ಎಲ್ಲರಿಗೂ ಹಣ ಹೂಡಿಕೆಯ ಚಿಂತನೆ ಅಗತ್ಯ

KannadaprabhaNewsNetwork |  
Published : Aug 01, 2025, 02:15 AM IST
ಸಂಗನಬಸವ ಕಾಲೇಜಿನಲ್ಲಿ ಹಣಕಾಸಿನ ಹೂಡಿಕೆ ಕುರಿತು ವಿಶೇಷ ಉಪನ್ಯಾಸ | Kannada Prabha

ಸಾರಾಂಶ

ಹೂಡಿಕೆಯ ಬಗ್ಗೆ ಜ್ಞಾನ ಇದ್ದ ಕೆಲವರು ಮಾತ್ರ ದೊಡ್ಡ ದೊಡ್ಡ ಕಂಪನಿಯಲ್ಲಿ ಲಕ್ಷಾಂತರ ರು. ಹೂಡಿಕೆ ಮಾಡಿ ಅದರಿಂದ ಜೀವನಪೂರ್ತಿ ಲಾಭದಾಯಕವಾಗಿರುತ್ತಾರೆ

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬರಿಗೂ ಹಣ ಖರ್ಚು ಮಾಡುವ ದಾರಿಗಳು ಸಾಕಷ್ಟಿವೆ. ಆದರೆ ಅದೇ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯಾರು ಚಿಂತನೆ ಮಾಡಲ್ಲ. ತುಂಬಾ ಜನರು ಸುಖಕರ ಜೀವನಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಆದರೆ ಅದೇ ಹೂಡಿಕೆಯ ಬಗ್ಗೆ ಜ್ಞಾನ ಇದ್ದ ಕೆಲವರು ಮಾತ್ರ ದೊಡ್ಡ ದೊಡ್ಡ ಕಂಪನಿಯಲ್ಲಿ ಲಕ್ಷಾಂತರ ರು. ಹೂಡಿಕೆ ಮಾಡಿ ಅದರಿಂದ ಜೀವನಪೂರ್ತಿ ಲಾಭದಾಯಕವಾಗಿರುತ್ತಾರೆ ಎಂದು ಹೂಡಿಕೆಯ ಸಲಹೆಗಾರ ವಿನೀತ ಮಠಪತಿ ಹೇಳಿದರು.

ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಿಂದ ಹಣಕಾಸಿನ ಯೋಜನೆ ಹಾಗೂ ಹೂಡಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣಕಾಸು ಹೂಡಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿ, ಹೂಡಿಕೆಗೆ ಸಂಬಂಧಿಸಿದಂತೆ ಎಫ್‌ಡಿ, ಆರ್‌ಡಿ, ಎಸ್‌ಐಪಿ, ಸ್ಟಾಕ್ ಮಾರ್ಕೆಟ್‌ಗಳ ಬಗ್ಗೆ ತಿಳಿಸಿದರು. ನೀವು ದುಡಿದು ಗಳಿಸಿದ ದುಡ್ಡನ್ನು ದುಡಿಸಿ ನೀವು ಹೂಡಿಕೆದಾರರಾಗಿ. ನಾವು ವಿಶ್ರಾಂತಿಯಲ್ಲಿದ್ದರೂ ನಮ್ಮ ಹಣ ದುಡಿತಾ ಇರಬೇಕು ಎಂದರು.

ಪ್ರಾಂಶುಪಾಲ ವೀರೇಶ.ಪಿ ಮಾತನಾಡಿ, ಉಪನ್ಯಾಸದ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಿ. ಉಳಿತಾಯ ಮಾಡಿ ಮಾಲೀಕರಾಗಿ ಆಗ ಮಾತ್ರ ನಮ್ಮ ದೇಶ ಆರ್ಥಿಕವಾಗಿ ಬಲಿಷ್ಠವಾಗುವುದು ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪವನಕುಮಾರ ಹಿರೇಮಠ ನಿರೂಪಿಸಿದರು. ಅಜಿತ ಪ್ಯಾಟಿ, ರಾಜಕುಮಾರ ಬಿರಾದಾರ, ರಮೇಶ ಮೇತ್ರಿ, ಶಿವಾನಂದ ಪುಟಗಿ, ಮಲ್ಲಿಕಾರ್ಜುನ ಹಿರೇಮಠ, ಜಗದೀಶ ಸಾತಿಹಾಳ, ಪ್ರಭಂಜನ ಜೋಶಿ, ಸಾವಿತ್ರಿ ಮಠದ, ಪರಿದಾ ಉಕ್ಕಲಿ, ಲಕ್ಷ್ಮಿ ಮನಮಿ, ಮಹಾನಂದ ಉಪ್ಪಿನ, ಸಿಂಧೂ ಬೇಳ್ಳೂಂಡಗಿ, ಬೋಧಕ ಸಿಬ್ಬಂದಿ ಹಾಗೂ ಪಿಯು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ