳಿ ಎರಡಕ್ಕಿಂತ ಹೆಚ್ಚು ಹಸುಗಳು ಇರುವುದರಿಂದ ಸಗಣಿ ವ್ಯರ್ಥವಾಗುತ್ತದೆ. ಆದ್ದರಿಂದ ಬಲ್ಪ್‌ನೀಡಿದರೆ ಅನುಕೂಲವಾಗುತ್ತದೆ. ಗ್ರಾಮದಲ್ಲಿ ಈಗಾಗಲೇ 70 ಮನೆಗೆ ಸಂಪರ್ಕವಿದ್ದು, ಹೊಸದಾಗಿ 50ಕ್ಕೆ ಬೇಡಿಕೆ ಬಂದಿದೆ. ಈ ಪೈಕಿ 25 ಕುಟುಂಬಕ್ಕೆ ಈ ವರ್ಷ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.- ಧರಣೇಂದ್ರ, ಚಕ್ಕೂರು, ಎಚ್.ಡಿ. ಕೋಟೆ ತಾಲೂಕು
ಸರಿಸುಮಾರು 50 ಕುಟುಂಬಗಳಿಗೆ ಜೈವಿಕ ಅನಿಲದ ಸಂಪರ್ಕ ದೊರಕಿದೆ. ನಮಗೆ 2024ರ ನವೆಂಬರ್‌ನಲ್ಲಿ ಸಂಪರ್ಕ ದೊರಕಿತು. ಈವರೆಗೆ ಯಾವುದೇ ಸಮಸ್ಯೆ ಇಲ್ಲ. ಸಣ್ಣಪುಟ್ಟ ರಬ್ಬರ್‌ಹೋಗಿದ್ದರೆ ಅವರೇ ಅವುಗಳ ನಿರ್ವಹಣೆಯನ್ನೂ ಮಾಡುತ್ತಾರೆ. ಹೊಸದಾಗಿ ಬೇಡಿಕೆ ಹೆಚ್ಚಾಗಿದೆ. ಅದನ್ನು ವಿವೇಕಾನಂದ ಸಂಸ್ಥೆಯವರ ಗಮನಕ್ಕೆ ತಂದಿದ್ದೇನೆ.- ಯೋಗಾನಂದ, ಜೋಂಪನಹಳ್ಳಿ, ಎಚ್.ಡಿ. ಕೋಟೆ ತಾಲೂಕು