ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ
ಸಾಕ್ಷಿ ಶಿಕ್ಷಕರ ಬಳಗ ತನ್ನ ವಿಭಿನ್ನ ಕಾರ್ಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಗೊಳಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಶ್ರೀ ನಾಯ್ಕ ಹೇಳಿದರು. ತಾಲೂಕಿನ ಹೊರಭಾಗ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗವು ಹಮ್ಮಿಕೊಂಡ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಶಿಬಿರದಲ್ಲಿ ಹಾಡು, ಕತೆ ಕಟ್ಟುವುದು, ಚಿತ್ರಕಲೆ, ಪೇಂಟಿಂಗ್, ಇಂಗ್ಲಿಷ್ ಕಲಿಕೆ, ಮೋಜಿನ ಆಟಗಳು, ಯೋಗ ಪ್ರದರ್ಶನ, ಕ್ರಾಫ್ಟ್ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ಸಾಧ್ಯ. ನಮ್ಮಲ್ಲಿರುವ ವಿದ್ಯಾರ್ಜನೆಯನ್ನು ಉಪಯೋಗಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಇಂತಹ ಶಿಬಿರಗಳು ಸಹಾಯಕವಾಗಲಿದೆ ಎಂದರು. ಶಿಕ್ಷಕ ಪಿ.ಆರ್. ನಾಯ್ಕ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಂಜುಳಾ ಹರಿಕಾಂತ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಮಚಂದ್ರ ಹರಿಕಾಂತ, ಶಾರದಾ ಶರ್ಮಾ ,ರತ್ನಾಕರ ದೇಶಭಂಡಾರಿ, ಸುಭಾಷ ನಾಯ್ಕ ಮುಂತಾದವರಿದ್ದರು.
ಇದೇ ಸಂದರ್ಭ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕ, ಯೋಗ ಪಟು ಸಹರ್ಶ ಹರಿಕಾಂತರನ್ನು ಗೌರವಿಸಲಾಯಿತು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ವಿ.ಜಿ. ನಾಯ್ಕ, ಎಂ.ಎಸ್. ಹೆಗಡೆ, ಕೃಷ್ಣ ಅಂಬಿಗ, ಸಿ.ಡಿ. ಪಡುವಣಿ, ಜನಾರ್ಧನ ಹರನೀರು, ಮಂಜುಳಾ ಬಳಗು, ಗೀತಾ ಗೌಡ, ಪದ್ಮಾವತಿ ನಾಯ್ಕ, ಸಹ ಶಿಕ್ಷಕಿ ಜಯಶ್ರೀ ನಾಯ್ಕ ಮುಂತಾದವರು ಸಹಕರಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನಿವೃತ್ತ ದೈಹಿಕ ಶಿಕ್ಷಕಿ ಸಾಧನಾ ಬರ್ಗಿ ಕಲಿಕಾ ಸಾಮಗ್ರಿ ವಿತರಿಸಿದರು.ಮುಖ್ಯಾಧ್ಯಾಪಕ ಕೃಷ್ಣ ಹರಿಕಾಂತ ಸ್ವಾಗತಿಸಿದರು. ಸಾಕ್ಷಿ ಬಳಗದ ಸಂಚಾಲಕ ಜನಾರ್ದನ್ ಹರನೀರು ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವಿ.ಜಿ. ನಾಯ್ಕ ವಂದಿಸಿದರು.