ಸಾಹಿತ್ಯ, ಸಂಸ್ಕೃತಿ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಸುಳಕೋಡೆ

KannadaprabhaNewsNetwork |  
Published : Apr 14, 2026, 02:45 AM IST
ನಗರದ ರಂಗಧಾಮದಲ್ಲಿ ಕನ್ನಡ ನುಡಿತೇರು–2026 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. | Kannada Prabha

ಸಾರಾಂಶ

ವಿದ್ಯಾಧರ ಕನ್ನಡ ಪ್ರತಿಷ್ಠಾನ ಹಾಗೂ ಪ್ರಜ್ವಲ್ ಟ್ರಸ್ಟ್ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ ಅಂಗವಾಗಿ ನಗರದ ರಂಗಧಾಮದಲ್ಲಿ ಕನ್ನಡ ನುಡಿತೇರು–2026 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕನ್ನಡ ನುಡಿತೇರು–2026 ಕಾರ್ಯಕ್ರಮ ಯಶಸ್ವಿ

ಕನ್ನಡಪ್ರಭ ವಾರ್ತೆ ಶಿರಸಿ

ವಿದ್ಯಾಧರ ಕನ್ನಡ ಪ್ರತಿಷ್ಠಾನ ಹಾಗೂ ಪ್ರಜ್ವಲ್ ಟ್ರಸ್ಟ್ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ ಅಂಗವಾಗಿ ನಗರದ ರಂಗಧಾಮದಲ್ಲಿ ಕನ್ನಡ ನುಡಿತೇರು–2026 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಬೆಳಗಾವಿ ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸ.ರಾ. ಸುಳಕೋಡೆ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿಸಲು ಎಲ್ಲರ ಸಹಕಾರ ಬೇಕು ಎಂದರು.ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಸಂಸ್ಥೆಯ ನಡೆದು ಬಂದ ದಾರಿಯನ್ನು ವಿವರಿಸಿದರು. ಪ್ರಜ್ವಲ್‌ ಟ್ರಸ್ಟ್‌ನ ಅಧ್ಯಕ್ಷೆ ಬಿಂದು ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಸುರೇಶ ಕೊರಕೊಪ್ಪ ಕನ್ನಡ ಸಾಹಿತ್ಯದ ವೈವಿಧ್ಯತೆ ಕುರಿತು ತಿಳಿಸಿದರು. ಡಾ. ಶ್ಯಾಮಲಾ ಪ್ರಕಾಶ ಹಾಗೂ ನಿರೂಪಕಿ ಗಿರಿಜಾ ಹೆಗಡೆ ಭಾಷಾ ಜ್ಞಾನ ಮತ್ತು ಸಾಹಿತ್ಯದ ಅಗತ್ಯತೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಧರ ಮುತಾಲಿಕ ದೇಸಾಯಿ ರಚಿಸಿದ ‘ವೈವಿಧ್ಯ’ ಲೇಖನ ಸಂಕಲನ ಮತ್ತು ಬಿಂದು ಹೆಗಡೆ ಅವರ ‘ಚಳಿಗಾಲದ ಚಿಮಣಿ’ ಕಥಾಸಂಕಲನ ಬಿಡುಗಡೆಗೊಂಡಿತು. ನಾಗರತ್ನಾ ಲೋಕೇಶ್ ಹಾಗೂ ಭವ್ಯಾ ಹಳೆಯೂರು ಕೃತಿಗಳ ಪರಿಚಯ ಮಾಡಿಕೊಟ್ಟರು.ನಂತರ ನಡೆದ ದಾಸವಾಣಿ ಹಾಗೂ ಸಮೂಹಗೀತೆ ಸ್ಪರ್ಧೆಗಳಲ್ಲಿ ಹಲವು ಪ್ರತಿಭೆಗಳು ಮೆರಗು ತೋರಿದವು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ವಿವಿಧ ಪ್ರಶಸ್ತಿಗಳ ಮೂಲಕ ಸನ್ಮಾನಿಸಲಾಯಿತು.ಸುನೀತಾ ಪ್ರಕಾಶ ದಾವಣಗೆರೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನುಭಾವ ಸಾಹಿತ್ಯ ವಿಹಾರದಲ್ಲಿ ಡಾ. ಶ್ಯಾಮಲಾ ಪ್ರಕಾಶ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಜಯ ವರ್ಗಾಸರ ಹಾರ್ಮೋನಿಯಂ ಮತ್ತು ಅಕ್ಷಯ ಭಟ್ಟ ತಬಲಾ ಸಹಕಾರ ನೀಡಿದರು. ಎಂ.ಇ.ಎಸ್. ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ‘ಪ್ರಸ್ತುತ’ ಕಿರು ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಸ್ವರ ಸಂವಾದಿನಿ ಹಾರ್ಮೋನಿಯಂ ಸೋಲೋ ಕೂಡ ಪ್ರೇಕ್ಷಕರ ಮನಗೆದ್ದಿತು.ಶೋಭಾ ಎಂ. ಪ್ರಾರ್ಥನೆ ಹಾಡಿದರು. ಕವಿತಾ ಭಟ್ಟ ವಾನಳ್ಳಿ ನಿರ್ವಹಿಸಿದರು. ಸರಸ್ವತಿ ಕಂಬಾರ ವಂದಿಸಿದರು.ಎರಡೂ ಸಂಸ್ಥೆಯ ಪದಾಧಿಕಾರಿಗಳಾದ ಪ್ರಶಾಂತ ಗೌಡ ಯರಗಟ್ಟಿ, ವೆಂಕಟೇಶ ಹೆಗಡೆ ಬೆಂಗಳೆ, ಅಂಕಿತ ಹೆಗಡೆ, ವಿಶ್ವನಾಥ ಹೆಗಡೆ ಕುಂಬ್ರಿ, ದತ್ತಾತ್ರೇಯ ಹೆಗಡೆ, ಸುಮಾ ಹೆಗಡೆ, ನಯನಾ ಹೆಗಡೆ, ಕ್ಷಮಾ ಹೆಗಡೆ, ಸುವರ್ಣ ಕಾನಗೋಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು