ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶಗಳಿವೆ: ಅಮ್ರೀನ್ ಸುಲ್ತಾನಾ

KannadaprabhaNewsNetwork |  
Published : Nov 13, 2025, 12:45 AM IST
ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಕಡೂರು ಕಾನ್ಫಿಡೆಂಟ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮವನ್ನು ಜೆಎಂಎಫ್ ಸಿ  ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ಉದ್ಘಾಟಿಸಿದರು. ಹೆಚ್ಚುವರಿ ನ್ಯಾಯಾಧೀಶ ತಹ ಖಲೀಲ್ ಪ್ರಾಚಾರ್ಯ ಸಂತೋಷ್ ಕುಮಾರ್, ಉಪನ್ಯಾಸಕರಾದ ಚೇತನ್, ಅಭಿಷೇಕ್ ಮತ್ತು ವಿದ್ಯಾರ್ಥಿಗಳು ಇದ್ದರು | Kannada Prabha

ಸಾರಾಂಶ

ಕಡೂರುಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶಗಳಿವೆ ಎಂಬುದನ್ನು ನೆನಪಿಸುವುದೇ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತಿದೆ ಎಂದು ಕಡೂರು ಜೆಎಂಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶಗಳಿವೆ ಎಂಬುದನ್ನು ನೆನಪಿಸುವುದೇ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತಿದೆ ಎಂದು ಕಡೂರು ಜೆಎಂಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ತಿಳಿಸಿದರು.

ಪಟ್ಟಣದ ಕಾನ್ಫಿಡೆಂಟ್ ಪಿಯು ಕಾಲೇಜಿನಲ್ಲಿ ಸೋಮವಾರ ಕಾನೂನು ಸೇವಾಪ್ರಾಧಿಕಾರದಿಂದ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ನ.9ರಂದು ಕಾನೂನು ಸೇವಾ ದಿನ ಆಚರಣೆ ರೂಢಿಯಲ್ಲಿದೆ, 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ದಿನ ಇದಾಗಿದೆ. ಬಲಿಷ್ಠರಿಗೆ, ಹಣ ವಿದ್ದವರಿಗೇ ನ್ಯಾಯ ದೊರೆ ಯುತ್ತದೆ ಎನ್ನುವ ಹುಸಿನುಡಿ ಬದಲಿಸಲು ಆಕ್ಟ್ 42ನ್ನು ತಿದ್ದುಪಡಿ ಮಾಡಿ 39ಎ ಅನುಷ್ಠಾನ ಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆ ಒದಗಿಸುವ ವ್ಯವಸ್ಥೆ ಜಾರಿಗೆ ಬಂದಿತು. ಪ್ರಾಧಿಕಾರ ಮಹಿಳೆ, ಮಕ್ಕಳು, ಅಂಗವಿಕಲರು ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ, ಮಾನವ ಕಳ್ಳಸಾಗಣೆಗೆ ತುತ್ತಾದವರು ಇಂತಹವರಿಗೆ ಸೇವಾ ಪ್ರಾಧಿಕಾರದಡಿ ಉಚಿತ ಕಾನೂನು ನೆರವು ದೊರೆಯುತ್ತದೆ ಎಂದು ಮಾಹಿತಿ ನೀಡಿದರು.ಕಾನೂನು ಅರಿವು ಇದ್ದರೆ ಯಾರಿಂದಲೂ ಮೋಸ ಹೋಗಲು ಸಾಧ್ಯವಿಲ್ಲ. ಆಧುನಿಕ ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು ಮಕ್ಕಳಿಂದ ದೊಡ್ಡವರವರೆಗೆ ಕನಿಷ್ಠ ಕಾನೂನು ಅರಿವು ಮೂಡಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾನೂನು ಅಭ್ಯಾಸ ಮಾಡಿ ಅಥವಾ ತಿಳಿದು ತಮ್ಮ ನೆರೆಹೊರೆಯವರಿಗೂ ನೆರವಾಗಬಹುದು. ಅಪರಾಧ ತಡೆಯಲು ಸಾರ್ವಜನಿಕರು ಸಹಕರಿಸಬೇಕು. ವಿದ್ಯಾರ್ಥಿನಿಯರು ಎಲ್ಲೇ ದೌರ್ಜನ್ಯ ಅಥವಾ ಅನೈತಿಕ ಚಟುವಟಿಕೆ ಕಂಡು ಬಂದರೆ ಸಂಬಂಧಿಸಿದ ಪೊಲೀಸ್ ಮತ್ತು ಕಾನೂನು ಪ್ರಾಧಿಕಾರದ ಮೊರೆ ಹೋಗಿ ನ್ಯಾಯ ದೊರಕಿಸಿಕೊಡುವುದಲ್ಲದೆ ಪರಿಹಾರ ಪಡೆಯಬಹುದು. ಜತೆಗೆ ಕಕ್ಷಿದಾರರು ಲೋಕ ಅದಾಲತ್ ಮೂಲಕ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಪ್ರಕರಣವನ್ನು ಸಲಹಾ ಮಧ್ಯಸ್ಥಿಕೆ ಮೂಲಕ ಸೌಹಾರ್ದಯುತ ಇತ್ಯರ್ಥ ಮಾಡಿಕೊಂಡು ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು. ಕಾಲೇಜು ಪ್ರಾಚಾರ್ಯ ಸಂತೋಷ್ ಕುಮಾರ್ ಮಾತನಾಡಿ, ಶಾಲಾ, ಕಾಲೇಜು ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವ ಸಲುವಾಗಿ ನ್ಯಾಯಾಲಯ ಹಾಗೂ ನ್ಯಾಯಾಧೀಶರೇ ನಮ್ಮ ಬಾಗಿಲಿಗೆ ಬಂದಿದ್ದಾರೆ. ಅವರು ಪ್ರಸ್ತಾಪಿಸಿದ ಅಂಶಗಳನ್ನು ಮನದಟ್ಟು ಮಾಡಿಕೊಂಡು ಕಾನೂನಿನ ಅರಿವು ಮೂಡಿಸಿಕೊಳ್ಳಿ ಎಂದರು.

ಜೆಎಂಎಫ್ ಸಿ ಹೆಚ್ಚುವರಿ ನ್ಯಾಯಾಧೀಶ ತಹ ಖಲೀಲ್, ಉಪನ್ಯಾಸ ಚೇತನ್, ಅಭಿಷೇಕ್ ಇದ್ದರು.10ಕೆಕೆಡಿಯು2 ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಕಡೂರು ಕಾನ್ಫಿಡೆಂಟ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮವನ್ನು ಜೆಎಂಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ಉದ್ಘಾಟಿಸಿದರು. ಹೆಚ್ಚುವರಿ ನ್ಯಾಯಾಧೀಶ ತಹ ಖಲೀಲ್ ಪ್ರಾಚಾರ್ಯ ಸಂತೋಷ್ ಕುಮಾರ್, ಉಪನ್ಯಾಸಕರಾದ ಚೇತನ್, ಅಭಿಷೇಕ್ ಮತ್ತು ವಿದ್ಯಾರ್ಥಿಗಳು ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು